ಮನೆ ಜ್ಯೋತಿಷ್ಯ ವಿಶಾಖ ನಕ್ಷತ್ರ ಮತ್ತು ಜಾತಕ 

ವಿಶಾಖ ನಕ್ಷತ್ರ ಮತ್ತು ಜಾತಕ 

0

 ವಿಶಾಖಾ ನಕ್ಷತ್ರದ ಜಾತಕರ ವಿವಾಹಕ್ಕೆ ಹೊಂದುವ ನಕ್ಷತ್ರಗಳು :

Join Our Whatsapp Group

 ವಿಶಾಖಾ ನಕ್ಷತ್ರದ ಕನೈಗೆ :

 1,2,3,ನೇ ಚರಣ

 ಅಶ್ವಿನಿ, ಭರಣಿ, ಮೃಗಶಿರಾ ಆರ್ದ್ರಾ, ಹಸ್ತಾ ಚಿತ್ತಾ,ಸ್ವಾತಿ, ಜೇಷ್ಠಾ,  ಮೂಲಾ, ಧನಿಷ್ಠಾ, ಶತಭಿಷಾ, ಉತ್ತರ ಭಾದ್ರಪದಾ,

 4ನೇ ಚರಣ

 ಅಶ್ವಿನಿ, ಭರಣಿ, ಮೃಗಶಿರಾ, 1,2,ನೇ ಚರಣ ಮಘಾ ಹಸ್ತಾ, ಚಿತ್ತಾ, ಜೇಷ್ಠಾ, ಮೂಲಾ, ಪೂರ್ವಾಷಾಢ, ಧನಿಷ್ಠಾ, ಶತಭಿಷಾ, ಉತ್ತರಾಭಾದ್ರಪದಾ,  ರೇವತಿ,

 ವಿಶಾಖಾ ನಕ್ಷತ್ರದ ವರನಿಗೆ :

 1, 2,3 ನೇ ಚರಣ

ಅಶ್ವಿನಿ, ಭರಣಿ, ರೋಹಿಣಿ,ಮೃಗಶಿರಾ, ಆರ್ದ್ರಾ,ಮಾಘಾ ಹಸ್ತಾ, ಚಿತ್ತಾ, ಅನುರಾಧ, ಜೇಷ್ಠಾ, ಶ್ರವಣ ಶತಭಿಷಾ

 4ನೇ ಚರಣ

ಅಶ್ವಿನಿ, ಭರಣಿ, ರೋಹಿಣಿ, ಮೃಗಶಿರಾ, ಆರ್ದ್ರಾ,ಪುಷ್ಯ, ಆಶ್ಲೇಷಾ, ಮಘಾ, ಪೂರ್ವಾ ಪಾಲ್ಗುಣಿ, ಚಿತ್ತಾ, ಸ್ವಾತಿ, ಅನುರಾಧ, ಜೇಷ್ಠಾ, ಮೂಲಾ, ಪೂರ್ವಾಷಾಢ, ಧನಿಷ್ಠಾ ಶತಭಿಷಾ, ಉತ್ತರಭಾದ್ರಪದ ರೇವತಿ.

* ವಿಶಾಖಾ ನಕ್ಷತ್ರದವರ ಜನನಕ್ಕೆ ಶಾಂತಿ :

ಇಂದ್ರಾಗ್ನಿ ಆಗತಗ್ಂ ಸುತಂಗೀರ್ಭಿರ್ನ್ನ ಭೋರ್ವರೇಣ್ಯಂ ಅಸ್ಯಪಾತಂ ಧಿಯೇಷಿತಾ ||

ಈ ನಕ್ಷತ್ರದಲ್ಲಿ ಸಂತಾನದ ಜನನವಾದಾಗ ತಾಯ್ತಂದೆಯರು ಈಮೇಲಿನ ಮಂತ್ರವನ್ನು ಒಂದು ಮಾಲೆ ಜಪಿಸಿ, ಅಕ್ಕಿ-ಬೆಲ್ಲ, ವಿಶಾಖಾ 1,2,3ನೇ ಚರಣಕ್ಕೆ ಅವರೆಕಾಳು, 4ನೇ ಚರಣಕ್ಕಾಗಿ ತೊಗರಿಬೇಳೆಯನ್ನು ಯಥಾಶಕ್ತಿ ದಾನ ನೀಡಬೇಕು. ಇದರಿಂದ ನಕ್ಷತ್ರದೋಷ ಶಾಂತವಾಗುತ್ತದೆ.

ಯಂತ್ರ :

ಓಂ ಹ್ರಾಂ ಇಂದ್ರಾಯ ನಮಃ ಓಂ ಹ್ರಾಂ ಅಗ್ನಿಯೇ ನಮಃ

ಈ ಯಂತ್ರವನ್ನು ಸುವರ್ಣಪತ್ರದ ಮೇಲೆ ಉತ್ತೀರ್ಣಗೊಳಿಸಿ, ಕಮಲದ ಪುಷ್ಪದಲ್ಲಿ ಸ್ಥಾಪಿಸಿ, ದೇವದಾರು ಧೂಪವನ್ನು ನೀಡಿ ಪೂಜಿಸಬೇಕು, ಮತ್ತು ಈ ಮೇಲೆ ನೀಡಿದ ಮಂತ್ರವನ್ನು ಒಂದು ಸಹಸ್ರ ಸಂಖ್ಯೆಯಲ್ಲಿ ಜಪ ಮಾಡಬೇಕು. ಪಾಯಸ ನೈವೇದ್ಯ ಮಾಡಿ, ಪಾಯಸಾನ್ನದಲ್ಲಿಯೇ ಹೋಮ ಮಾಡಿ, ಚಿತ್ರಾನ್ನದ ಬಲಿ ಅರ್ಪಿಸಬೇಕು. ನಂತರ, ಶರೀರದಲ್ಲಿ ಯಂತ್ರ ಧಾರಣ ಮಾಡಬೇಕು. ಇದರಿಂದ ವಿಶಾಖಾ ನಕ್ಷತ್ರದ ಸರ್ವದೋಷಗಳು ಶಾಂತವಾಗುತ್ತವೆ.