ಮನೆ ಆರೋಗ್ಯ ಬೇಸಿಗೆಯಲ್ಲಿ ತರಕಾರಿ ಜ್ಯೂಸ್‌ ಸೇವನೆ ಬೆಸ್ಟ್‌

ಬೇಸಿಗೆಯಲ್ಲಿ ತರಕಾರಿ ಜ್ಯೂಸ್‌ ಸೇವನೆ ಬೆಸ್ಟ್‌

0

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಹಣ್ಣಿನ ಜ್ಯೂಸ್‌ಗಳ ಬದಲಿಯಾಗಿ ತರಕಾರಿ ಜ್ಯೂಸ್‌ಗಳನ್ನು ಸೇವನೆ ಮಾಡುವುದು ಉತ್ತಮ. ತರಕಾರಿ ಜ್ಯೂಸ್‌ಗಳು ದೇಹದ ತೂಕವನ್ನು ಕಡಿಮೆ ಮಾಡುವುದಲ್ಲದೆ, ಚರ್ಮ ಮತ್ತು ಕೂದಲಿಗೂ ಬಹಳ ಉತ್ತಮವಾಗಿದೆ.

ತರಕಾರಿ ಜ್ಯೂಸ್‌ಗಳಲ್ಲಿ ವಿಟಮಿನ್, ಖನಿಜಗಳು, ಉತ್ಕರ್ಷಣ ನಿರೋಧಕಗಳು, ಅಗತ್ಯವಾದ ಪೋಷಕಾಂಶಗಳಿಂದ ತುಂಬಿರುತ್ತದೆ. ಹಾಗಾದರೆ ಯಾವ ತಾಜಾ ತರಕಾರಿಗಳ ಜ್ಯೂಸ್‌ ಬೇಸಿಗೆಯಲ್ಲಿ ಸೇವನೆ ಮಾಡುವುದು ಬೆಸ್ಟ್‌. ಇಲ್ಲಿದೆ ಸಂಪೂರ್ಣ ವಿವರ.

ಟೊಮೊಟೊ ಮತ್ತು ಸೌತೆಕಾಯಿ ರಸ

  • ಟೊಮೊಟೊ ಮತ್ತು ಸೌತೆಕಾಯಿ ದೇಹವನ್ನು ತಂಪಾಗಿಸುವ ಗುಣವನ್ನು ಹೊಂದಿದೆ.
  • ಇದರಲ್ಲಿ ವಿಟಮಿನ್, ಸಿ, ಇ, ಮತ್ತು ಬೀಟಾ ಕ್ಯಾರೋಟಿನ್‌ನಂತಹ ಅಗತ್ಯ ಉತ್ಕರ್ಷಣ ನಿರೋಧಕಗಳೊಂದಿಗೆ ಸಮೃದ್ಧವಾಗಿದೆ.
  • ನೈಸರ್ಗಿಕವಾಗಿ ಟೊಮೊಟೊಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
  • ಹಾಗೆಯೇ ಸೌತೆಕಾಯಿಗಳು ನಿಮ್ಮ ದೇಹವನ್ನು ಹೈಡ್ರೇಟ್‌ ಮಾಡಲು ಮತ್ತು ತೂಕ ನಷ್ಟವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

​ಪಾಲಕ್ ಮತ್ತು ಪುದೀನಾ ಜ್ಯೂಸ್‌

  • ಈ ಪಾಲಕ್‌ ಮತ್ತು ಪುದೀನಾ ಜ್ಯೂಸ್‌ ಬೇಸಿಗೆಯಲ್ಲಿ ಬೆಸ್ಟ್‌ ಜ್ಯೂಸ್‌ ಆಗಿದೆ.
  • ಇದರಲ್ಲಿ ಕಬ್ಬಿಣ, ವಿಟಮಿನ್‌ ಎ, ಮೆಗ್ನೀಸಿಯಮ್‌ ಮತ್ತು ಫೋಲಿಕ್‌ ಆಮ್ಲಗಳನ್ನು ಹೊಂದಿ ಶ್ರೀಮಂತವಾಗಿದೆ.
  • ತೂಕ ನಷ್ಟಕ್ಕೆ ಇದೊಂದು ಅದ್ಭುತವಾದ ಪಾನೀಯವಾಗಿದೆ.
  • ಇದರ ಜ್ಯೂಸ್ ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
  • ಅಲ್ಲದೆ ಚರ್ಮ ಮತ್ತು ಕೂದಲನ್ನು ಪೋಷಿಸುತ್ತದೆ.

​ಬ್ರೊಕೊಲಿ ಜ್ಯೂಸ್‌

  • ಈ ಬ್ರೊಕೊಲಿಯನ್ನು ಬೇಸಿಗೆ ಕಾಲದಲ್ಲಿ ಸೇವನೆ ಮಾಡುವುದು ಬಹಳ ಪ್ರಯೋಜನಕಾರಿಯಾಗಿದೆ.
  • ಇದರಲ್ಲಿ ವಿಟಮಿನ್ ಎ, ಸಿ, ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್‌ನಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಕಾರಣ ದೇಹಕ್ಕೆ ತ್ವರಿತವಾದ ಶಕ್ತಿಯನ್ನು ಒದಗಿಸಿ, ತೂಕವನ್ನು ಕಡಿಮೆ ಮಾಡುತ್ತದೆ.
  • ಒಟ್ಟಾರೆ ಬೇಸಿಗೆಯಲ್ಲಿ ಬ್ರೊಕೊಲಿ ಜ್ಯೂಸ್‌ ಅತ್ಯುತ್ತಮವಾದ ಪಾನೀಯವಾಗಿದೆ.

​ಕುಂಬಳಕಾಯಿ ಜ್ಯೂಸ್

  • ಕುಂಬಳಕಾಯಿಯಲ್ಲಿ ಸಾಕಷ್ಟು ವಿಟಮಿನ್‌ಗಳು ಇವೆ.
  • ರಂಜಕ, ಕಬ್ಬಿಣ, ಮೆಗ್ನೀಶಿಯಮ್ ಮತ್ತು ತಾಮ್ರ, ವಿಟಮಿನ್‌ ಡಿ, ಬಿ1, ಬಿ2, ಸಿ ಮತ್ತು ಇಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿದೆ.
  • ಪೋಷಕಾಂಶಗಳ ಆಗರವಾಗಿರುವ ಕುಂಬಳಕಾಯಿಯ ರಸವನ್ನು ಬೇಸಿಗೆಯಲ್ಲಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನವನ್ನು ಪಡೆಯಬಹುದು.
  • ಉತ್ಕರ್ಷಣ ನಿರೋಧಕಗಳನ್ನು ಕುಂಬಳಕಾಯಿ ಹೊಂದಿರುವುದರಿಂದ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಅಪಾಯಕಾರಿ ಕಾಯಿಲೆಗಳಿಂದ ಪಾರಾಗಬಹುದು.

ಹಿಂದಿನ ಲೇಖನಕೋವಿಡ್:‌ ರಾಜ್ಯದಲ್ಲಿ 64 ಮಂದಿಗೆ ಪಾಸಿಟಿವ್‌
ಮುಂದಿನ ಲೇಖನಬೇಸಿಗೆ ರಜೆಯ ನಂತರ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ 370 ನೇ ವಿಧಿಯ ರದ್ದು ವಿಚಾರಣೆ: ಸುಪ್ರೀಂ ಕೋರ್ಟ್‌