ರಾಮನಗರ: ವಾರಕ್ಕೆ 90 ಗಂಟೆ ಕೆಲಸ ಮಾಡುವಂತೆ ಎಲ್&ಟಿ ಮುಖ್ಯಸ್ಥ ಸುಬ್ರಮಣಿಯನ್ ಹೇಳಿಕೆ ಹಿನ್ನೆಲೆಯಲ್ಲಿ ಇದನ್ನು ಖಂಡಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದಾರೆ.
ರಾಮನಗರದ ಐಜೂರು ವೃತ್ತದಲ್ಲಿ ಸೋಮವಾರ (ಜ.13) ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗಿಗಳ ಆರೋಗ್ಯ ಹಾಳುಮಾಡಲು ಚಿಂತನೆ ಮಾಡುತ್ತಿದ್ದಾರೆ. ಉದ್ಯಮಿಗಳು ತಮ್ಮ ಆದಾಯ ಹೆಚ್ಚಿಸಿಕೊಂಡು ನೌಕರರ ಬೆನ್ನುಮೂಳೆ ಮುರಿಯುತ್ತಿದ್ದಾರೆ. ಹೆಂಡತಿಯ ಮುಖ ನೋಡಿ ಕೂರಬೇಡಿ ಎಂದು ಪುರುಷರಿಗೆ ಅಗೌರವ ತೋರಿದ್ದಾರೆ. ಗಂಡ-ಹೆಂಡತಿಯ ದಾಂಪತ್ಯ ಜೀವನ ಹಾಳುಮಾಡುವ ಕೆಲಸ ಮಾಡುತ್ತಿದ್ದಾರೆ. ಇನ್ಫೋಸಿಸ್ ನಾರಾಯಣಮೂರ್ತಿ ಕೂಡಾ ವಾರಕ್ಕೆ 70 ಗಂಟೆ ಕೆಲಸ ಮಾಡುವಂತೆ ಹೇಳಿದ್ದಾರೆ. ಇದು ನೌಕರರನ್ನು ಜೀತದಾಳುಗಳನ್ನಾಗಿ ಮಾಡುವ ಹುನ್ನಾರ ಮಾಡಿದ್ದಾರೆ.
ಕೂಡಲೇ ಸುಬ್ರಮಣಿಯನ್ ಹಾಗೂ ನಾರಾಯಣ ಮೂರ್ತಿ ದೇಶದ ಪ್ರಜೆಗಳ ಕ್ಷಮೆ ಕೇಳಬೇಕು. ನೌಕರರಿಗೆ ಹೆಚ್ಚಿಗೆ ಕೆಲಸ ಮಾಡಿಸುವ ಚಿಂತನೆ ಕೈಬಿಡಬೇಕು ಎಂದು ವಾಟಾಳ್ ಆಗ್ರಹಿಸಿದರು.















