ಈ ಭಂಗಿಯು ತೋಳುಗಳು,ಭುಜಗಳು, ತೊಡೆಗಳು ಮತ್ತು ಬೆನ್ನಿನ ಮಾಂಸಖಂಡಗಳು ಒಂದೇ ಮಟ್ಟಿನಲ್ಲಿ ಇವುಗಳಿಗೆ ಶಕ್ತಿ ಹೆಚ್ಚಿಸುವುದು.. ಈ ಭಂಗಿಗೆ ಶಿವ ಅವತಾರವಾದ ಶೂರ ವೀರಭದ್ರ ಎಂದು ಹೆಸರಿಸಲಾಗಿದೆ. ಶೂರ ವೀರಭದ್ರನ ಕತೆಯು ಉಪನಿಷತ್ತಿನ ಎಲ್ಲ ಕತೆಗಳಲ್ಲಿರುವಂತೆ ನಮ್ಮ ಜೀವನಕ್ಕೆ ನೀತಿಯ ಮೌಲ್ಯವನ್ನು ಹೆಚ್ಚಿಸುತ್ತದೆ.
ವೀರ – ಪೌರುಷ, ಯೋಧ, ಪರಾಕ್ರಮ: ಭದ್ರ- ಒಳ್ಳೆಯ, ಉತ್ತಮವಾದ : ಆಸನ- ಭಂಗಿ
ವೀರಭದ್ರಾಸನವನ್ನು ಹೇಗೆ ಮಾಡುವುದು ?
ವೀರಭದ್ರಾಸನವು ಒಂದು ಬಹಳವಾದ ವಿನಯಶೀಲವಾದ ಯೋಗದ ಭಂಗಿಯಾಗಿದೆ ಮತ್ತು ಇದು ಒಬ್ಬರ ಯೋಗಾಭ್ಯಾಸಕ್ಕೆ ಸುಂದರತೆ ಹಾಗೂ ಸುಲಲಿತೆಯನ್ನು ಕೂಡಿಸುತ್ತದೆ.
3 ರಿಂದ 4 ಅಡಿಯಷ್ಟು ನಿಮ್ಮ ಕಾಲುಗಳನ್ನು ಅಗಲಿಸಿ ನೇರವಾಗಿ ನಿಂತುಕೊಳ್ಳಿರಿ
ನಿಮ್ಮ ಬಲ ಪಾದವನ್ನು 90 ಡಿಗ್ರಿಗಳಷ್ಟು ಹೊರಗಡೆಗೆ ತಿರುಗಿಸಿ ಹಾಗೂ ನಿಮ್ಮ ಎಡ ಪಾದವನ್ನು 15 ಡಿಗ್ರಿಗಳಷ್ಟು ಒಳಗಿರಿಸಿ
ಗಮನಿಸುವ ಅಂಶ: ಬಲಪಾದದ ಹಿಮ್ಮಡಿಯು ಎಡ ಪಾದದ ಮಧ್ಯಕ್ಕೆ ಹೊಂದಿಕೊಂಡಿದೆಯೇ ?
ಎರಡೂ ತೋಳುಗಳನ್ನು ಅಕ್ಕಪಕ್ಕದಿಂದ ಭುಜದವರೆವಿಗೂ ತಂದು ನಿಮ್ಮ ಕೈಗಳು ಮೇಲ್ಭಾಗಕ್ಕೆ ತೋರುವಂತಿರಲಿ.
ಗಮನಿಸುವ ಅಂಶ: ನಿಮ್ಮ ಕೈ ಗಳು ಭೂಮಿಗೆ ಸಮಾನಾಂತರದಲ್ಲಿವೆಯೇ ?
ಉಸಿರನ್ನು ಹೊರಗೆ ಬಿಡುತ್ತಾ ನಿಮ್ಮ ಬಲ ಮಂಡಿಯನ್ನು ಬಾಗಿಸಿ
ಗಮನಿಸುವ ಅಂಶ: ನಿಮ್ಮ ಬಲ ಮಂಡಿ ಹಾಗೂ ಬಲಕೋನವು ನೇರ ರೇಖೆಯಲ್ಲಿದೆಯೇ ? ನಿಮ್ಮ ಮಂಡಿಯು ಬಲಕೋನದ ಮೇಲ್ಮುಖವಾಗದಂತೆ ಗಮನಿಸಿ.
ನಿಮ್ಮ ತಲೆಯನ್ನು ತಿರುಗಿಸಿ ನಿಮ್ಮ ಬಲಕ್ಕೆ ನೋಡಿರಿ.
ನೀವು ಯೋಗದ ಭಂಗಿಗೆ ಬರುತ್ತಿದಂತೆ ನಿಮ್ಮ ತೋಳುಗಳನ್ನು ವಿಸ್ತರಿಸಿ.
ನಿಮ್ಮ ಜಠರವನ್ನು ನವಿರಾದ ಪ್ರಯತ್ನದೊಂದಿಗೆ ಕೆಳಗಿಳಿಸಿ. ಈ ಯೋಗದ ಭಂಗಿಯಲ್ಲಿ ಧೀರತನದಿಂದ ಇರಿ. ಸಂತೋಷದಿಂದ ನಗುತ್ತಾ ಧೀರತೆಯಿಂದಿರಿ. ಕೆಳಗೆ ಬರುತ್ತಾ ಉಸಿರಾಟವನ್ನು ಮುಂದುವರಿಸಿ.
ಉಸಿರು ಒಳಗೆ ತೆಗೆದುಕೊಳ್ಳುತ್ತಾ ಮೇಲಕ್ಕೆ ಬನ್ನಿರಿ
ಉಸಿರು ಬಿಡುತ್ತಾ ನಿಮ್ಮ ಅಕ್ಕಪಕ್ಕದ ಕೈಗಳನ್ನು ಕೆಳಗಿಳಿಸಿ.
ಎಡ ಭಾಗದ ಯೋಗದ ಭಂಗಿಯನ್ನು ಪನರಾವರ್ತಿಸಿ ( ನಿಮ್ಮ ಎಡ ಪಾದವನ್ನು 90 ಡಿಗ್ರಿಗಳಷ್ಟಕ್ಕೆ ತಿರುಗಿಸಿ. ಹಾಗೂ ಬಲ ಪಾದವನ್ನು 15 ಡಿಗ್ರಿಗಳಿಗೆ ತಿರುಗಿಸಿ)
ವೀರಭದ್ರಾಸನದಿಂದಾಗುವ ಉಪಯೋಗಗಳು
ತೋಳುಗಳು, ಕಾಲುಗಳು ಮತ್ತು ಕೆಳಸೊಂಟವನ್ನು ದಷ್ಟಪುಷ್ಟವಾಗಿಸುತ್ತದೆ
ಶರೀರದ ಶಕ್ತಿಯನ್ನು ಉತ್ತಮಗೊಳಿಸಲು ಹಾಗೂ ಸಮತೋಲನವಾಗಿರಿಸಲು ಸಹಾಯಕವಾಗುತ್ತದೆ.
ಮೇಜಿನ ಕೆಲಸವನ್ನು ಮಾಡುವವರಿಗೆ ಅನುಕೂಲಕರವಾಗುತ್ತದೆ.
ಭುಜಗಳು ಗಟ್ಟಿಯಾಗಿದ್ದಲ್ಲಿ ಬಹಳವಾಗಿ ಅನುಕೂಲವಾಗುತ್ತದೆ.
ಕಡಿಮೆ ಸಮಯದಲ್ಲಿ ಭುಜಗಳಲ್ಲಿನ ಒತ್ತಡವನ್ನು ಹೊರಹಾಕುತ್ತದೆ.
ಪವಿತ್ರವಾದ ,ಸ್ಥೈರ್ಯವಾದ ದೈವಾನುಗ್ರಹದ ಮತ್ತು ಶಾಂತಿಯ ಅನುಭವವನ್ನ ಕೊಡುತ್ತದೆ.
ವೀರಭದ್ರಾಸನದ ವಿರೋಧತೆಗಳು
ಬೆನ್ನೆಲಬಿನ ಅಸ್ತವ್ಯಸ್ತತೆ(ಯನ್ನು) ಹಾಗೂ ಶಾರೀರಿಕವಾಗಿ ಬಹಳವಾಗಿ ಬಳಲುತ್ತಿದ್ದರೆ, (ಇತ್ತೀಚೆಗಷ್ಟೇ ಅನುಭವಿಸಿದ್ದರೆ) ವೀರಭದ್ರಾಸನದ ಭಂಗಿಯನ್ನು ನಿಮ್ಮ ವೈದ್ಯರ ಸಲಹೆಯನ್ನು ತೆಗೆದುಕೊಂಡ ನಂತರ ಅಭ್ಯಸಿಸಬೇಕು.
ಹೆಚ್ಚಿನ ರಕ್ತದೊತ್ತಡದ ತೊಂದರೆಯಿಂದ ಬಳಲುತ್ತಿರುವವರು ಈ ಭಂಗಿಯನ್ನು ಅಭ್ಯಸಿಸಬಾರದು.
ಎರಡು ಅಥವಾ ಮೂರು ತಿಂಗಳ ಬಸಿರಿಯರಿಗೆ ವೀರಭದ್ರಾಸನದ ಭಂಗಿಯು ಬಹಳ ಉಪಯುಕ್ತವಾಗುವುದು ಆದರೆ ಅವರು ಯೋಗಾಭ್ಯಾಸವನ್ನು ನಿರಂತರವಾಗಿ ಮಾಡಿದಲ್ಲಿ ಮಾತ್ರ. ಗೋಡೆಗೆ ಹತ್ತಿರದಲ್ಲಿ ನಿಂತುಕೊಂಡು ವೀರಭದ್ರಾಸನವನ್ನು ನಿಮ್ಮ ಸಹಾಯದಿಂದಲೇ ಅಭ್ಯಾಸ ಮಾಡಿರಿ. ಆದಾಗ್ಯೂ, ಈ ಯೋಗಾಸನವನ್ನು ಮಾಡುವುದಕ್ಕೆ ಮುಂಚಿತವಾಗಿ ನಿಮ್ಮ ವೈದ್ಯರ ಸಲಹೆಯನ್ನು ಪಡೆಯಿರಿ.
ಅತಿಸಾರದಿಂದ ಇತ್ತೀಚೆಗಷ್ಟೇ ಬಳಲಿದ್ದರೆ ಈ ಭಂಗಿಯನ್ನು ಅಭ್ಯಸಿಸಬೇಡಿ.
ನಿಮಗೇನಾದರೂ ಮಂಡಿ ನೋವು ಇದ್ದಲ್ಲಿ ಅಥವಾ ಮೂಳೆ ರೋಗವಿದ್ದಲ್ಲಿ, ಈ ಯೋಗದ ಭಂಗಿಗೆ ಮಂಡಿಯ ಸಹಾಯವನ್ನು ತೆಗೆದುಕೊಳ್ಳಿರಿ.