ಮನೆ ಮನರಂಜನೆ ಬಹುಭಾಷಾ ಹಿರಿಯ ನಟಿ ಜಮುನಾ ಇನ್ನಿಲ್ಲ

ಬಹುಭಾಷಾ ಹಿರಿಯ ನಟಿ ಜಮುನಾ ಇನ್ನಿಲ್ಲ

0

ಹೈದರಾಬಾದ್(Hyderabad): ಬಹುಭಾಷಾ ಹಿರಿಯ ನಟಿ ಜಮುನಾ (86) ಶುಕ್ರವಾರ (ಜ.27 ರಂದು) ಮುಂಜಾನೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಕಳೆದ ಕೆಲ ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಮುನಾ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಮೃತರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಬೆಳಗ್ಗೆ 11 ಗಂಟೆಗೆ ಫಿಲಂ ಚೇಂಬರ್‌’ಗೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

ನಟಿಯ ಹಿನ್ನೆಲೆ: ಜಮುನಾ ನಟಿ ಹಾಗೂ ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದರು. ತನ್ನ 16ನೇ ವಯಸ್ಸಿನಲ್ಲಿ ʼ ಪುಟ್ಟಿಲುʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, 1955 ರಲ್ಲಿ ರಿಲೀಸ್ ಆದ  ಎಲ್.ವಿ.ಪ್ರಸಾದ್ ಅವರ ʼಮಿಸ್ಸಮ್ಮʼ ಸಿನಿಮಾದಿಂದ ಹೆಚ್ಚು ಖ್ಯಾತಿಗಳಿಸಿದರು. ಕನ್ನಡ, ತಮಿಳು ಚಿತ್ರದಲ್ಲೂ ನಟಿಸಿ ಖ್ಯಾತಿಗಳಿಸಿದ್ದಾರೆ.

ಜಮುನಾ 9ನೇ ಲೋಕಸಭೆಯಲ್ಲಿ ಸಂಸದರಾಗಿದ್ದರು ಮತ್ತು ರಾಜಮಂಡ್ರಿಯನ್ನು ಪ್ರತಿನಿಧಿಸಿದ್ದರು.ʼತೆನಾಲಿ ರಾಮಕೃಷ್ಣʼ, ʼಮುದ್ದು ಬಿದ್ದʼ, ʼಗುಂಡಮ್ಮ ಕಥೆʼ, ʼರಾಮುಡು ಭೀಮುಡುʼ ಮತ್ತು ʼಪೂಲ ರಂಗಡುʼ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ.

1964 ಮತ್ತು 1968 ರಲ್ಲಿ ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು. 2008ರಲ್ಲಿ NTR ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ.

ನಟಿಯ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಹಿಂದಿನ ಲೇಖನದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ 12 ಚೀತಾಗಳು
ಮುಂದಿನ ಲೇಖನನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜ.27 ರಿಂದ ಫೆ.6 ರವರೆಗೆ ಹುಲಿ ಗಣತಿ ಕಾರ್ಯ