ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಬಳಿಕ ಅಭ್ಯರ್ಥಿಗಳು, ಕಾರ್ಯಕರ್ತರು ಬಳಸಿದ ವಾಹನಗಳಿಂದ ಸಾಲು ಸಾಲು ಟ್ರಾಫಿಕ್ ನಿಯಮಗಳ ಉಲ್ಲಂಘನೆಯಾಗಿದ್ದು ಬೆಂಗಳೂರು ನಗರದಲ್ಲಿ 25 ದಿನದಲ್ಲಿ 4.12 ಲಕ್ಷ ಪ್ರಕರಣ ದಾಖಲಾಗಿದೆ.
ಸಂಚಾರ ನಿಯಮ ಉಲ್ಲಂಘಿಸಿದ ಚುನಾವಣೆ ಪ್ರಚಾರದ ವಾಹನಗಳ ಮೇಲೆ 22.89 ಕೋಟಿ ದಂಡ ವಿಧಿಸಿಲಾಗಿದೆ. ಅತಿ ವೇಗದ ಚಾಲನೆ, ಸಿಗ್ನಲ್ ಜಂಪ್, ಜೀಬ್ರಾ ಕ್ರಾಸಿಂಗ್, ಹೆಲ್ಮೆಟ್ ರಹಿತ ಚಾಲನೆ, ಚಾಲನೆ ವೇಳೆ ಮೊಬೈಲ್ ಬಳಕೆ, ತ್ರಿಬಲ್ ರೇಡಿಂಗ್ ಸೇರಿದಂತೆ ವಿವಿಧ ಕೇಸ್’ಗಳು ದಾಖಲಾಗಿವೆ.
ಸಿಗ್ನಲ್ ಸಿಸಿ ಕ್ಯಾಮರಾ ಪರಿಶೀಲಿಸಿ ಸಂಚಾರಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ನಗರಾದ್ಯಂತ 250 ಐಟಿಎಂಎಸ್ ಕ್ಯಾಮರಾಗಳಿಂದ ಫೈನ್ ಹಾಕಲಾಗಿದೆ. ಇದರ ಜೊತೆಗೆ ನಿರ್ಭಯಾ ಫಂಡ್ ಅಡಿ ಹಾಕಲಾದ ನೇತ್ರ ಕ್ಯಾಮೆರಾಗಳನ್ನು ದಂಡ ವಿಧಿಸಲು ಬಳಕೆ ಮಾಡಿಕೊಳ್ಳಲಾಗುತ್ತಿದೆ.