ಮನೆ ಸುದ್ದಿ ಜಾಲ ಹಿರಿಯ ನಟ ಉಮೇಶ್‌ಗೆ ಕ್ಯಾನ್ಸರ್ – 4ನೇ ಸ್ಟೇಜ್‌ನಲ್ಲಿ ಕಾಯಿಲೆ

ಹಿರಿಯ ನಟ ಉಮೇಶ್‌ಗೆ ಕ್ಯಾನ್ಸರ್ – 4ನೇ ಸ್ಟೇಜ್‌ನಲ್ಲಿ ಕಾಯಿಲೆ

0

ಸ್ಯಾಂಡಲ್‌ವುಡ್‌ನ ಹಿರಿಯ ನಟ ಉಮೇಶ್‌ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ನಟನಿಗೆ ಕಾಯಿಲೆ 4ನೇ ಸ್ಟೇಜ್‌ನಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಿರಿಯ ನಟ ಎಂ.ಎಸ್ ಉಮೇಶ್ ಅವರು ನಿನ್ನೆ (ಅ.10) ಮನೆಯಲ್ಲಿ ಬಿದ್ದು ಕಾಲು ಹಾಗೂ ಭುಜಕ್ಕೆ ಪೆಟ್ಟು ಮಾಡಿಕೊಂಡ ಕಾರಣದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಸ್ಪತ್ರೆಗೆ ದಾಖಲಾದ ಬಳಿಕ MRI ಹಾಗೂ CT ಸ್ಕ್ಯಾನಿಂಗ್ ಮಾಡಿದಾಗ ಅವರಿಗೆ ಕ್ಯಾನ್ಸರ್ ಕಾಯಿಲೆ ಪತ್ತೆಯಾಗಿದೆ. ಮುದ್ದಿನ ಪಾಳ್ಯದ ಶಾಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಚೇರ್ಮನ್ ಆದ ಶಿವರಾಜ್ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ.

ಹಿರಿಯ ಕಲಾವಿದ ಉಮೇಶ್ ಅವರು ಆಗೊಂದು ಈಗೊಂದು ಸಿನಿಮಾ ಮಾಡುತ್ತ ಜೀವನ ನಡೆಸೋದು ಕಷ್ಟವಾದ ಈ ಕಾಲದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದು ಕಡೆ ಕೈಕೊಟ್ಟ ಆರೋಗ್ಯ ಮತ್ತೊಂದೆಡೆ ಕುಟುಂಬದ ನಿರ್ವಹಣೆ. ಹೀಗಾಗಿ, ಚಿತ್ರರಂಗದ ನೆರವಿಗಾಗಿ ಎದುರು ನೋಡುತ್ತಿದ್ದಾರೆ.

500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ ಉಮೇಶ್ ಅವರಿಗೆ ಉನ್ನತ ಮಟ್ಟದ ಚಿಕಿತ್ಸೆಯ ಅವಶ್ಯಕತೆ ಇದೆ. ಇಷ್ಟೆಲ್ಲಾ ನೋವಿನಲ್ಲೂ ಸಿನಿಮಾದ ಡೈಲಾಗ್ ಹೇಳಿ ನಗೆ ಚಟಾಕಿ ಹಾರಿಸಿದ್ದಾರೆ ಹಿರಿಯ ನಟ ಉಮೇಶ್. ಕ್ಯಾನ್ಸರ್ ಕಾಯಿಲೆ 4ನೇ ಹಂತದಲ್ಲಿ ಇದ್ದು, ವೈದ್ಯರು ಇದಕ್ಕೆ ಚಿಕಿತ್ಸೆ ಆದ ಬಳಿಕ ಮೂಳೆ ಸರ್ಜರಿ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.