ಇಂಫಾಲ: ಮಣಿಪುರದಲ್ಲಿ ಬುಧವಾರತ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಬಿಷ್ಣುಪುರ ಜಿಲ್ಲೆಯ ಕುಂಬಿ ಮತ್ತು ತೌಬಲ್ ಜಿಲ್ಲೆಯ ವಾಂಗೂ ನಡುವೆ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ನಾಲ್ವರು ನಾಪತ್ತೆಯಾಗಿರುವ ಕುರಿತು ವರದಿಯಾಗಿದೆ.
ನಾಪತ್ತೆಯಾಗಿರುವ ನಾಲ್ವರನ್ನು ಓಯಿನಮ್ ರೊಮೆನ್ ಮೈತೆ (45), ಅಹಾಂತೇಮ್ ದಾರಾ ಮೈತೆ (56), ತೌಡಮ್ ಇಬೊಮ್ಚಾ ಮೈತೆ (53) ಮತ್ತು ತೌದಮ್ ಆನಂದ್ ಮೈತೆ (27) ಎಂದು ಗುರುತಿಸಲಾಗಿದೆ.
ಗುಂಡಿನ ದಾಳಿ ನಡೆದ ಪ್ರದೇಶದ ಬಳಿ ಶುಂಠಿ ಕೊಯ್ಲು ಮಾಡಲು ಹೋದ ನಾಲ್ವರು ನಾಪತ್ತೆಯಾಗಿದ್ದಾರೆ. ಗುಂಡಿನ ದಾಳಿಗೂ ಮೊದಲು ಮಾರ್ಟರ್ ಫೈರಿಂಗ್ ನಡೆದಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ಘಟನೆ ಕುರಿತು ಕುಂಬಿ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.