ಮನೆ ಕಾನೂನು ನೀತಿ ಸಂಹಿತೆ ಉಲ್ಲಂಘನೆ: ಶಾಸಕ ಕಾಗೆಗೆ ಚುನಾವಣೆ ಆಯೋಗ ನೋಟಿಸ್‌

ನೀತಿ ಸಂಹಿತೆ ಉಲ್ಲಂಘನೆ: ಶಾಸಕ ಕಾಗೆಗೆ ಚುನಾವಣೆ ಆಯೋಗ ನೋಟಿಸ್‌

0

ಚಿಕ್ಕೋಡಿ:‍ ಪ್ರಧಾನಿ ಸಾವು ಹಾಗೂ ಕಾಂಗ್ರೆಸ್‌ ಗೆ ಮತ ನೀಡದಿದ್ದರೆ ವಿದ್ಯುತ್‌ ಕಡಿತ ಮಾಡುವ ಹೇಳಿಕೆ ನೀಡಿದ ಶಾಸಕ ಭರಮಗೌಡ (ರಾಜು) ಕಾಗೆ ಅವರಿಗೆ ಚಿಕ್ಕೊಡಿ ಜಿಲ್ಲಾ ಚುನಾವಣಾಧಿಕಾರಿ ರಾಹುಲ್‌ ಶಿಂಧೆ ಅವರು ‘ನೀತಿ ಸಂಹಿತೆ ಉಲ್ಲಂಘನೆ’ ಅಡಿ ಬುಧವಾರ ನೋಟಿಸ್‌ ನೀಡಿದ್ದಾರೆ.

Join Our Whatsapp Group

ತಮ್ಮ ಎರಡೂ ಹೇಳಿಕೆಗಳ ಕುರಿತು 24 ಗಂಟೆಯೊಳಗೆ ವಿವರಣೆ ಕೊಡಬೇಕು ಎಂದು ಕಾಗವಾಡ ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮೂಲಕ ನೋಟಿಸ್‌ ಜಾರಿ ಮಾಡಲಾಗಿದೆ  ಎಂದು ರಾಹುಲ್‌ ಶಿಂಧೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಚುನಾವಣೆ ಪ್ರಚಾರದ ವೇಳೆ, ಪ್ರಧಾನಿ ನರೇಂದ್ರ ಮೋದಿ ಸತ್ತರೆ ಈ ದೇಶದಲ್ಲಿ ಮುಂದೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ? ಏಕೆ ಮೋದಿ…ಮೋದಿ… ಎಂದು ಕೂಗುತ್ತೀರಿ  ಎಂದು ಶಾಸಕ ಭರಮಗೌಡ (ರಾಜು) ಕಾಗೆ ಹರಿಹಾಯ್ದಿದ್ದರು.

ಕಾಗವಾಡ ತಾಲ್ಲೂಕಿನ ಮಂಗಾವತಿ ಮತ್ತು ಜುಗುಳ ಗ್ರಾಮಗಳಲ್ಲಿ ಪ್ರಚಾರ ಮಾಡಿ ಮಾತನಾಡಿದ ಭರಮಗೌಡ (ರಾಜು) ಕಾಗೆ,  ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ನಿರೀಕ್ಷಿತ ಮತ ಬರದೇ ಇದ್ದರೆ ನಿಮ್ಮೂರಿನ ವಿದ್ಯುತ್‌ ಕಡಿತಗೊಳಿಸುತ್ತೇನೆ  ಎಂದು ಬೆದರಿಕೆ ಹಾಕಿದ್ದರು.

ಈ ಸಂಬಂಧ ಚುನಾವಣೆ ಆಯೋಗ ನೋಟಿಸ್‌ ಜಾರಿ ಮಾಡಿದೆ.

ಹಿಂದಿನ ಲೇಖನ200 ಜನರನ್ನು ಕೆಲಸದಿಂದ ತೆಗೆದ ಓಲಾ ಕ್ಯಾಬ್ಸ್​​​ ಸಂಸ್ಥೆ: ಸೂಕ್ತ ಪರಿಹಾರ ನೀಡುವಂತೆ ಸುರೇಶ್​​ ಕುಮಾರ್ ಆಗ್ರಹ
ಮುಂದಿನ ಲೇಖನತೆನೆ ಹೊತ್ತ ಮಹಿಳೆ ಪೆನ್​ ಡ್ರೈವ್ ಹೊರಬೇಕಾಗುತ್ತದೆ: ಡಿ ಕೆ ಸುರೇಶ್ ವ್ಯಂಗ್ಯ