ಮನೆ ರಾಜ್ಯ ಸಂಚಾರ ನಿಯಮ ಉಲ್ಲಂಘನೆ: ಒಂದೇ ದಿನ 7.50 ಕೋಟಿ ದಂಡ ಸಂಗ್ರಹ

ಸಂಚಾರ ನಿಯಮ ಉಲ್ಲಂಘನೆ: ಒಂದೇ ದಿನ 7.50 ಕೋಟಿ ದಂಡ ಸಂಗ್ರಹ

0

ಬೆಂಗಳೂರು(Bengaluru):  ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ಸವಾರರಿಗೆ ಶೇ.50 ರಿಯಾಯಿತಿ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ಬರೋಬ್ಬರಿ ಏಳೂವರೆ ಕೋಟಿ ರೂ. ದಂಡ ಸಂಗ್ರಹವಾಗಿದೆ.

ಕಳೆದ ನಾಲ್ಕು ದಿನಗಳಲ್ಲಿ 10,62,210 ಕೇಸ್’ಗಳಲ್ಲಿ 30,96,17,921 ರೂ. ದಂಡ ಸಂಗ್ರಹವಾಗಿದೆ.

ಸೋಮವಾರ 2,59,558 ಪ್ರಕರಣಗಳಿಗೆ ಸಂಬಂಧಿಸಿದಂತೆ 7,45,53,310 ರೂ. ದಂಡ ಸಂಗ್ರಹವಾಗಿದೆ. ಪಿಡಿಎ, ಪೇಟಿಎಂ, ಬೆಂಗಳೂರು ಒನ್ ಹಾಗೂ ಟಿಎಂಸಿ (ಸಂಚಾರ ನಿರ್ವಹಣಾ ಕೇಂದ್ರ)ದಲ್ಲಿ ದಂಡ ಸಂಗ್ರಹಿಸಲಾಗುತ್ತಿದೆ. ಹೀಗೆ ಇದುವರೆಗೂ ಒಟ್ಟಾರೆ 10,62,210 ಕೇಸ್’ಗಳಲ್ಲಿ 30,96,17,921 ದಂಡ ಸಂಗ್ರ ಹವಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಯಾವ ನಿಯಮಗಳ ಉಲ್ಲಂಘನೆಗೆ ಎಷ್ಟು ರಿಯಾಯಿತಿ ಎಂಬ ಕುರಿತು ಬೆಂಗಳೂರು ಸಂಚಾರ ವಿಭಾಗದ ಪೊಲೀಸರು 44 ತರಹದ ನಿಯಮ ಉಲ್ಲಂಘಟನೆ ಪಟ್ಟಿ ಬಿಡುಗಡೆ ಮಾಡಿದ್ದರು.

ಹಿಂದಿನ ಲೇಖನಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಗೌರಿ ನೇಮಕ ತಡೆಗೆ ಸುಪ್ರೀಂ ನಿರಾಕರಣೆ: ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪದಗ್ರಹಣ
ಮುಂದಿನ ಲೇಖನವೃದ್ಧ ತಂದೆಯಿಂದ ಹೇಬಿಯಸ್ ಕಾರ್ಪಸ್ ಅರ್ಜಿ: ಕುಟುಂಬ ಸಮೇತ ಹಾಜರಾದ ಪುತ್ರ