ಮನೆ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮ: ವಿರೋಧ ಪಕ್ಷಗಳ ಸಂಪೂರ್ಣ ಕಲಾಪವನ್ನು ಕೇಳಿಸಿಕೊಂಡ ಸಿಎಂ ಸಿದ್ದರಾಮಯ್ಯ

ವಾಲ್ಮೀಕಿ ಅಭಿವೃದ್ಧಿ ನಿಗಮ: ವಿರೋಧ ಪಕ್ಷಗಳ ಸಂಪೂರ್ಣ ಕಲಾಪವನ್ನು ಕೇಳಿಸಿಕೊಂಡ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು : 16ನೇ ವಿಧಾನಸಭೆಯ ನಾಲ್ಕನೇ ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಪ್ರಕರಣ ಕುರಿತಂತೆ ಕಲಾಪದಲ್ಲಿ ಆಡಿದ ಪ್ರತೀ ಮಾತುಗಳನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಳಿಸಿಕೊಂಡರು.

Join Our Whatsapp Group

ಸೋಮವಾರ ಮಧ್ಯಾಹ್ನ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರಿಂದ ಮಂಗಳವಾರ ರಾತ್ರಿ ಜೆಡಿಎಸ್ ನ ಶಾರದಾ ಪೂರ್ಯಾನಾಯ್ಕ್ ಮತ್ತು ಬಿಜೆಪಿಯ ಅರವಿಂದ್ ಬೆಲ್ಲದ್ ಅವರು ಮಾತನಾಡುವವರೆಗೂ ಪ್ರತಿಯೊಬ್ಬರ ಮಾತನ್ನೂ ಕೇಳಿಸಿಕೊಂಡರು.

ಎರಡೂ ದಿನದಲ್ಲಿ ಆರ್.ಅಶೋಕ್ ಅವರ ಸುದೀರ್ಘ ನಾಲ್ಕು ಗಂಟೆಗಳ ಮಾತಿನ ಸಮೇತ ಸ್ವಪಕ್ಷದವರ ಮತ್ತು ವಿರೋಧ ಪಕ್ಷದವರ ಮಾತುಗಳನ್ನು ಕೇಳಿಸಿಕೊಂಡರು.

ಕುಳಿತ ಜಾಗದಿಂದ ಕದಲದಂತೆ ಶಾಂತಚಿತ್ತವಾಗಿ ಪ್ರತಿಯೊಬ್ಬರ ಮಾತನ್ನೂ ‘ಪಿನ್ ಟು ಪಿನ್’ ಕೇಳಿಸಿಕೊಂಡ ಸಿದ್ದರಾಮಯ್ಯ ಅವರು, ಕಲಾಪದ ನಡುವೆ ವಿರೋಧ ಪಕ್ಷದವರ factual errors ಗಳನ್ನು ಕುಳಿತಲ್ಲೇ ತಿದ್ದುತ್ತಾ ಮುತ್ಸದ್ದಿತನ‌ ಮೆರೆದರು.

ವಿರೋಧ ಪಕ್ಷದವರ ಎಂಟತ್ತು ಗಂಟೆಗಳ ಆರೋಪ, ದಾಳಿ, ಆಕ್ರೋಶದ ನುಡಿಗಳನ್ನು ಬಹುತೇಕ ಎಲ್ಲವನ್ನೂ ಹೆಚ್ಚಿನ ಅಡ್ಡಿ ಪಡಿಸದೆ ಮುಖ್ಯಮಂತ್ರಿಗಳು ಮತ್ತು ಆಡಳಿತ ಪಕ್ಷದ ಸದಸ್ಯರು ಆಲಿಸಿ ಸದನದ ಘನತೆ ಹೆಚ್ಚಿಸಿದರು.

ವಾಲ್ಮೀಕಿ ನಿಗಮ ಪ್ರಕರಣದ ವಿರೋಧ ಪಕ್ಷದವರ ಎಲ್ಲಾ ಆರೋಪ ಮತ್ತು ಮಾತುಗಳಿಗೆ ಮುಖ್ಯಮಂತ್ರಿಗಳು ಗುರುವಾರ ಉತ್ತರ ನೀಡಲಿದ್ದಾರೆ.