ಮನೆ ಮನರಂಜನೆ ಅ.1ರಂದು ವಿನೋದ್‌ ಪ್ರಭಾಕರ್‌ ನಟನೆಯ ‘ಫೈಟರ್’ ಟ್ರೇಲರ್ ಬಿಡುಗಡೆ

ಅ.1ರಂದು ವಿನೋದ್‌ ಪ್ರಭಾಕರ್‌ ನಟನೆಯ ‘ಫೈಟರ್’ ಟ್ರೇಲರ್ ಬಿಡುಗಡೆ

0

ವಿನೋದ್‌ ಪ್ರಭಾಕರ್‌ ನಾಯಕರಾಗಿರುವ “ಫೈಟರ್‌’ ಚಿತ್ರ ಅ.6ಕ್ಕೆ ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಹಾಡು, ಟೀಸರ್‌ ಬಿಡುಗಡೆ ಹಿಟ್‌ಲಿಸ್ಟ್‌ ಸೇರಿದೆ. ಈಗ ಚಿತ್ರತಂಡ ಚಿತ್ರದ ಟ್ರೇಲರ್‌ ರಿಲೀಸ್‌ ಮಾಡಲು ಮುಂದಾಗಿದ್ದು, ಅಕ್ಟೋಬರ್‌ 1 ರಂದು ಸಂಜೆ ವಿಭಿನ್ನ ಕಾರ್ಯಕ್ರಮದ ಮೂಲಕ ಟ್ರೇಲರ್‌ ರಿಲೀಸ್‌ ಮಾಡಲಿದೆ.

Join Our Whatsapp Group

ಇನ್ನು, ಚಿತ್ರದ ಹಾಡೊಂದು ಚಿತ್ರದುರ್ಗದ ಬೆಟ್ಟದ ಮೇಲೆ ಸಖತ್‌ ರಗಡ್‌ ಆಗಿ ಚಿತ್ರೀಕರಿಸಿದ್ದು, ಮಾಸ್‌ ಪ್ರಿಯರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸದಲ್ಲಿದೆ.

ಅಂದಹಾಗೆ, ಇದೊಂದು ಫ್ಯಾಮಿಲಿ ಡ್ರಾಮಾವಾಗಿದ್ದು, ಅನ್ಯಾಯದ ವಿರುದ್ಧ ನಾಹಯಕ ನಿಂತಾಗ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ. ಆಕಾಶ್‌ ಎಂಟರ್‌ಪ್ರೈಸಸ್‌ ಬ್ಯಾನರ್‌ನಡಿ ಸೋಮಶೇಖರ್‌ ಕಟ್ಟಿಗೇನಹಳ್ಳಿ ಈ ಚಿತ್ರವನ್ನು ನೂತನ್‌ ಉಮೇಶ್‌ ನಿರ್ದೇಶಿಸಿದ್ದಾರೆ.

“ಫೈಟರ್‌ ನಲ್ಲಿ ಬರೀ ಹೋರಾಟ ಹಾಗೂ ಹೊಡೆದಾಟವಿಲ್ಲ. ತಂದೆ- ತಾಯಿ ಹಾಗೂ ಮಗನ ಬಾಂಧವ್ಯದ ಸನ್ನಿವೇಶಗಳು ಎಲ್ಲರ ಮನ ಮುಟ್ಟಲಿದೆ. ಜೊತೆಗೆ ಥ್ರಿಲ್ಲರ್‌ ಅಂಶಗಳನ್ನ ಒಳಗೊಂಡ ಕೌಟುಂಬಿಕ ಮನರಂಜನೆಯ ಚಿತ್ರ ಇದಾಗಿದೆ.ಈ ಚಿತ್ರದಲ್ಲಿ ಸಮಾಜದ ವ್ಯವಸ್ಥೆಯ ವಿರುದ್ಧ ಹೋರಾಡುವ ಫೈಟರ್‌’ ಎನ್ನುವುದು ವಿನೋದ್‌ ಪ್ರಭಾಕರ್‌ ಮಾತು.

ಹಿಂದಿನ ಲೇಖನನಾಳೆ ಪಾಲಿಕೆ, ಸವಾಲ್ ಟಿವಿ ಸಹಯೋಗದಲ್ಲಿ  ಸ್ವಚ್ಛತಾ ಶ್ರಮದಾನ
ಮುಂದಿನ ಲೇಖನಇಂಡಿಯಾ ಸಂಸ್ಥೆ ಓಲೈಸಲು ಡಿ.ಕೆ. ಶಿವಕುಮಾರ್ ನೀರು ಬಿಟ್ಟಿದ್ದಾರೆ: ಕೆ.ಎಸ್. ಈಶ್ವರಪ್ಪ