ಮನೆ ಸುದ್ದಿ ಜಾಲ ವೀರಪ್ಪನ್‌ ಸಹೋದರ ಮಥೈಯನ್‌ ನಿಧನ

ವೀರಪ್ಪನ್‌ ಸಹೋದರ ಮಥೈಯನ್‌ ನಿಧನ

0

ಚೆನ್ನೈ (Chennai)- ಕುಖ್ಯಾತ ಕಾಡುಗಳ್ಳ ವೀರಪ್ಪನ್ ಹಿರಿಯ ಸಹೋದರ ಮಥೈಯನ್ (75) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮಥೈಯನ್ ಸೇಲಂ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಕೆಲ ವಾರಗಳ ಹಿಂದೆ ಉಸಿರಾಟ ಮತ್ತು ವಯೋ ಸಹಜ ಕಾಯಿಲೆಗಳಿಂದಾಗಿ ಸರ್ಕಾರಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಮಥೈಯನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

25 ವರ್ಷಗಳ ಹಿಂದೆ ಸತ್ಯಮಂಗಲದಲ್ಲಿ ಅರಣ್ಯಾಧಿಕಾರಿಯೊಬ್ಬರ ಹತ್ಯೆಗೆ ಸಂಬಂಧಿಸಿಂತೆ ಮಥೈಯನ್ ಅವರಿಗೆ 1997 ನವೆಂಬರ್ ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಸೇಲಂ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. 

ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಥೈಯನ್ ಅವರನ್ನು ಕರ್ನಾಟಕದ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ, ನಂತರ ಅವರನ್ನು ಕೊಯಮತ್ತೂರಿಗೆ ಕರೆತರಲಾಗಿತ್ತು. ಏಳು ವರ್ಷಗಳ ಹಿಂದೆ ಅವರನ್ನು ಕೊಯಮತ್ತೊರು ಜೈಲಿನಿಂದ ಸೇಲಂ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. 

ಸುಮಾರು 30 ವರ್ಷಗಳ ಕಾಲ ಕರ್ನಾಟಕ, ತಮಿಳುನಾಡು, ಕೇರಳ ಅರಣ್ಯಗಳಲ್ಲಿ ಸಕ್ರಿಯನಾಗಿ ಶ್ರೀಗಂಧ ಮರ ಸಾಗಣೆ ಪ್ರಕರಣ ಹಾಗೂ ಅನೇಕ ಹತ್ಯೆ ಪ್ರಕರಣ ಎದುರಿಸುತ್ತಿದ್ದ ವೀರಪ್ಪನ್ ನನ್ನು ಎಸ್ ಟಿಎಫ್ ಅಕ್ಟೋಬರ್ 2004ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಿತ್ತು.