ಮನೆ ಅಪರಾಧ ವಿಜಯಪುರ: ಭೀಕರ ಅಪಘಾತದಲ್ಲಿ ಐವರ ದಾರುಣ ಸಾವು

ವಿಜಯಪುರ: ಭೀಕರ ಅಪಘಾತದಲ್ಲಿ ಐವರ ದಾರುಣ ಸಾವು

0

ವಿಜಯಪುರ: ಇಲ್ಲಿನ ತಾಳಿಕೋಟೆ ಬಿಳೇಬಾವಿ ಕ್ರಾಸ್ ಬಳಿ ಶುಕ್ರವಾರ(ಡಿ6) ತೊಗರಿ ಕಟಾವು ಯಂತ್ರ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

Join Our Whatsapp Group

ಮೃತ ದುರ್ದೈವಿಗಳು ವಿಜಯಪುರದ ಅಲಿಯಾಬಾದ್ ನಿವಾಸಿಗಲಾಗಿದ್ದು, ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರು. ನಿಂಗಪ್ಪಾ ಪಾಟೀಲ್ ( 55), ಶಾಂತವ್ವ ಶಂಕರ ಪಾಟೀಲ್ (45),ಭೀಮಶಿ ಸಂಕನಾಳ (65), ಶಶಿಕಲಾ ಜೈನಾಪೂರ (45), ಹಾಗೂ ದಿಲೀಪ್ ಪಾಟೀಲ್ (50) ಎನ್ನುವವರಾಗಿದ್ದಾರೆ.

ಕಾರು ಯಾದಗಿರಿ ಜಿಲ್ಲೆ ಹುಣಸಗಿ ಪಟ್ಟಣದಿಂದ ತಾಳಿಕೋಟೆ ಮಾರ್ಗವಾಗಿ ಅಲಿಯಾಬಾದ್ ಗೆ ಆಗಮಿಸುತ್ತಿದ್ದ ವೇಳೆ ಕ್ರೂಸರ್ ಓವರ್ ಟೇಕ್ ಮಾಡುವ ಭರದಲ್ಲಿ ತೊಗರಿ ಕಟಾವು ಯಂತ್ರಕ್ಕೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅವಘಡ ನಡೆದಿದೆ.

ಐವರು ಯಾದಗಿರಿ ಜಿಲ್ಲೆ ಅಗ್ನಿ ಗ್ರಾಮದಲ್ಲಿ ಕನ್ಯೆ ನೋಡಲು ಹೋಗಿದ್ದರು. ವಾಪಸಾಗುತ್ತಿದ್ದ ವೇಳೆ ದುರಂತ ಸಂಭವಿಸಿದೆ. ತೊಗರಿ ಕಟಾವು ಮಾಡುವ ಯಂತ್ರ ತಾಳಿಕೋಟೆಯಿಂದ ಹುಣಸಗಿಗೆ ತೆರಳುತ್ತಿತ್ತು.

ತಾಳಿಕೋಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಾರಿನಲ್ಲಿದ್ದ ಶವಗಳನ್ನು ಹೊರ ತೆಗೆಯಲು ಜೆಸಿಬಿ ಯಂತ್ರ ಬಳಕೆ ಮಾಡಲಾಗಿರುವುದು ಅಪಘಾತದ ಭೀಕರತೆ ಸಾರುತ್ತಿತ್ತು.

ಮರಣೋತ್ತರ ಪರೀಕ್ಷೆಗಾಗಿ ಐವರ ಶವಗಳು ಬಸನಬಾಗೇವಾಡಿ ಸಮುದಾಯ ಆಸ್ಪತ್ರೆಗೆ ರವಾನಿಸಲಾಗಿದೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಘಟನೆ ನಡೆದಿದೆ.