ಮನೆ ರಾಜ್ಯ ವಾಲ್ಮೀಕಿ ನಿಗಮ ಅವ್ಯವಹಾರ ತನಿಖೆ ಸಿಬಿಐಗೆ ವಹಿಸಲಿ: ಶ್ರೀರಾಮುಲು

ವಾಲ್ಮೀಕಿ ನಿಗಮ ಅವ್ಯವಹಾರ ತನಿಖೆ ಸಿಬಿಐಗೆ ವಹಿಸಲಿ: ಶ್ರೀರಾಮುಲು

0

ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಖಂಡಿಸಿ ಬಳ್ಳಾರಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಪ್ರತಿಭಟನೆ ನಡೆಸಿತು. ಬಳ್ಳಾರಿ ಜಿಲ್ಲಾಧಿಕಾರಿ ಗೇಟ್ ಮುಂದೆ ಕುಳಿತು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದರು. ನ್ಯಾಯ ಸಿಗುವವರೆಗೂ ಇಲ್ಲಿಂದ ಹೋಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು, ಪ್ರಕರಣದ ಕಿಂಗ್ ಪಿನ್ ಯಾರು? ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ದಲಿತ ಅಹಿಂದ ಪರ ಎನ್ನುವ ಸಿದ್ದರಾಮಯ್ಯ ಪ್ರಕರಣ ಸಿಬಿಐಗೆ ವಹಿಸದೆ ಇದ್ದರೆ ಸಿದ್ದರಾಮಯ್ಯ ಮೇಲೆ ಅನುಮಾನ ಬರುತ್ತದೆ ಎಂದರು.

ಬಿಜೆಪಿ ಹೋರಾಟಕ್ಕೆ ಮಾತ್ರ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಹೊರತು ಆರೋಪವಿದೆ ಎಂದು ರಾಜೀನಾಮೆ ನೀಡಿಲ್ಲ. ವಾಲ್ಮೀಕಿ ಜನಾಂಗದ ಅಭಿವೃದ್ಧಿ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದ್ದಾರೆ. ಭ್ರಷ್ಟಾಚಾರ ಅಂದರೆ ಸಣ್ಣ ಪದ ಕಳ್ಳತನ ಮಾಡಿದ್ದಾರೆ ಎನ್ನುವದು ಸೂಕ್ತ. ಇದು ಒಬ್ಬರು ಇಬ್ಬರು ಮಾಡಿದ ಕಳ್ಳತನ ಅಲ್ಲ ಕಳ್ಳರ ಸಂತೆಯೇ ಇಲ್ಲಿ ಸೇರಿಕೊಂಡಿದೆ ಎಂದು ಸರ್ಕಾರದ ವಿರುದ್ಧ ರೋಷಾವೇಷದ ಮಾತುಗಳನ್ನಾಡಿದರು.

ಹಿಂದಿನ ಲೇಖನವೈಟ್ ಬೋರ್ಡ್​ನಲ್ಲಿ ಟ್ರಾವೆಲ್ಸ್; 40 ಕ್ಕೂ ಹೆಚ್ಚು ವಾಹನಗಳು ಸೀಜ್, 200ಕ್ಕೂ ಹೆಚ್ಚು ಕೇಸ್ ದಾಖಲು
ಮುಂದಿನ ಲೇಖನಗುಣಮಟ್ಟದ ಕಾಮಗಾರಿಗಳು ಸರಕಾರದ ಮೇಲಿನ ವಿಶ್ವಾಸ ಹೆಚ್ಚಿಸುತ್ತವೆ: ಸಚಿವ ಎನ್‌ ಎಸ್‌ ಭೋಸರಾಜು