ಬೆಂಗಳೂರು(Bengaluru): ನಗರದಲ್ಲಿ ಇತ್ತೀಚೆಗೆ ನಡೆದ ಸೈಮಾ ಅವಾರ್ಡ್ 2022 ಬಳಿಕ ಆಯೋಜಿಸಲಾಗಿದ್ದ ಅದ್ದೂರಿ ಪಾರ್ಟಿಯಲ್ಲಿ ಭಾಗಿಯಾದವರಿಗೆ ಹಾಗೂ ಆಯೋಜಕರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ.
ನಗರದ ಪ್ರತಿಷ್ಠಿತ ಜೆಡಬ್ಲ್ಯೂ ಹೋಟೆಲ್ನಲ್ಲಿ ಈ ಪಾರ್ಟಿ ನಡೆದಿದ್ದು, ಕಾನೂನು ಉಲ್ಲಂಘನೆಯ ಆರೋಪ ಕೇಳಿಬಂದಿದೆ.
ರಾತ್ರಿ 3.30 ಗಂಟೆಯ ತನಕ ಪಾರ್ಟಿ ಆಯೋಜಿಸಿದ್ದು ಆಯೋಜಕರು ಹಾಗೂ ಹೋಟೆಲ್ ಮ್ಯಾನೇಜರ್ ವಿರುದ್ಧ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಪಾರ್ಟಿಯಲ್ಲಿ ವಿವಿಧ ಭಾಷೆಯ ನಟ – ನಟಿಯರು ಭಾಗಿಯಾಗಿದ್ದರು. ರಾತ್ರಿ 3.30ರ ತನಕ ಅಬ್ಬರದ ಸಂಗೀತಕ್ಕೆ ಹೆಜ್ಜೆ ಹಾಕಿದ್ದರು ಎನ್ನಲಾಗಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಅಭಿಷೇಕ್ ಅಂಬರೀಶ್ ಅವರು ಪಾರ್ಟಿಯಲ್ಲಿದ್ದ ವಿಡಿಯೊ ವೈರಲ್ ಆಗಿದೆ.














