ಮನೆ ಜ್ಯೋತಿಷ್ಯ  ವಿಶಾಖಾ ನಕ್ಷತ್ರ ಮತ್ತು ಜಾತಕ

 ವಿಶಾಖಾ ನಕ್ಷತ್ರ ಮತ್ತು ಜಾತಕ

0

           ವಿಶಾಖಾ ನಕ್ಷತ್ರದ ಪ್ರಥಮ ಮೂರು ಚರಣದ ಕ್ಷೇತ್ರ ವ್ಯಾಪ್ತಿ 20 ಅಂಶ ತುಲಾ ರಾಶಿಯಿಂದ 30 ಅಂಶ ತುಲಾರಾಶಿಯಲ್ಲಿ ರಾಶಿ ಸ್ವಾಮಿ  ಶುಕ್ರ, ನಕ್ಷತ್ರ ಸ್ವಾಮಿ ಬೃಹಸ್ಪತಿ.ನಕ್ಷತ್ರ ದೇವತೆ  ಇಂದ್ರಾಗ್ನಿ  ದೇವತೆಗಳು, ತಾರಾಸಮೂಹ 4 ಆಕಾಶ ಭಾಗ ಉತ್ತರ, ಅಂತ್ಯನಾಡಿ, ವ್ಯಾಘ್ರಯುನಿ, ರಾಕ್ಷಸಾಗಣ, ನಾಮರಕ್ಷ ತಿ, ತು, ತೇ, ವಿಶಾಕಾ ನಕ್ಷತ್ರದ ಪ್ರಥಮ ಮೂರು ಚರಣಗಳು ಪ್ರತಿನಿಧಿಸುವ ಜಾತಕಾನ ಶರೀರ ಭಾಗ ಹೊಟ್ಟೆಯ ಕೆಳಭಾಗ ಮೂತ್ರಾಶಯದ ಕೋಷ್ಟಕ ಮತ್ತು ಅದರ ಸಮೀಪದ ಭಾಗ, ಮೂತ್ರಪಿಂಡ, ಸಂತ್ರಾನ ಮತ್ತು ಸಂವೇದ ಗ್ರಂಥಿಗಳು.

Join Our Whatsapp Group

ವಿಶಾಖಾ ನಕ್ಷತ್ರದ ಜಾತಕಾನ ಸ್ವರೂಪ 1,2,3,ನೇ ಚರಣ :

        ಪ್ರಸನ್ನವದನ, ಆಕರ್ಷಕ, ಪ್ರಭಾವಶಾಲಿ ವ್ಯಕ್ತಿತ್ವ,ನಮ್ರ, ಶ್ರದ್ಧೆಯುಳ್ಳವ ಭಗವಂತನ ಭಕ್ತ. ಸಂಪ್ರದಾಯವಾದಿ, ಉತ್ತಮ ಕಾರ್ಯಗಳನ್ನು ಪ್ರವೇಶಿಸುವ,ಉದಾರ, ಕೊಡುಗೈಯವನು ಸ್ವತಂತ್ರ ವಿಚಾರಧಾರ, ಸತ್ಯವಂತ, ನ್ಯಾಯಪ್ರಿಯ, ಪ್ರತಿಭಾವಂತ, ಸುಸಂಸ್ಕೃತ, ಸ್ನಾತಕ, ಮತ್ತು ಕತೆಯಲ್ಲಿ ಕುಶಲ, ತರ್ಕಪೂರ್ವ,ಹೊಳಪುಳ್ಳ ಮತ್ತು ಸ್ವಚ್ಛ ವಸ್ತ್ರಗಳನ್ನು ಧರಿಸುವವ, ಲೋಬಿ, ಈರ್ಷೆಯುಳ್ಳವ, ಗರ್ವಿಷ್ಟ ಮತ್ತು ಶಿಕ್ಷಣದ ಕಾರ್ಯಗಳಿಗೆ ಸಂಬಂಧಪಟ್ಟ ಹೊಂದಿದವ.

ಉದ್ಯೋಗ :

         ಅಂತರಾಷ್ಟ್ರೀಯ ಸಂಸ್ಥೆಗಳೊಡನೆ ಸಂಬಂಧ ಹೊಂದಿರುವವ, ಸರಕಾರಿ ಉದ್ಯೋಗಿ,ಪಾಲುದಾರಿಕೆಯಲ್ಲಿ ಲಾಭ ಪ್ರಾಪ್ತಿಹೊಂದುವ ಶಿಕ್ಷಕ, ಪ್ರಾಧ್ಯಾಪಕ, ಗ್ರಂಥಗಾರ, ಪತ್ರ ಸಂಪಾದಕ, ಸಂಶೋಧಕ, ರಾಜನೀತಿಜ್ಞ,ಮಂತ್ರಿ,ಸಲಹೆಗಾರ, ಟ್ರಾವೆಲಿಂಗ್ ಏಜೆಂಟ್,ಯತ್ರಾ ಅಧಿಕಾರಿ ಶಿಪ್ಪಿಂಗ್,ವಿಮಾನಯಾನ, ವಿದೇಶದವರೊಡನೆ ಸಂಬಂಧ, ಬ್ಯಾಂಕರ್, ಬ್ಯಾಂಕ್ ಉದ್ಯೋಗಿ ಮನೆಗಳನ್ನು ನಿರ್ಮಿಸುವ ಮಣ್ಣಿನ ತೋಟ, ದೊಡ್ಡ ದೊಡ್ಡ ಕಂಪನಿಗಳ ನಿರ್ದೇಶಕ, ನ್ಯಾಯಾಧೀಶ,  ಲೆಕ್ಕ ತಾಪಾಸಕ,ಮುಖ್ಯೋಪಾಧ್ಯಾಯ, ದೈಹಿಕ ತಜ್ಞ,ಉತ್ಪಾದನೆ ಕಾರ್ಯ, ಬಣ್ಣದ ಕಾಗದ, ಚಲನಚಿತ್ರ, ಪ್ರಚಾರ, ಜಾಹೀರಾತು, ನಟ ದುಬಾರಿಬೆಲೆಯ ಆಭರಣ ವಸ್ತ್ರ ಟಂಕಸಾಲೆ, ಪ್ರಕಾಶನ,ದ್ರವ ಅಥವಾ ಸಿಹಿ ಪದಾರ್ಥ ಸ್ವಾಗತಗಾರ, ಉದ್ಘಾಟನಕರ್ತಾ, ಉಪಕುಲಪತಿ ಅಭಿನಯಕರ್ತಾ.

 ವಿಶಾಖಾ ಜಾತಕನ ರೋಗ  :

 ಅಧಿವೃಕ್ಕ್ ನ ಸುಕುಂಚನ, ಫಾಸ್ಛೋರಸ್ ಅಂಶದ ಕೊರತೆ,ಮೂತ್ರಪಿಂಡದ ತಡೆ ಸಂಕುಚನ, ಮಧುಮೇಹ ಇನ್ಸುಲಿನ್ ಕೊರತೆ, ಮೂತ್ರಪಿಂಡದ ದೌರ್ಬಲ್ಯದಿಂದ ನಿಶಕ್ತಿ,ಸಿಡುಕುತನ ತಲೆ ಸುತ್ತು,ಉನ್ಮಾದ, ಕೋಮಾ ಮೂತ್ರಪಿಂಡದ ಉದ್ಭೇದನ.