ಕಾಸರಗೋಡು: ಕೇರಳದಲ್ಲಿ ಹೊಸದಾಗಿ ಆರಂಭಿಸಲಾದ “ವಂದೇ ಭಾರತ್ ಎಕ್ಸ್ ಪ್ರೆಸ್’ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿರುವ ಘಟನೆ ಮಲಪ್ಪುರಂ ಜಿಲ್ಲೆಯ ತಿರೂರ್ ಸಮೀಪ ಸೋಮವಾರ ಸಂಜೆ ನಡೆದಿದೆ.
ಕಲ್ಲುಗಳು ರೈಲಿನ ಕೆಲವು ಕಿಟಕಿ ಗಾಜುಗಳ ಮೇಲೆ ಸಣ್ಣ ಗೀರುಗಳು ಬಿದ್ದಿವೆ. ಯಾರಿಗೂ ಗಾಯಗಳಾಗಿಲ್ಲ; ರೈಲು ತಿರುವನಂತಪುರಕ್ಕೆ ಪ್ರಯಾಣ ಮುಂದುವರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಎ. 25ರಂದು ರಾಜ್ಯದ ರಾಜಧಾನಿ ತಿರುವನಂತಪುರವನ್ನು ಉತ್ತರದ ಕೇರಳದ ಜಿಲ್ಲೆ ಕಾಸರಗೋಡಿನೊಂದಿಗೆ ಸಂಪರ್ಕಿಸುವ “ವಂದೇ ಭಾರತ್ ಎಕ್ಸ್ ಪ್ರೆಸ್’ ರೈಲಿಗೆ ಚಾಲನೆ ನೀಡಿದ್ದರು.














