ಮನೆ ಆರೋಗ್ಯ ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್(ವಿ.ಎಸ್.ಡಿ)

ವೆಂಟ್ರಿಕ್ಯುಲರ್ ಸೆಪ್ಟಲ್ ಡಿಫೆಕ್ಟ್(ವಿ.ಎಸ್.ಡಿ)

0

ಹುಟ್ಟಿನಿಂದಲೇ ಬರುವ ಹೃದ್ರೋಗಗಳಲ್ಲಿ 20%ರಷ್ಟು ವಿ.ಎಸ್.ಡಿ ಆಗಿರುತ್ತದೆ. ವಿ.ಎಸ್.ಡಿ ಇರುವವರ ಹೃದಯದೊಳಗಿನ ಗೋಡೆಗಳಲ್ಲಿ ಕಿಂಡಿಗಳಾಗಿರುತ್ತದೆ. ಈ ಕಿಂಡಿಗಳು ಸಣ್ಣವಿರಬಹುದು, ದೊಡ್ಡವಿರಬಹುದು. ಸೂಕ್ತ ಹೃದಯ ಪರೀಕ್ಷೆಮೂಲಕ ಹೃದಯ ನಿರ್ಮಾಣದ ದೋಷಗಳನ್ನು ಪತ್ತೆ ಹಚ್ಚಬಹುದು. ವಿ.ಎಸ್.ಡಿ ತೀವ್ರತೆಯ ಮೇಲೆ ಸರ್ಜರಿ ಅವಲಂಭಿಸಿರುತ್ತದೆ.

ಪೇಟೆಂಟ್ ಡಕ್ಟಸ್ ಆರ್ಟಿರಿಯೋಸಿಸ್ (ಪಿ.ಡಿ.ಎ) :-

ಹುಟ್ಟಿನಿಂದಲೇ ಬರುವ ಹೃದ್ರೋಗಗಳಲ್ಲಿ 5-10 % ಎಷ್ಟು ಪಿ.ಡಿ.ಎ ಗಳಿರುತ್ತದೆ. ಇದರ ತೀವ್ರತೆ ಕಡಿಮೆಇರುವಾಗ ಮಗುವಿನಲ್ಲಿ ಯಾವ ಲಕ್ಷಣಗಳೂ ಇರುವುದಿಲ್ಲ. ಪಿ.ಡಿ.ಎ ತೀವ್ರವಾದಾಗ ಮಗುವಿನ ಉಸಿರಾಟ ಜಾಸ್ತಿಯಾಗುತ್ತದೆ. ತೂಕದಲ್ಲಿ ಏರಿಕೆಯಾಗುವುದಿಲ್ಲ. ಮಗು ಮಂಕಾಗಿರುತ್ತದೆ.

ಸೂಕ್ತ ಪರೀಕ್ಷೆಗಳಿಂದ ಪಿ.ಡಿ.ಎ ಯನ್ನು ಸುಲಭವಾಗಿ ಗುರುತಿಸಬಹುದು. ಇದರ ಶಸ್ತ್ರ ಚಿಕಿತ್ಸೆಕೂಡ ಸುಲಭವೆ. ಮಗುವಿಗೆ ಆರು ತಿಂಗಳು ತುಂಬಿದ ನಂತರ ಶಸ್ತ್ರ ಚಿಕಿತ್ಸೆ ಮಾಡಬಹುದು.

ಹುಟ್ಟಿನಿಂದಲೇ ಬರುವ ಕವಾಟದ ತೊಂದರೆಗಳು :-

ಪಲ್ಮನರಿ ಸ್ಟಿನೋಸಿಸ್, ಅಯೊಟಿಕ್ ಸ್ಟಿನೋಸಿಸ್ ಹುಟ್ಟಿನಿಂದಲೇ ಬರಬಹುದು. ನಿಗದಿತ ಪರೀಕ್ಷೆಗಳ ಮೂಲಕ ಇದನ್ನು ಗುರುತಿಸಬಹುದು. ಶಸ್ತ್ರಚಿಕಿತ್ಸೆಯ ಮೂಲಕ ಇದನ್ನು ಸರಿಪಡಿಸಬಹುದು.

ಟಾಟ್ರಾಲಜೀ ಆಫ್ ಪಾಲೆಟ್ :-

ಈ ವಿಧವಾದ ಹೃದ್ರೋಗ ಹುಟ್ಟಿನೊಂದಲೇ ಬರುವ ಹೃದ್ರೋಗಗಳಲ್ಲಿ  10% ರಷ್ಟಿರುತ್ತದೆ. ಈ ಹೃದ್ರೋಗದಲ್ಲಿ ನಾಲ್ಕು ದೋಷಗಳು ಏಕೀಭವಿಸಿರುತ್ತದೆ.

1.ವೆಂಟ್ರುಕ್ಯುಲಾರ್ ಸೆಪ್ಟಟ್ ಡಿಫೆಕ್ಟ್ ದೊಡ್ಡದಾಗಿರುತ್ತದೆ.

2. ರೈಟ್ ವೆಂಟ್ರಿಕಲ್ ನಿಂದ ರಕ್ತ ಹೊರಹೋಗಲು ಅಡ್ಡಿಯಾಹುವುದು.

3.ರೈಟ್ ವೆಂಟ್ರಿಕಲ್ ದೊಡ್ಡದಾಗಿ ಉಬ್ಬುವುದು.

4. ಬೃಹದ್ಧಮನಿ ಇರಬೇಕಾದ ಜಾಗದಲ್ಲಿರದೆ ಮೇಲ್ಭಾಗದಲ್ಲಿರಬಹುದು.

ಲಕ್ಷಣಗಳು :-

ಟೆಟ್ರಾಲಜಿ ಆಫ್ ಪಾಲೆಟ್ ಇರುವ ಮಗು ನೀಲಿಯಾಗಿರುತ್ತದೆ.

ಹುಟ್ಟಿನಿಂದಲೇ ನೀಲಿಯಾಗಿರದಿದ್ದರೂ 6-8 ವಾರಗಳು ಕಳೆದ ನಂತರ ನೀಲಿಯಾಗಿ ಕಾಣಬಹುದು.

ಮಗು ಉಸಿರಾಡಲಾಗದಂತೆ ಅಳುತ್ತಿರುತ್ತದೆ.

ಪರೀಕ್ಷೆ ಮತ್ತು ಚಿಕಿತ್ಸೆ :-

ಹೃದಯದ ಪರೀಕ್ಷೆಯ ಮೂಲಕ ರೋಗವನ್ನು ಗುರುತಿಸಬಹುದು.

ಶಸ್ತ್ರಚಿಕಿತ್ಸೆಯ ಮೂಲಕ ದೋಷವನ್ನು ಸರಿಪಡಿಸಬಹುದು.

ಹಿಂದಿನ ಲೇಖನಮೈಸೂರು: ಅಪಘಾತದಲ್ಲಿ ಮೃತರಾಗಿದ್ದವರ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಕುಟುಂಬ
ಮುಂದಿನ ಲೇಖನಸ್ವಚ್ಛತೆಯೇ ಸೇವೆ ಎಂಬ ವಿಶೇಷ ಜನಾಂದೋಲನ: ಸಿಇಓ ಕೆ.ಎಂ. ಗಾಯಿತ್ರಿ