ಕ್ಷೇತ್ರ – ತುಲಾ ರಾಶಿಯಲ್ಲಿ 20 ಡಿಗ್ರಿ ಯಿಂದ 30 ಡಿಗ್ರಿ. ರಾಶಿಸ್ವಾಮಿ – ಶುಕ್ರ, ನಕ್ಷತ್ರಸ್ವಾಮಿ – ಬೃಹಸ್ಪತಿ, ನಾಡಿ – ಅಂತ್ಯ, ಗಣ – ರಾಕ್ಷಸ, ನಾಮಾಕ್ಷರ – ತೂ,ತಿ,ತೇ. ಶರೀರಭಾಗ – ಹೊಟ್ಟೆಯ ಕೆಳಭಾಗ, ಮೂತ್ರಾಶಯ, ಸಣ್ಣಕರುಳು ಸಂವೇದಿ ಗ್ರಂಥಿಗಳು.
ರೋಗಗಳು :- ರಂಜಕದ ಕೊರತೆ, ಮಧುಮೇಹ, ಮೆದುಳಿನಲ್ಲಿ ಗ್ರಂಥಿ, ಕಿಡ್ನಿಯಲ್ಲಿ ಸುಸ್ತು, ತಲೆ ತಿರುಗುವುದು, ಹಿಸ್ಟೀರಿಯಾ, ಕೋಮ, ಮೂರ್ಚೆ.
ಸಂರಚನೆ – ಈ ನಕ್ಷತ್ರದವರು ಪ್ರಸನ್ನಮುಖಿಗಳು, ಆಕರ್ಷಕ ಶರೀರವುಳ್ಳವರು, ಒಳ್ಳೆಯ ಕಾರ್ಯ ಮಾಡುವರು, ಈಶ್ವರನ ಭಕ್ತರು, ಉದಾರರು, ಮುಕ್ತಹಸ್ತರು, ತರ್ಕಪೂರ್ಣ, ವಿಚಾರವಂತರು, ಸತ್ಯ, ನ್ಯಾಯ ಪ್ರಿಯರು, ಸ್ವತಂತ್ರ ವಿಚಾರ ಹೊಂದಿದವರು ಆಗುವವರು. ಆಸೆ ಬುರುಕ, ಅಸೂಯಾ ಪರ ಅಭಿಮಾನಿ, ಶಿಕ್ಷಣ ಕಾರ್ಯದಲ್ಲಿ ತೊಡಗಿದವರೂ ಆಗಬಹುದು.
ಉದ್ಯೋಗ ಮತ್ತು ವಿಶೇಷ :- ಈ ನಕ್ಷತ್ರದಲ್ಲಿ ಹುಟ್ಟಿದವರು ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ವ್ಯವಹಾರ ಮಾಡುವವರು, ಸರ್ಕಾರಿ ಕೆಲಸ ಮಾಡುವುದು, ಅಧ್ಯಾಪಕ, ಗ್ರಂಥಕಾರ, ಸಂಪಾದಕ, ಸಂಶೋಧಕ, ಆಲೋಚಕ, ಸಲಹಾಕಾರ, ಮಂತ್ರಿ, ರಾಜನೀತಿಗ್ನ, ಹಡಗು ವ್ಯವಹಾರ ನಿರ್ವಹಿಸುವವರು, ನಿರ್ದೇಶಕರು, ಮುಖ್ಯಧ್ಯಾಪಕರು, ಲೆಕ್ಕಪರಿಶೋಧಕರು, ಹೃದಯ ವಿಶೇಷ ತಜ್ಞರು, ನಟ ನಟಿಯರು, ಸಿನಿಮಾ ಕಾರ್ಯಕರ್ತರು, ವಿಶ್ವವಿದ್ಯಾನಿಲಯದ ಕುಲಪತಿಗಳು ಆಗಬಹುದಾಗಿದೆ. ಇವರು ಸಿಹಿ ಪದಾರ್ಥ ರಸಮಯ ಪದಾರ್ಥ ಪ್ರಿಯರಾಗುವವರು.
ಶುಕ್ರನ ರಾಶಿಯಲ್ಲಿರುವ ಗುರುವಿನ ನಕ್ಷತ್ರದಲ್ಲಿ ಹುಟ್ಟಿದವರು ತಿರುಗಾಡುವ ಕಲಾವಿದ, ವ್ಯವಹಾರಿಕ ವ್ಯಾಪಾರಿ, ಉತ್ತಮ ಕಾರ್ಯ ಮಾಡುವ ಲೆಕ್ಕ ಪರಿಶೋಧಕರಾಗಬಹುದಾಗಿದೆ. ಮಹತ್ವಕಾಂಕ್ಷೆಯ ವೈಭವೋಪೇತ ಜೀವನ ಬಯಸಿದ, ಉನ್ನತಿ ಹೊಂದುವ ಸ್ವಭಾವದವರಾಗುವುದು. ಜ್ಯೋತಿಷ್ಯದಲ್ಲಿ ನಂಬಿಕೆಯಿರುವ ಇವರು ಸಫಲ ಜೀವನವನ್ನು ಹೊಂದುವರು. ಸೂರ್ಯನು ಈ ನಕ್ಷತ್ರ ಪಾದಗಳು ಕಾರ್ತಿಕ ಮಾಸದಲ್ಲಿ ಕೊನೆಯ 10 ದಿನಗಳಾಗಿರುತ್ತದೆ ಚಂದ್ರನ್ನು 27ನೇ ದಿವಸದಲ್ಲಿ 18 ಗಂಟೆ ಇರುತ್ತಾನೆ.