ಮನೆ ದೇವಸ್ಥಾನ ಪುಣ್ಯಾ ಕ್ಷೇತ್ರಗಳು

ಪುಣ್ಯಾ ಕ್ಷೇತ್ರಗಳು

0

ಕನ್ನಡ ನಾಡು ಪುಣ್ಯಕ್ಷೇತ್ರಗಳ ಬಿಡು ಇಲ್ಲಿ ಹಲವಾರು ಯಾತ್ರಾ ಸ್ಥಳಗಳು, ಗಿರಿ ಕ್ಷೇತ್ರಗಳು, ಸಿದ್ದರೂ, ಸಂತರು, ನೆಲೆಸಿದ ತಾಣಗಳು, ತೀರ್ಥಗಳು, ಮಠಮಾನ್ಯಗಳು ಇವೆ. ಯಾತ್ರಿಕರು ಇಲ್ಲಿಗೆ ಎಲ್ಲ ದಿನಂಪ್ರತಿ ಎಂಬಂತೆ ಬರುತ್ತಿರುತ್ತಾರೆ. ಪ್ರವಾಸಿಗಳು ಅಪಾರ ಸಂಖ್ಯೆಯಲ್ಲಿ ಬಂದು ಸಾಧ್ಯವಾದರೆ ಒಂದೆರಡು ದಿನ ತಂಗಿ ಎಲ್ಲವನ್ನು ನೋಡಿ ನೆಮ್ಮದಿ ಪಡೆದು ಹಿಂತಿರುಗುತ್ತಾರೆ.

 ಈ ನಾಡಿನ ಹಲವು ಕ್ಷೇತ್ರಗಳಲ್ಲಿ ಗೊತ್ತು ಪಡಿಸಿದ ದಿನಗಳಲ್ಲಿ ಜಾತ್ರಾ ರಥೋತ್ಸವ ನಡೆದು ಭಕ್ತರು ಬಂದು ಸೇರಲು ಅವಕಾಶವಿರುತ್ತದೆ ಹಬ್ಬ ಹರಿದಿನಗಳಲ್ಲಿ ದೇವಾಲಯಗಳಲ್ಲಿ ಜನಸಂದಣಿ ಜೋರು ಯಾಂತ್ರಿಕರ ಗುಂಪು ಮೈಸೂರಿನಲ್ಲಿ ನವರಾತ್ರಿ ಕಾಲದಲ್ಲಿ ನಡೆಯುವ ದಸರಾ ಉತ್ಸವಕ್ಕೆ ವಿದೇಶಗಳಿಂದಲೂ ಪ್ರವಾಸಿಗಳು ಬರುವರು.

ಕರ್ನಾಟಕವು ಹಿರಿದಾದ ಇತಿಹಾಸ, ಸಾಹಿತ್ಯ ,ಕಲೆ ಮತ್ತು ಸಂಸ್ಕೃತಿಗಳ ಹೊಂದಿರುವ ರಾಜ್ಯವಾಗಿದೆ. ಗಂಗರೂ, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಯಾದವರು, ಹೊಯ್ಸಳರು, ವಿಜಯನಗರದ ಅರಸರು ಈ ರಾಜ್ಯದ ವಿವಿಧ ಕಾಲಗಳಲ್ಲಿ ಆಳುತ್ತಿದ್ದರು ಆಧುನಿಕ ಆಡಳಿತದಲ್ಲಿ ಕರ್ನಾಟಕ 29 ಜಿಲ್ಲೆಗಳಿಂದ ಕೂಡಿದ್ದು ಒಂದೊಂದು ಜಿಲ್ಲೆಯಲ್ಲಿ ನೋಡಬೇಕಾದ ಕ್ಷೇತ್ರಗಳಿವೆ. ಕೆಲವು ಕ್ಷೇತ್ರಗಳು ಪುರಾಣ ಇತಿಹಾಸಕಾಲದಿಂದಲೂ ಪ್ರಸಿದ್ಧಿಯಾಗಿದೆ ಇದೊಂದು ಕ್ಷೇತ್ರವು ಸ್ಥಳ ಪುರಾಣಗಳೊಂದಿಗೆ ಮಹಿಮಾನ್ವಿತ ಎನಿಸಿ ಯಾಂತ್ರಿಕರನ್ನು ಬರ ಮಾಡಿಕೊಳ್ಳುತ್ತದೆ. ತಮಿಳು ನಾಡು 7 ಕ್ಷೇತ್ರಗಳಿಂದ ಪುಣ್ಯ ಪ್ರದವಾಗಿದೆ ಈ ಕ್ಷೇತ್ರಗಳು ಗೋಕರ್ಣವು ಒಂದು. ಹಿಂದುಗಳು ಯಾತ್ರ ಸ್ಥಳಗಳಂತೆ ಜೈನರ ಯಾತ್ರ ಸ್ಥಳಗಳು ಕೂಡ  ಕರ್ನಾಟಕದಲ್ಲಿದೆ. ಗುಲ್ಬರ್ಗದ ಬಂದೇ ನವಾಜ್ ಗೆ ಮುಸ್ಲಿಮರಂತೆ ಹಿಂದುಗಳು ಬಂದು ನೋಡುತ್ತಾರೆ…. ಕೊಡಗು ಜಿಲ್ಲೆಯ ಬೈಲುಕುಪ್ಪೆ ಬೌದ್ದರತಾಣ ಮಿನಿ ಟಿಬೆಟ್ ಎಂದೇ ಕರೆಸಿಕೊಂಡಿದೆ ಇದು ಬೌದ್ಧರ ಯಾತ್ರೆ ಸ್ಥಳವಾಗಿದೆ. ಮಂಡ್ಯ ಜಿಲ್ಲೆಯ ಕದಂಬ ಹಳ್ಳಿ ಹಾಸನ ಜಿಲ್ಲೆಯ ಶ್ರವಣಬೆಳಗೊಳರು ಜೈನರ ಯಾತ್ರಾ ಸ್ಥಳಗಳು ಬೀದರಿನ ನಾನಕ ಝರಾ ಸಿಖ್ಖರಿಗೆ ಪವಿತ್ರ ಎನಿಸಿದ ಕರ್ನಾಟಕ ಸರ್ವಧರ್ಮಗಳ ಸಮನ್ವಯದ ಬೀಡಾಗಿದೆ.

ಈ ಒಂದೊಂದು ಕ್ಷೇತ್ರವನ್ನು ಕನ್ನಡಿಗರು ಪರಿಚಯ ಮಾಡಿಕೊಳ್ಳಬೇಕಾಗುತ್ತದೆ ಪುಣ್ಯ ಪ್ರದವು ಆಗಿದೆ. ಇವೆಲ್ಲವೂ ಐವತ್ತಕ್ಕೂ ಹೆಚ್ಚು ಕ್ಷೇತ್ರಗಳೇಯ ಆಗುತ್ತದೆ.

ಘಾಟಿ ಸುಬ್ರಹ್ಮಣ್ಯ : ಬೆಂಗಳೂರು ನಗರಕ್ಕೆ ಸಮೀಪದ ದೊಡ್ಡಬಳ್ಳಾಪುರದಿಂದ 18 ಕಿಲೋಮೀಟರ್ ದೂರದಲ್ಲಿರುವ ಸುಬ್ರಮಣ್ಯ ಕ್ಷೇತ್ರ, ಇದು ಘಟ್ಟಗಳ ಮಧ್ಯೆ ಇರುವುದರಿಂದ ಊರಿಗೆ ಈ ಹೆಸರಿದೆ, ಇಲ್ಲಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವಿದೆ. ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಈ ಕ್ಷೇತ್ರವು ಒಂದು ಸ್ವಾಮಿ ಇಲ್ಲಿ ಶಿಲಾ ರೂಪದಲ್ಲಿದ್ದು ಮುಂಭಾಗದಲ್ಲಿ ಏಳು ಹೆಗಡೆ ಸರ್ಪರೂಪಿಯಾದವ ಸುಬ್ರಹ್ಮಣ್ಯ ಸ್ವಾಮಿಯಾಗಿ ಪೂರ್ವಭಿಮುಕವಾಗಿಯೂ ಹಾಗೂ ಅಭಿಮುಖವಾಗಿ ಲಕ್ಷ್ಮಿ ಸಮೇತನಾಗಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಒಂದೇ ಶಿಲೆಯಲ್ಲಿ ರಾರಾಜಿಸುತ್ತಿರುವುದು. ಈ ದೇವಸ್ಥಾನದಲ್ಲಿ ಸಂಡೂರಿನ ಮಹಾರಾಜ ಯಶವಂತರಾಯ ಗೋರ್ಪಡೆ ಕಟ್ಟಿಸುವುದಾಗಿ ತಿಳಿದು ಬಂದಿದೆ. ಸ್ವಾಮಿಯನ್ನು ಪೂಜಿಸಿದ ಭಕ್ತರಿಗೆ ಸರ್ಪದೋಷ ನಿವಾರಣೆಯಾಗಿ ಮಾಂಗಲ್ಯ ಭಾಗ್ಯ, ಸಂತಾನ ಭಾಗ್ಯ, ಆರೋಗ್ಯ ಲಭಿಸುತ್ತದೆ, ಗ್ರಹ ದೋಷ ನಿವಾರಣೆ ಆಗುತ್ತದೆ ಇಲ್ಲಿಯ ಜಾತ್ರೆ ಪ್ರಸಿದ್ಧವಾಗಿ ಪ್ರಸಿದ್ಧವಾಗಿದೆ ಯಾತ್ರಿಕ ಅನುಕೂಲಕ್ಕಾಗಿ ಛತ್ರಗಳು ಇವೆ.

ಹಿಂದಿನ ಲೇಖನಮೈಸೂರು ಜಿಲ್ಲೆಗೆ ರಾಷ್ಟ್ರಪತಿಗಳ ಆಗಮನ: ಡಾ. ಕೆ ವಿ ರಾಜೇಂದ್ರ
ಮುಂದಿನ ಲೇಖನರಾಹುಲ್ ಗಾಂಧಿಗೆ ಬಿಗ್ ರಿಲೀಫ್: 2 ವರ್ಷ ಜೈಲು ಶಿಕ್ಷೆಗೆ ಮಧ್ಯಂತರ ತಡೆ ನೀಡಿದ ಸುಪ್ರೀಂಕೋರ್ಟ್