೧. ಮೊದಲು ತಾಡಾಸನದ ಭಂಗಿಯಲ್ಲಿ ನಿಲ್ಲಬೇಕು.
೨. ಬಳಿಕ ಆಳವಾಗಿ ಉಸಿರನ್ನು ಒಳಕ್ಕೆಳದು, ಸ್ವಲ್ಪ ಮೇಲೆಜಿಗಿದು, ಅಂತರ 4-4 ½ ಅಡಿ ಇರುವಷ್ಟು ಕಾಲುಗಳನ್ನು ಪಕ್ಕಕ್ಕೆ ಸರಿಸಿ ನಿಲ್ಲಬೇಕು. ಹಿಂದಿನಂತೆಯೇ ತೋಳುಗಳನ್ನೆತ್ತಿ ಭುಜಗಳ ಮಟ್ಟಕ್ಕೆ ಬರುವಂತೆ, ಅಂಗೈಗಳನ್ನು ಕೆಳಮೊಗಮಾಡಿ ನೆಲಕ್ಕೆ ಸಮಾನಾಂತರವಾಗುವಂತೆ ಚಾಚಿನಿಲ್ಲಬೇಕು.
೩. ಆಮೇಲೆ ಬಲಪಾದವನ್ನು ಬಲಗಡೆ 90 ಡಿಗ್ರಿಗಳಷ್ಟು ತಿರುಗಿಸಿ, ಎಡ ಪಾದವನ್ನು ಬಲಗಡೆ ಓರೆಯಾಗಿಸಿ, ಎಡಗಾಲನ್ನು ನೀಳಮಾಡಿ, ಮಂಡಿಯನ್ನು ಬಿಗಿಗೊಳಿಸಬೇಕು. ಅಲ್ಲದೇ ಎಡಗಾಲ ಜಾನು ರಜ್ಜುಗಳುಳ್ಳ ಮಾಂಸ ಖಂಡಗಳನ್ನ ಜಗ್ಗಿ ಚಾಚಬೇಕು.
೪. ಆಮೇಲೆ ಉಸಿರನ್ನು ಹೊರಕ್ಕೆ ಬಿಟ್ಟು, ಬಲಮಂಡಿಯನ್ನು ಬಗ್ಗಿಸಿ, ಬಲತೊಡೆಯು ನೆಲಕ್ಕೆ ಸಮಾನಾಂತರವಾಗುವಂತೆಯೂ, ಮೊಣಕಾಲು ನೆಲಕ್ಕೆ ಲಂಬವಾಗುವಂತೆಯೂ ಅಂದರೆ ಇವೆರಡರ ನಡುವೆ ಒಂದು ಸಮಕೋನವಾಗುವಂತೆ ಅವುಗಳನ್ನು ಅಳವಡಿಸಬೇಕು. ಬಳಿಕ ಬಗ್ಗಿಸಿದ ಬಲಮಂಡಿಯು ಬಲ ಪಾದದಿಂದ ಮುಂದಕ್ಕೆ ಬರುವಂತೆ ಆ ಪಾದದ ಹಿಮ್ಮಡಿಯೂ ಒಂದೇ ಸರಳ ರೇಖೆಯಲ್ಲಿರುವಂತಿರಬೇಕು.
೫. ತೋಳುಗಳನ್ನು ಪಕ್ಕಕ್ಕೆ ಕೆಳಮೊಗಮಾಡಿದ್ದಾಗ, ಯಾರೋ ಅವುಗಳನ್ನು ಜಗ್ಗುತ್ತಿರುವೆಂಬ ನೀಲವಾಗಿ ಚಾಚಿರಬೇಕು.
೬. ಇದಾದ ಬಳಿಕ ಮುಖವನ್ನು ಬಲಗಡೆ ತಿರುಗಿಸಿ, ಬಲದ ಮೇಲಗೈ ಕಡೆಗೆ ದಿಟ್ಟಿಸಬೇಕು. ಆಮೇಲೆ ಎಡಗಾಲಿನ ಹಿಂಬದಿಯ ಮಾಂಸ ಖಂಡಗಳನ್ನು ಚೆನ್ನಾಗಿ ಜಗ್ಗಿ ಸೆಳೆಯಬೇಕು. ಅಲ್ಲದೆ ಕಾಲುಗಳು ಹಿಂಭಾಗ ಮತ್ತು ಬೆನ್ನಿನ ಮೇಲ್ಭಾಗ ಒಂದೇ ಮಟ್ಟದಲ್ಲಿ ಇಡಬೇಕಾದುದು ಅತ್ಯಗತ್ಯ.
೭. ಈ ಆಸನ ಭಂಗಿಯಲ್ಲಿ 20-30 ಸೆಕೆಂಡುಗಳ ಕಾಲ ಆಳವಾದ ಉಸಿರಾಟದಿಂದ ನೆಲ್ಲಿಸಬೇಕು. ಬಳಿಕ ಉಸಿರನ್ನು ಒಳಕ್ಕೆಳೆದು ಎರಡನೇ ಅನುಬಂಧದ ಸ್ಥಿತಿಗೆ ಬೇಕು.
೮. ಅನಂತ ಎಡಪಾದವನ್ನು ಎಡಪಕ್ಕಕ್ಕೆ 90 ಡಿಗ್ರಿಗಳಷ್ಟು ತಿರುಗಿಸಿ, ಬಲಪಾದವನ್ನ ಎಡಗಡೆಗೆ ತುಸು ಓರೆಯಾಗಿಸಿ, ಬಳಿಕ ಎಡ ಮಂಡಿಯನ್ನು ಬಗ್ಗಿಸಿ, 3 ರಿಂದ 6ನೇ ಅನುಬಂಧದವರೆಗಿನ ಭಂಗಿಗಳನ್ನು ತಿರುಗುಮುರುಗು ಮಾಡಿ ಎಡಗಡೆಯು ಇವನ್ನು ಅಭ್ಯಾಸಿಸಬೇಕು.
೯. ಕೊನೆಯಲ್ಲಿ ಉಸಿರನ್ನು ಒಳಕ್ಕೆಳದು, 2ನೇ ಸ್ಥಿತಿಗೆ ಹಿಂದಿರುಗಬೇಕು. ಆಮೇಲೆ ಉಸಿರನ್ನು ಹೊರಕ್ಕೆ ಬಿಟ್ಟು ಸ್ವಲ್ಪ ಹಿಂದಕ್ಕೆ ಜಿಗಿದು, ʼತಡಾಸನʼಕ್ಕೆ ಬಂದು ನಿಲ್ಲಬೇಕು.
ಪರಿಣಾಮಗಳು :-
ಈ ಆಸನದ ಭಂಗಿಗಳ ಅಭ್ಯಾಸದಿಂದ ಕಾಲುಗಳ ಮಾಂಸಖಂಡಗಳು ಸ್ವರೂಪಗೊಂಡು, ಬಲಗೊಳ್ಳುವವು. ಇದರಿಂದ ಮೀನಖಂಡಗಳ ಮತ್ತು ತೊಡೆಯ ಮಾಂಸಖಂಡಗಳಲ್ಲಿಯ ಕಾಲು, ಬೆನ್ನುಗಳಲ್ಲಿ ಸ್ಥಿತಿಸ್ಥಾಪಕತ್ವವು ಮೂಡುವುದು. ಜೊತೆಗೆ ಹೊಟ್ಟೆಯೊಳಗಿನ ಅಂಗಗಳೆಲ್ಲವೂ ಹುರುಪುಗೊಳ್ಳುವುವು.
ಈ ನಿಲುವು ಭಂಗಿಗಳಲ್ಲಿ ನೈಪುಣ್ಯಗಳಿಸುವುದುದೇ ಆದರೆ, ಇನ್ನು ಮುಂದಿನ ಮುಂಬಾಗುವ ಆಸನಭ್ಯಾಸಕ್ಕೆ ಅನುಕೂಲವಾಗಿ ಅವು ಸುಲಭವಾಗಿ ಕೈವಶವಾಗುತ್ತದೆ.