ಮನೆ ಯೋಗಾಸನ ವಸಿಷ್ಠಾಸನ

ವಸಿಷ್ಠಾಸನ

0

      ‘ವಸಿಷ್ಠ ’ಎಂಬುದು ಒಬ್ಬ ಪ್ರಖ್ಯಾತನಾದ ಬ್ರಹ್ಮರ್ಷಿಯ ಹೆಸರು.ಈ ಮುನಿಯು ಸೂರ್ಯವಂಶದ ರಾಜರಿಗೆಲ್ಲ ಕುಲಗುರು. ಅಲ್ಲದೆ ಈತನು ‘ಮಂತ್ರಕೃತ್ ’(ಮಂತ್ರಗಳನ್ನು ರಚಿಸಿದವನು) ಮತ್ತು ಮಂತ್ರದ್ರಷ್ಟಾರನೂ (ವೇದಮಂತ್ರದೂಳಡಗಿರುವ  ತತ್ವವನ್ನು ತಿಳಿದವನು) ಹೌದು. ಋಗ್ವೇದದ ಏಳನೆಯ ಮಂಡಲದ  ಬ್ರಾಹ್ಮಣ ಮಂತ್ರಗಳು ಹುಟ್ಟಿದುದು ಈತನಿಂದಲೇ.ಕಶ್ಯಪ.ಅತ್ರಿ ಭಾರದ್ವಾಜ,ವಿಶ್ವಾಮಿತ್ರ,ಗೌತಮ, ಜಮದಗ್ನಿ ಮತ್ತು ವಶಿಷ್ಠ ಎಂಬ ಏಳು ಮಂದಿ ಬ್ರಹ್ಮರ್ಷಿಶ್ಮಗಳಲ್ಲಿ ಈ ವಶಿಷ್ಠ ಮಹರ್ಷಿಗೆ ಅಗ್ರಸ್ಥಾನ.‘ಸಪ್ತರ್ಷಿಮಂಡಲ’ವೆಂದು ಪ್ರಸಿದ್ಧವಾದ ಏಳು ನಕ್ಷತ್ರಗಳ ಗುಂಪಿನ ಮಧ್ಯಭಾಗದಲ್ಲಿ ಅತಿ ಪ್ರಕಾಶದಿಂದ ಹೊಳೆಯುವ ನಕ್ಷತ್ರವೇ ಈ ವಸಿಷ್ಠಮುನಿ ಎಂಬ ಪ್ರತ್ತಿತಿಯಿದೆ.

Join Our Whatsapp Group

     ಬ್ರಹ್ಮರ್ಷಿಯಾದ ವಸಿಷ್ಟನಿಗೂ ರಾಜರ್ಷಿಯಾದ ವಿಶ್ವಾಮಿತ್ರನಿಗೂ ಕಾರಣಾಂತರದಿಂದ ಸ್ಪರ್ಧೆ ಹುಟ್ಟಿ ಅವರ ನಡುವೆ ಹೋರಾಟ ನಡೆದು, ವಿಶ್ವಾಮಿತ್ರನು ವಶಿಷ್ಠ ಋಷಿಯ ಬ್ರಹ್ಮತೇಜೋಬಲದಿಂದ ಸೋಲನ್ನನುಭವಿಸಿದನ್ನು.  ಆ ಬಳಿಕ ಆತನು,‘ದಿಕ್ ಬಲಂ ಕ್ಷತ್ರಿಯ ಬಲಂ ಬ್ರಹ್ಮತೇಜೋಬಲಂ ಬಲಮ್ ಏಕೇನ   ಬ್ರಹ್ಮದಂಡೇನಯ ಸರ್ವಾಸ್ತ್ರಾಣಿ ಹತಾನಿ ಮೇ ‘ಬ್ರಹ್ಮ ತೇಜೋಬಲದೊಡನೆ ಹೊಲಿಸಿದರೆ ಕ್ಷತ್ರಿಯ ಬಲವು ಅತ್ಯಂತ ದುರ್ಬಲ ಎಂಬುದನ್ನು ಮನಗಾಣುತ್ತಾನೆ, ಏಕೆಂದರೆ ವಸಿಷ್ಠನ ಬ್ರಹ್ಮದಂಡ ವೂಂದರಿಂದಲೇ ವಿಶ್ವಾಮಿತ್ರನ ದಿವ್ಯಸ್ತ್ರಾಗಳು ನಾಶವಾದವು.ಈ ಕಾರಣದಿಂದ ಅಂರ್ಥ ಬ್ರಹ್ಮ ತೇಜಸ್ಸನ್ನು ತಾನೂ ಗಳಿಸಿ, ಆ ವಸಿಷ್ಠನಂತೇ ತಾನೂ ಬ್ರಹ್ಮ ರ್ಷಿಯಾಗಬೇಕೆಂದು  ಬಯಸಿ ಅನೇಕ ಸಹಸ್ವವರ್ಷಗಳ  ಕಾಲ ಘೋರವಾದ ತಪಸ್ಸನ್ನು ಆಚರಿಸಿ ಆ ಮೂಲಕ ವಿಶ್ವ ತಪಸ್ಸನ್ನಾಚರಿಸಿ, ಆ ಮೂಲಕ ವಿಶ್ವಾಮಿತ್ರನನ್ನು   ಬ್ರಹ್ಮಶ್ರೀಯಾದನ್ನು ಈ ಕಥೆಪುರಾಣ ಮತ್ತು ಇತಿಹಾಸಗಳಲ್ಲಿದೆ  ವಶಿಷ್ಠನೆಂಬ ಹೆಸರಿನ ಬ್ರಹ್ಮರ್ಷಿಳ್ಳಗಾಗಿ ಈ ಆಸನದ ಹೆಸರುನ್ನಃ ಮೀಸಲಾಗಿದೆ.

 ಅಭ್ಯಾಸ ಕ್ರಮ

1. ಮೊದಲು ತಾಂಡಾಸನದಲ್ಲಿ ನಿಲ್ಲಬೇಕು. ಬಳಿಕ ಮುಂಭಾಗಿ ಅಂಗೈಗಳನ್ನು ನೆಲದಮೇಲೂರಿ, ಅದೋಮುಖ ಶ್ವಾನಾಸನದಲ್ಲಿ ಮಾಡುವಂತೆ, ಕಾಲುಗಳನ್ನು ನಾಲ್ಕು ಐದು ಅಡಿಗಳಷ್ಟು ದೂರ ಹಿಂದಕ್ಕೆ ಸಲ್ಲಿಸಬೇಕು.

2.ಅನಂತರ,ದೇಹವೆಲ್ಲವನ್ನೂದಲ್ಲಿ ಇವೆಲ್ಲವನ್ನು ಬಲಪಕಕ್ಕೆ ತಿರುಗಿಸಿ ಅದನ್ನು ಬಲಗೈ ಮತ್ತು ಬಲಪಾತದ ಆಧಾರದಮೇಲೆ ಸಮತೋಲನ ಮಾಡಿ ನಿಲ್ಲಿಸಿ ಬಲ ಪಾದದ ಹೊರ ಬದಿಯನ್ನು ನೆಲದಮೇಲೆ ಸುಭದ್ರವಾಗಿ ಊರಿಡಬೇಕು. ಬಳಿಕ ಎಡಪಾದವನ್ನು ಬಲ ಪಾದದ ಮೇಲಿಟ್ಟು ಎಡದಂಗೈಯನ್ನು ಎಡವೃಷ್ಠದ ಮೇಲೊರಗಿಸಿ, ಶರೀರವನ್ನು ನೇರವಾಗಿಟ್ಟು, ಸಮತೋಲನ ಸ್ಥಿತಿಗೆ ತರಬೇಕು.ಈ ಬಗೆಯಲ್ಲಿ ಸಮತೋಲನಸ್ಥಿತಿಗೆ ತರುವುದನ್ನು ಕಲಿಯಲು ಬಲದಂಗಾಲನ್ನು ಗೋಡೆಗೆ ಒರಗಿಸಿಡಬೇಕು.

3. ಇದಾದಮೇಲೆ,ಉಸಿರನ್ನು ಹೊರಬಿಟ್ಟು,ಎಡಗಾಲನ್ನು ಬಂಡಿಯಲ್ಲಿ ಬಗ್ಗಿಸಿ, ದೇಹವನ್ನು ತುಸು ಮುಂದೆ ಸರಿಸಿ, ಬಳಿಕ ಎಡಗೈಯ ಹೆಬ್ಬೆರಳು, ತೋರಬೆರಳು ಮತ್ತು ನಡುಬೆರಳುಗಳಿಂದ ಎಡಪಾದದ ಉಂಗುಟವನ್ನು ಹಿಡಿದುಕೊಂಡು ಎಡತೋಳು, ಎಡಗಾಲುಗಳನ್ನು ನೇರವಾಗಿ ಮೇಲೆತ್ತಬೇಕು. ಕಾಲ್ಬೆರಳಿನ ಮೇಲಿನ ಬಿಗಿತವು ಸುಪ್ರಪಾದಾಗುಂಷ್ಠಾಸನದಲ್ಲಿ ವಿವರಿಸಿದ ರೀತಿಯಲ್ಲಿಯೇ ಇರಬೇಕು.ಈ ಭಂಗಿಯಲ್ಲಿ,ತೋಳು ಕಾಲುಗಳನ್ನು ಸ್ವಲ್ಪವೂ ಬಾಗಿಸಿದಂತೆ ನೇರವಾಗಿಸಿ ಆಳವಾಗಿ ಉಸಿರಾಟ ನಡೆಸುತ್ತ ಸುಮಾರು 20-30 ಸೆಕೆಂಡುಗಳ ಕಾಲ ನಡೆಸಬೇಕು.

4. ತರುವಾಯ ಕಾಲ್ಬೆರಳಿನ ಮೇಲಿನ ಬಿಗಿತವನ್ನು ಸಡಿಲಿಸಿ ಎಡಪಾದವನ್ನು ಮತ್ತೆ ಬಲಪಾದದ ಮೇಲಿರಿಸಿ. ಎಡಗೈಯನ್ನು ಎಡಪೃಷ್ಠದ  ಮೇಲೆ ಮತ್ತೆ ಇರಿಸಬೇಕು.

5. ಕೊನೆಯಲ್ಲಿ ಉಸಿರನ್ನು ಹೊರಬಿಟ್ಟು ದೇಹವನ್ನು ಸ್ವಲ್ಪ ಎಡಗಡೆಗೆ ವಾಲಿಸಿಟ್ಟು ಅದನ್ನು ಎಡಗೈ ಮತ್ತು ಎಡಪಾದದ ಮೇಲೆ ಮಾತ್ರ ಸಮತೋಲನಮಾಡಿ ನಿಲ್ಲಿಸಬೇಕು.ಈ ಕಡೆಯ ಭಂಗಿಯನ್ನು ಅಭ್ಯಸಿಸುವಾಗಲೂ ಮೇಲೆ ವಿವರಿಸಿದ ಕ್ರಮವನ್ನೇ ಅನುಸರಿಸಿ,ಅದರಲ್ಲಿ ಅಷ್ಟೇ ಕಾಲ ನೆಲೆಸಬೇಕು.ಈ ವಿವರಣೆಯಲ್ಲಿ ‘ಎಡ ’ಮತ್ತು ‘ಬಲ ’ಎಂಬ ಪದ ಗಳೆಡೆಯಲ್ಲಿ ‘ಬಲ’ ಮತ್ತು ‘ಎಡ’ಪದಗಳನ್ನು ಕ್ರಮವಾಗಿ ಅಳವಡಿಸಿ ಅದರಂತೆ ಅಭ್ಯಾಸ ಬೇಕು.

 ಪರಿಣಾಮಗಳು 

      ಈ ಆಸನವು ಮಣಿಕಟ್ಟುಗಳಿಗೆ ಬಲಕೊಡುತ್ತದೆ.ಕಾಲುಗಳಿಗೆ ತಕ್ಕ ವ್ಯಾಯಾಮ ಕಲ್ಪಿಸುತ್ತದೆ.ಅಲ್ಲದೆ ಬೆನ್ನೆಲುಬಿನ ಕೆಳಬದಿಯಲ್ಲಿನ ಕಾಕ್ಸಿಸ್ ಎಂಬ ತ್ರಿಕೋನಾಕಾರದ ತ್ರಿಕಾಸೀಯ ಪ್ರದೇಶಗಳಿಗೂ ಮತ್ತು ಲಂಬರ್ ಎಂಬ ಅದರ ತಳಭಾಗಗಳಿಗೂ ಒಳ್ಳೆಯ ಹುರುಪನ್ನು ಒದಗಿಸುತ್ತದೆ.