ಮನೆ ಮನರಂಜನೆ ವಡಿವೇಲು‌,ಉದಯನಿಧಿ ಅಭಿನಯದ “ಮಾಮಣ್ಣನ್” ಸಿನಿಮಾ ಜು.27 ಓಟಿಟಿಗೆ

ವಡಿವೇಲು‌,ಉದಯನಿಧಿ ಅಭಿನಯದ “ಮಾಮಣ್ಣನ್” ಸಿನಿಮಾ ಜು.27 ಓಟಿಟಿಗೆ

0

ಚೆನ್ನೈ: ಮಾರಿ ಸೆಲ್ವರಾಜ್ ಅವರ “ಮಾಮಣ್ಣನ್” ಈ ವರ್ಷ ಕಾಲಿವುಡ್‌ ರಂಗದಲ್ಲಿ ಹೆಸರು ಮಾಡಿದ ಸಿನಿಮಾಗಳಲ್ಲೊಂದು. ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್‌ ಕಂಡು ಪ್ರೇಕ್ಷಕರ ಮನಗೆದ್ದ ಸಿನಿಮಾ ಇದೀಗ ಓಟಿಟಿಯಲ್ಲಿ ಸ್ಟ್ರೀಮ್‌ ಆಗಲು ಡೇಟ್‌ ಫಿಕ್ಸ್‌ ಆಗಿದೆ.

Join Our Whatsapp Group

 “ಮಾಮಣ್ಣನ್” ಒಂದು ಪೊಲಿಟಿಕಲ್‌ ಥ್ರಿಲ್ಲರ್‌ ಡ್ರಾಮಾ ಸಿನಿಮಾವಾಗಿದ್ದು, ಜೂ.29 ರಂದು ಥಿಯೇಟರ್‌ ನಲ್ಲಿ ರಿಲೀಸ್‌ ಆಗಿತ್ತು. ಕೆಳ ಜಾತಿಯ ಒಬ್ಬ ಎಂಎಲ್‌ ಎ(ವಡಿವೇಲು) ಅವರ ಮಗ ಅತಿವೀರನ್ (ಉದಯನಿಧಿ ಸ್ಟಾಲಿನ್) ಹಾಗೂ  ಉನ್ನತ ಜಾತಿಯ ಒಬ್ಬ ರಗಡ್ ರಾಜಕಾರಣಿ ರತ್ನವೇಲು (ಫಾಹದ್ ಫಾಸಿಲ್) ನಡುವೆ ಸಿನಿಮಾದ ಕಥೆ ಸಾಗುತ್ತದೆ. ಒಬ್ಬ ಎಂಎಲ್‌  ಎ ಆಗಿಯೂ ಉನ್ನತ ಜಾತಿಯವರ ಮುಂದೆ ಕೈಕಟ್ಟಿ ತಲೆಬಾಗಿ ನಿಂತುಕೊಂಡೇ ಇರುವ ನಿಯಮದ ವಿರುದ್ಧ ರಾಜಕೀಯವಾಗಿಯೇ ಹೋರಾಟವನ್ನು ಮಾಡುವ ಕಥೆಯನ್ನು ಬಹಳ ಎಂಗೇಜ್‌ ಆಗಿ ನಿರ್ದೇಶಕರು ಹೇಳಿದ್ದಾರೆ.

ಇಡೀ ಸಿನಿಮಾ ಒಂದು ಹಳ್ಳಿಯ ಹಿಂದಿನ ಕಾಲದ ಕಥೆ, ಪ್ರಸ್ತುತ ರಾಜಕೀಯ ಪ್ರತಿಷ್ಠೆ ಹಾಗೂ ಜಾತಿ ವ್ಯವಸ್ಥೆಯ ಸ್ಥಿತಿಯನ್ನು ತೋರಿಸುತ್ತದೆ. ವಡಿವೇಲು, ಫಾಹದ್‌ ಹಾಗೂ ಉದಯನಿಧಿ ಸ್ಟಾಲಿನ್ ಈ ಮೂರು ಜನರ ಪಾತ್ರಗಳು ಪ್ರೇಕ್ಷಕರ ಮನಗೆಲ್ಲುತ್ತದೆ.

ಸಿನಿಮಾ ಓಟಿಟಿಯಲ್ಲಿ ಪರದೆಯಲ್ಲಿ ಬರಲು ರೆಡಿಯಾಗಿದ್ದು, ಇದೇ ಜು.27 ರಂದು ನೆಟ್‌ ಫ್ಲಿಕ್ಸ್‌ ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ. ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

 “ಮಾಮಣ್ಣನ್” ಸಿನಿಮಾಕ್ಕೆ ಎಆರ್ ರೆಹಮಾನ್ ಅವರು ಮ್ಯೂಸಿಕ್‌ ನೀಡಿದ್ದು, ವಡಿವೇಲು ಹಾಡಿದ “ರಾಸ ಕಣ್ಣು” ಹಾಡು ಗಮನ ಸೆಳೆದಿತ್ತು.