Saval TV on YouTube
ರಾಯಚೂರು(Raichuru): ಕೂಲಿ ಕಾರ್ಮಿಕರನ್ನು ಹೊತ್ತೊಯ್ಯತ್ತಿದ್ದ ವಾಹನ ಪಲ್ಟಿ ಆಗಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಲಿಂಗಸೂಗೂರು-ರಾಯಚೂರು ಹೆದ್ದಾರಿಯಲ್ಲಿ ನಡೆದಿದೆ.
ನಿಲೋಗಲ್ ಕ್ಯಾಂಪ್ ಹತ್ತಿರ ಬೊಲೆರೋ ವಾಹನದಲ್ಲಿ ಪಲ್ಟಿಯಾಗಿದೆ.
ಗಾಯಗೊಂಡವರನ್ನು ದೇವದುರ್ಗ ತಾಲೂಕಿನ ರೇಖಾಲಮರಡಿ ಗ್ರಾಮದವರು ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆ ಕೂಲಿ ಕೆಲಸಕ್ಕಾಗಿ ವಾಹನದಲ್ಲಿ ರೇಖಾಲಮರಡಿ ಗ್ರಾಮದಿಂದ ನಿಲೋಗಲ್ ಕ್ಯಾಂಪ್ ಕಡೆ ಇವರೆಲ್ಲಾ ತೆರಳುತ್ತಿದ್ದರು. ಮಾರ್ಗಮಧ್ಯೆ ವಾಹನ ಪಲ್ಟಿಯಾಗಿದೆ.
ಸ್ಥಳಕ್ಕೆ ಸಿರವಾರ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ಕೂಲಿ ಕಾರ್ಮಿಕರನ್ನು ಸ್ಥಳೀಯ ಹಾಗೂ ರಾಯಚೂರು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
