ಮನೆ ಕ್ರೀಡೆ 2ನೇ ಏಕದಿನ ಪಂದ್ಯಕ್ಕೂ ವಿರಾಟ್‌ ಕೊಹ್ಲಿ ಅಲಭ್ಯ ?

2ನೇ ಏಕದಿನ ಪಂದ್ಯಕ್ಕೂ ವಿರಾಟ್‌ ಕೊಹ್ಲಿ ಅಲಭ್ಯ ?

0

ಲಂಡನ್‌ (London): ಇಂಗ್ಲೆಂಡ್‌ ವಿರುದ್ಧ ಗುರುವಾರ (ಜು.14) ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕೂ ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಗ್ರೋಯಿನ್‌ ಇಂಜುರಿಯಿಂದ ಇನ್ನೂ ಸಂಪೂರ್ಣ ಗುಣಮುಖರಾಗದ ಕಾರಣ ಎರಡನೇ ಏಕದಿನ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ.

ಇಂಗ್ಲೆಂಡ್‌ ವಿರುದ್ಧ ಮೂರನೇ ಟಿ20 ಪಂದ್ಯದ ವೇಳೆ ವಿರಾಟ್‌ ಕೊಹ್ಲಿ ಗ್ರೋಯಿನ್‌ ಇಂಜುರಿಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ನಡೆದಿದ್ದ ಏಕದಿನ ಸರಣಿಯ ಆರಂಭಿಕ ಪಂದ್ಯಕ್ಕೆ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಥಾನದಲ್ಲಿ ಶ್ರೇಯಸ್‌ ಅಯ್ಯರ್‌ ಆಡಿದ್ದರು. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಗಾಯದಿಂದಾಗಿ ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಈ ಕಾರಣದಿಂದಾಗಿ ಅವರು ಎರಡನೇ ಏಕದಿನ ಪಂದ್ಯದಲ್ಲಿಯೂ ಬೆಂಚ್‌ ಕಾಯಲಿದ್ದಾರೆಂದು ಎಎನ್‌ಐ ವರದಿ ಮಾಡಿದೆ. 2019ರಲ್ಲಿ ಕೊನೆಯ ಬಾರಿ ಶತಕ ಸಿಡಿಸಿದ್ದ ವಿರಾಟ್‌ ಕೊಹ್ಲಿ, ಇಲ್ಲಿಯವರೆಗೂ ಮೂರಂಕಿ ವೈಯಕ್ತಿಕ ಮೊತ್ತ ದಾಖಲಿಸಿಲ್ಲ.

ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧ ಮುಗಿದಿದ್ದ ಐದನೇ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ವಿರಾಟ್‌ ಕೊಹ್ಲಿ ವಿಫಲರಾಗಿದ್ದರು. ಇದರ ಬಳಿಕ ಇದೇ ತಂಡದ ವಿರುದ್ಧ ಟಿ20 ಸರಣಿಯಲ್ಲಿಯೂ ಬಲಗೈ ಬ್ಯಾಟ್ಸ್‌ಮನ್‌ ವೈಫಲ್ಯ ಅನುಭವಿಸಿದ್ದರು. ಎರಡನೇ ಟಿ20 ಪಂದ್ಯದಲ್ಲಿ ಕೇವಲ ಒಂದು ರನ್‌ಗೆ ವಿಕೆಟ್‌ ಒಪ್ಪಿಸಿದ್ದ ಕೊಹ್ಲಿ, ಬಳಿಕ ಮೂರನೇ ಪಂದ್ಯದಲ್ಲಿ 11 ರನ್‌ ಗಳಿಸಿ ಔಟ್‌ ಆಗಿದ್ದರು.

ಅಕ್ಟೋಬರ್-ನವೆಂಬರ್‌ ಅವಧಿಯಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದೆ. ಅಂದಹಾಗೆ ವಿರಾಟ್‌ ಕೊಹ್ಲಿ ಚುಟುಕು ಸ್ವರೂಪದಲ್ಲಿಯೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಟಿ20 ತಂಡದ ಸ್ಥಾನದ ಬಗ್ಗೆ ಯಾವುದೇ ಖಚಿತತೆ ಇಲ್ಲ.

ಏಕದಿನ ಸರಣಿಯಲ್ಲಿ ಈಗಾಗಲೇ ಒಂದು ಪಂದ್ಯವನ್ನು 10 ವಿಕೆಟ್‌ಗಳಿಂದ ಜಯಿಸಿದ ಭಾರತ ತಂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.