ಮನೆ ಅಪರಾಧ ಪುಣೆ: ಪಿಂಪ್ರಿ ಚಿಂಚ್ವಾಡ್‌ ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ ಪಾಕಿಸ್ತಾನದ ನೋಟು ಪತ್ತೆ- ತನಿಖೆ ಆರಂಭ

ಪುಣೆ: ಪಿಂಪ್ರಿ ಚಿಂಚ್ವಾಡ್‌ ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ ಪಾಕಿಸ್ತಾನದ ನೋಟು ಪತ್ತೆ- ತನಿಖೆ ಆರಂಭ

0

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್‌ ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ ಪಾಕಿಸ್ತಾನದ 20 ರೂಪಾಯಿ ಮುಖಬೆಲೆಯ ನೋಟು ಪತ್ತೆಯಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Our Whatsapp Group

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ (ಎನ್‌ಡಿಎ) 18 ಕಿ.ಮೀ ದೂರದಲ್ಲಿರುವ ಭುಕುಮ್ ಪ್ರದೇಶದಲ್ಲಿ ಹೌಸಿಂಗ್ ಸೊಸೈಟಿ ಇದೆ.

ಶನಿವಾರ ಭುಕುಮ್‌ನಲ್ಲಿರುವ ಹೌಸಿಂಗ್ ಸೊಸೈಟಿಯಲ್ಲಿ ಸರ್ವಿಸ್ ಲಿಫ್ಟ್‌ನ ಹೊರಗೆ ಪಾಕಿಸ್ತಾನಿ ಕರೆನ್ಸಿ ನೋಟು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೊಸೈಟಿಯ ಪದಾಧಿಕಾರಿಗಳು ಪೊಲೀಸರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಈ ಕುರಿತು ತನಿಖೆ ಪ್ರಾರಂಭಿಸಲಾಗಿದ್ದು, ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪಿಂಪ್ರಿ ಪೊಲೀಸ್ ಸಹಾಯಕ ಆಯುಕ್ತ ವಿಶಾಲ್ ಹಿರೇ ಹೇಳಿದ್ದಾರೆ.