ಮನೆ ಕ್ರೀಡೆ ವಿರಾಟ್ ಕೊಹ್ಲಿ ಆಕ್ರಮಣಕಾರಿ ಮನಸ್ಥಿತಿಯೊಂದಿಗೆ ಟಿ20 ಪಂದ್ಯಗಳನ್ನು ಆಡಬೇಕಿದೆ: ರೈನಾ

ವಿರಾಟ್ ಕೊಹ್ಲಿ ಆಕ್ರಮಣಕಾರಿ ಮನಸ್ಥಿತಿಯೊಂದಿಗೆ ಟಿ20 ಪಂದ್ಯಗಳನ್ನು ಆಡಬೇಕಿದೆ: ರೈನಾ

0

ಮುಂಬೈ: ವಿರಾಟ್ ಕೊಹ್ಲಿ ಅವರು ಹೊಂದಿರುವ ಆಕ್ರಮಣಕಾರಿ ಮನಸ್ಥಿತಿಯೊಂದಿಗೆ ಟಿ20 ಪಂದ್ಯಗಳನ್ನು ಆಡುವುದನ್ನು ಮುಂದುವರಿಸುವ ಅಗತ್ಯವಿದೆ ಎಂದು ಭಾರತದ ಮಾಜಿ ಬ್ಯಾಟರ್ ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.

ಜಿಯೋ ಸಿನಿಮಾದ ಮ್ಯಾಚ್-ಟಾಕ್ ಶೋನಲ್ಲಿ, ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಮತ್ತು 2024 ಟಿ20 ವಿಶ್ವಕಪ್‌ ನಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೆಚ್ಚು ಆಕ್ರಮಣಕಾರಿ ವಿಧಾನವನ್ನು ಅಳವಡಿಸಿಕೊಳ್ಳಬೇಕೇ ಎಂದು ರೈನಾಗೆ ಕೇಳಲಾಯಿತು. ಇದಕ್ಕೆ ಕೊಹ್ಲಿ ಅವರು ಈಗಾಗಲೇ ಆಕ್ರಮಣಕಾರಿ ಆಡುತ್ತಿದ್ದಾರೆ ಅದೇ ವಿಧಾನದೊಂದಿಗೆ ಟಿ 20 ಪಂದ್ಯಗಳನ್ನು ಆಡಬೇಕು ಎಂದು ರೈನಾ ಉತ್ತರಿಸಿದರು.

” ಅವರು ಇನ್ನಿಂಗ್ಸನ್ನು ನಿಯಂತ್ರಿಸುವ ರೀತಿಯಲ್ಲೂ ಯಾವಾಗಲೂ ಆಕ್ರಮಣಕಾರಿ ಮನೋಭಾವವನ್ನು ಹೊಂದಿರುತ್ತಾರೆ. 20 ಓವರ್ ಗಳೂ ದೊಡ್ಡ ಸ್ವರೂಪವೇ. ಜನರು ಅದನ್ನು ಬಹಳ ಸಣ್ಣ ಫಾರ್ಮ್ಯಾಟ್ ಎಂದು ಭಾವಿಸುತ್ತಾರೆ, ಆದರೆ ನೀವು 20 ಓವರ್ ಗಳನ್ನು ಆಡಬೇಕಾಗಿದೆ” ಎಂದು ರೈನಾ ಹೇಳಿದರು.

ಮೊಹಾಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯವನ್ನು ತಪ್ಪಿಸಿಕೊಂಡಿದ್ದ ವಿರಾಟ್ ಕೊಹ್ಲಿ, ಮುಂದಿನ ಹಣಾಹಣಿಗೆ ಮುಂಚಿತವಾಗಿ ಭಾರತ ತಂಡವನ್ನು ಸೇರಲು ಇಂದೋರ್‌ ಗೆ ಪ್ರಯಾಣಿಸಿದ್ದಾರೆ. 2022 ರ ಟಿ20 ವಿಶ್ವಕಪ್‌ ನಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಸೋತ ನಂತರ ವಿರಾಟ್ ಇದೇ ಮೊದಲ ಬಾರಿ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.