ಮೈಸೂರು (Mysuru): ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ಮುಂದಿನ ತಿಂಗಳು ನಡೆಯುವ ಯೋಗಾಥಾನ್-2022 ರಲ್ಲಿ ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವಂತೆ ಮಾಡಿ ಮತ್ತೆ ಗಿನ್ನಿಸ್ ಬುಕ್ ಆಫ್ ವರ್ಡ್ ರೆಕಾರ್ಡ್ ದಾಖಲೆ ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವ ಸಂಬಂಧ ಉಪ ವಿಭಾಗಾಧಿಕಾರಿ ಕಮಲಾಬಾಯಿ ಬುಧವಾರ ರೈಸ್ ಕೋರ್ಸ್ ಆವರಣ ಪರಿಶೀಲಿಸಿದರು.
ಈಗಾಗಲೇ ಮೈಸೂರಿನ ಸಾಮೂಹಿಕ ಯೋಗ ಪ್ರದರ್ಶನ ಗಿನ್ನಿಸ್ ದಾಖಲೆ ಬರೆದಿದ್ದು, ಈ ಯೋಗ ಪ್ರದರ್ಶನವು ಗಿನ್ನಿಸ್ ವರ್ಡ್ ಬುಕ್ ಆಫ್ ರೆಕಾರ್ಡ್ ದಾಖಲೆ ಸೇರಲು ಯೋಗಾಥಾನ್ – 2022 ಅನ್ನು ಯಶಸ್ವಿಗೊಳಿಸಿ ಎಂದರು.
ಕೇಂದ್ರ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೇತೃತ್ವದಲ್ಲಿ ಹಲವು ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ರೂಪಿಸಿ. ಆಗಮಿಸುವವವರಿಗೆ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಿ ಎಂದು ಹೇಳಿದರು.
ಯೋಗಾಸನದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಆನ್ ಲೈನ್ ನಲ್ಲಿ ನೊಂದಾಯಿಸಿಕೊಳ್ಳಬೇಕು. ಅಲ್ಲದೆ, ಯೋಗಾಸನ ಮಾಡುವವರಿಗೆ ಇಲಾಖೆ ಅಥವಾ ಖಾಸಗಿಯವರಿಂದ ಟೀ ಶರ್ಟ್ ಮತ್ತು ಮ್ಯಾಟ್ ವ್ಯವಸ್ಥೆ ಕಲ್ಪಿಸುವ ಸಂಬಂಧ ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಧರಿಸುವಂತೆ ಹೇಳಿದರು.
ಮೈಸೂರು ವಿವಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಜೆಎಸ್ ಎಸ್ ಶಿಕ್ಷಣ ಸಂಸ್ಥೆ, ವೈದ್ಯಕೀಯ ಮಹಾ ತಾಂತ್ರಿಕ ವಿದ್ಯಾಲಯ, ಸರ್ಕಾರಿ ಹಾಗೂ ಖಾಸಗಿ ನೌಕರರು ಹಾಗೂ ಸಿಬ್ಬಂದಿ ಗಳು ನೊಂದಣಿ ಮಾಡಬಹುದಾಗಿದೆ. ಜತೆಗೆ ಈ ಹಿಂದೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕೈಗೊಂಡ ಸಮಿತಿಗಳಿಗೆ ನೀಡಿರುವ ಜವಾಬ್ದಾರಿಯನ್ನು
ನಿಭಾಯಿಸುವುದು.
ಆಯುಷ್ ಡಾ.ಪುಷ್ಪಾ, ಎಂ ಆರ್ ಸಿ ಅಧ್ಯಕ್ಷ .ಗಣೇಶಕುಮಾರ್, ಕ್ರೀಡಾ ಇಲಾಖೆ ಉಪನಿರ್ದೇಶಕ ಡಾ.ಸುರೇಶ್, ಎಂ ಆರ್ ಸಿ ಕಾರ್ಯದರ್ಶಿ ಅಜಯ್ ಅರಸ್ ಇನ್ನಿತರರು ಉಪಸ್ಥಿತರಿದ್ದರು.
ನೋಂದಣಿ ವೆಬ್ ಸೈಟ್: www.yogathona2022.com ನಲ್ಲಿ ಯೋಗ ಶಿಕ್ಷಕರು, ದೈಹಿಕ ಶಿಕ್ಷಕರು ನೊಂದಾಯಿಸಿಕೊಳ್ಳಬೇಕು. 1 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಆನ್ ಲೈನ್ ನಲ್ಲಿ ನೊಂದಾಯಿಸಿಕೊಳ್ಳಲು ಜಾಗೃತಿ ಮೂಡಿಸಿ. ದೈಹಿಕ ಶಿಕ್ಷಕರು, ಪದವಿಪೂರ್ವ ಕಾಲೇಜು ಉಪನ್ಯಾಸಕರು ಮೊದಲಾದವರೆಲ್ಲರೂ ಸಹ ಪಾಲ್ಗೊಂಡು ಇದನ್ನು ಯಶಸ್ವಿಗೊಳಿಸಬಹುದಾಗಿದೆ.