ಮನೆ ರಾಜ್ಯ ಅವರಪ್ಪನ ಹೆಸರು ಕೆಡಿಸಿದ್ದು, ವಿಜಯೇಂದ್ರ – ಎಲ್ಲಾ ಬಿಚ್ಚಿಡಬೇಕಾ? – ಡಿಕೆಶಿ

ಅವರಪ್ಪನ ಹೆಸರು ಕೆಡಿಸಿದ್ದು, ವಿಜಯೇಂದ್ರ – ಎಲ್ಲಾ ಬಿಚ್ಚಿಡಬೇಕಾ? – ಡಿಕೆಶಿ

0

ಬೆಳಗಾವಿ : ಕಲೆಕ್ಷನ್‌ ಕಿಂಗ್‌ ಅಂದ್ರೆ ಅದು ವಿಜಯೇಂದ್ರ, ಅವರಪ್ಪನ ಹೆಸರು ಕೆಡಿಸಿದ್ದು ವಿಜಯೇಂದ್ರ, ಅವ್ರ ಕಲೆಕ್ಷನ್‌, ವರ್ಗಾವಣೆ ದಂದೆ ಎಲ್ಲವನ್ನ ಬಿಚ್ಚಿಡಬೇಕಾ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರದ ʻರಾಜ್ಯದ ಖಜಾನೆ ಲೂಟಿ ಮಾಡಿ ಕಾಂಗ್ರೆಸ್‌ ತನ್ನ ಹೈಕಮಾಂಡ್‌ ತೃಪ್ತಿ ಪಡಿಸುತ್ತಿದೆʼ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಬೆಳಗಾವಿಯಲ್ಲಿ ಅವರು ಪ್ರತಿಕ್ರಿಯಿಸಿದರು.

ಕಲೆಕ್ಷನ್ ಕಿಂಗ್ ಅಂದರೆ ಅದು ಬಿ.ವೈ ವಿಜಯೇಂದ್ರ. ಅವರ ಕಲೆಕ್ಷನ್, ಅವರ ವರ್ಗಾವಣೆ ದಂಧೆಯನ್ನ ಬಿಚ್ಚಿಡಬೇಕಾ? ಅವರಪ್ಪನ ಹೆಸರು ಕೆಡಸಿದ್ದು ವಿಜಯೇಂದ್ರ. ವಿಜಯೇಂದ್ರನಿಗೆ ಅನುಭವ ಇಲ್ಲ, ಯಾವ ಖಜಾನೆ ಖಾಲಿಯಾಗಿದೆ ಬಂದು ಮಾತನಾಡೋಕೆ ಹೇಳಿ ತಪ್ಪಿಸಿಕೊಂಡು ಮಾತನಾಡೋದಲ್ಲಾ. ಸದನಕ್ಕೆ ಬಂದು ಪ್ರಶ್ನೆ ಮಾಡಲಿ ಅಂತ ಸವಾಲು ಹಾಕಿದರು.

ಉತ್ತರ ಕರ್ನಾಟಕ ಚರ್ಚೆ ಕುರಿತು ಮಾತನಾಡಿದ ಅವರು, ಸಿಎಂ ಮತ್ತು ಕಂದಾಯ ಸಚಿವರು ಉತ್ತರ ಕರ್ನಾಟಕ ಅಭಿವೃದ್ಧಿ ಪ್ರಶ್ನೆಗೆ ಉತ್ತರ ನೀಡತ್ತಾರೆ. ಮಹದಾಯಿ ಮತ್ತಿ ನೀರಾವರಿ ಅಭಿವೃದ್ಧಿ ಬಗ್ಗೆ ನಾನು ಸಹ ಉತ್ತರ ನೀಡುತ್ತೇನೆ. ಕಬ್ಬು, ಮೆಕ್ಕೆಜೋಳಕ್ಕೆ ಬೆಂಬಲ ನೀಡಿದ್ದೆವೆ. ಇದರಿಂದ ರಾಜ್ಯ ಸರ್ಕಾರಕ್ಕೆ ಮತ್ತು ಕಬ್ಬು ಕಾರ್ಖಾನೆಗಳಿಗೆ ಸಾಕಷ್ಟು ಹೊರೆಯಾಗಿದೆ. ಇದನ್ನು ರಾಜ್ಯದ ರೈತರು ಅರ್ಥ ಮಾಡಿಕೊಳ್ಳಬೇಕು, ನಿಮ್ಮ ಪರವಾಗಿ ರಾಜ್ಯ ಸರ್ಕಾರಯಿದೆ ಎಂದು ಹೇಳಿದರು.