೧ ‘ವಿಷಮ’ವೆಂದರೆ ಆಕ್ರಮ, ಅಸಮ ಮತ್ತು ಕಷ್ಟ ಇವೇ ಇದರ ಅರ್ಥಗಳಲ್ಲಿ ಕೆಲವು
೨. ಇದರಲ್ಲಿ ಪೂರಕ, ಅಂತರಕುಂಭಕ, ರೇಚಕ ಮತ್ತು ಬಾಹ್ಯ ಕುಂಭಕ ಇವುಗಳಲ್ಲಿಯ ಕಾಲಾವಕಾಶ ಸಮವಾಗಿರದೆ ಬೇರೆ ಬೇರೆಯಾಗಿರುತ್ತದೆ. ಇದರಿಂದ ಪೂರಕ ಮತ್ತು ರೇಚಕ ಗಳಲ್ಲಿಯ ಉಸಿರಾಟಗಳು ಸಾಮರಸ್ಯವನ್ನು ಹೊಂದದಿರುವುದರಿಂದಲೂ ಅವುಗಳ ಕಾಲಾವಧಿಗಳ ಪ್ರಮಾಣವು ಸಮನಾಗಿಲ್ಲದಿರುವುದರಿಂದಲೂ ಅಭ್ಯಾಸಿಯು ಕಷ್ಟಕ್ಕೂ ಅಪಾಯಕ್ಕೂ ಗುರಿಯಾಗುವ ಸಂಭವವುಂಟು.
೩. ಈ ಬಗೆಯ ಪ್ರಾಣಾಯಾಮಾಭ್ಯಾಸದಲ್ಲಿ ಉಸಿರನ್ನು ಒಳಕ್ಕೆಳೆಯುವ ಕಾಲ 5 ಸೆಕೆಂಡುಗಳಿದ್ದು, ಅದನ್ನು ಒಳಗೆ ತಡೆದಿಡುವ ಕಾಲ 20 ಸೆಕೆಂಡುಗಳಿದ್ದು, ಮತ್ತು ಹೊರಕ್ಕೆ ಬಿಡುವ ಕಾಲ 10 ಸೆಕೆಂಡುಗಳಾಗುವುದಾದರೆ ಇವುಗಳ ಪ್ರಮಾಣ 1:42 ಆಗುತ್ತದೆ. ಇಂಥ ಸಂದರ್ಭದಲ್ಲಿ ಅಭ್ಯಾಸಿಯು ಉಸಿರನ್ನು ಹೊರಕ್ಕೆ ಬಿಡುವಾಗ ಸಾಮರಸ್ಯವನ್ನುಳಿಸಲು ಬಲು ಕಷ್ಟ ಪಡಬೇಕಾಗುತ್ತದೆ. ಆದರೆ ಅಭ್ಯಾಸ ಮಾಡುತ್ತ ಮಾಡುತ್ತ ಇದು ಸುಲಭವಾಗುವುದು.
೪. ಇದಕ್ಕೆ ವ್ಯತಿರಿಕ್ತವಾಗಿ, ‘ಪೂರಕ’ದ ಕಾಲ 10 ಸೆಕೆಂಡುಗಳು, ‘ಅಂತರಕುಂಭಕ’ದ ಕಾಲ 20 ಸೆಕೆಂಡುಗಳು ಮತ್ತು ರೇಚಕದ ಕಾಲ 5 ಸೆಕೆಂಡುಗಳಾಗುವುದಾದರೆ ಅವುಗಳ ಪ್ರಮಾಣ 2:4:1 ಆಗುತ್ತದೆ.
5. ಹಾಗಲ್ಲದೆ, ಪೂರಕಕ್ಕೆ 20 ಸೆಕೆಂಡುಗಳು ಅಂತರಕುಂಭಕಕ್ಕೆ 10 ಸೆಕೆಂಡುಗಳು ಮತ್ತು ರೇಚಕಕ್ಕೆ 5 ಸೆಕೆಂಡುಗಳಾಗುವುದಾದರೆ ಅವುಗಳ ಪ್ರಮಾಣ 4.21 ಆಗುತ್ತದೆ.
೬. ಈ ಪ್ರಾಣಾಯಾಮದ ಒಂದು ಆವೃತ್ತಿಯಲ್ಲಿ ಇವುಗಳ ಪ್ರಮಾಣಗಳು 1:2:4: 2:4:1 ಮತ್ತು 4:12 – ಈ ಬಗೆಯಲ್ಲಾದರೆ ಈ ಮೂರು ಪ್ರಮಾಣಗಳಿಂದ ಕೂಡಿದ ಉಸಿರಾಟವು ಪ್ರಾಣಾಯಾಮದಲ್ಲಿ ಒಂದು ಸುತ್ತಾದಂತೆ ಎಣಿಸಬೇಕು.
2. ‘ಬಾಹ್ಯ ಕುಂಭಕ’ವನ್ನೂ ಈ ಪ್ರಾಣಾಯಾಮದ ಕ್ರಮದಲ್ಲಿ ಆಚರಿಸುವುದಾದರೆ, ಈ ಪ್ರಮಾಣಗಳ ಸಂಕಲನಗಳು ಮತ್ತಷ್ಟು ಹೆಚ್ಚುತ್ತವೆ.
೮. ಪ್ರಸಿದ್ಧವಾದ ಉಜ್ಜಾಯಿ, ಸೂರ್ಯಭೇದನ, ನಾಡಿಶೋಧನ, ಭ್ರಾಮರೀ ಶೀತಳೀ, ಮತ್ತು ಶೀತಕರೀ ಪ್ರಾಣಾಯಾಮಗಳಲ್ಲಿ ಈ ಮುಂದೆ ವಿವರಿಸಲಿರುವ ಪ್ರಾಣಾಯಾಮದಲ್ಲಿ ‘ವಿಲೋಮ’, ‘ಅನುಲೋಮ’ ಮತ್ತು ‘ಪ್ರತಿಲೋಮ ಕ್ರಮಗಳಲ್ಲಿ ಪೂರಕ, ಅಂತರ ಕುಂಭಕ ಮತ್ತು ರೇಚಕಗಳಲ್ಲಿಯ ಕಾಲಾವತಿಯಲ್ಲಿ ಬೇರೆ ಬೇರೆ ಪ್ರಮಾಣ ಗಳನ್ನನುಸರಿಸುವುದಾದರೆ, ಪ್ರಮಾಣಗಳ ಸಂಕಲನವು ಒಂದು ಜ್ಯೋತಿರ್ಗಣಿತವೇ ಆಗಿ ಪರಿಣಮಿಸುತ್ತದೆ.
೯. ಯಾವ ಮಾನವನೇ ಆಗಲಿ ಈ ಎಲ್ಲಾ ವಿಧವಾದ ಪ್ರಾಣಾಯಾಮ ವಿಧಿಗಳನ್ನೂ ಮತ್ತು ಅವುಗಳಲ್ಲಿಯ ಬೇರೆ ಬೇರೆ ಪ್ರಮಾಣದ ಸಂಕಲನಗಳನ್ನೂ ಒಂದು ಜೀವಮಾನದಲ್ಲಿ ನಡೆಸುವುದು ಅಸಾಧ್ಯದ ಕೆಲಸ
೧೦. ‘ವಿಷಮವೃತ್ತಿ ಪ್ರಾಣಾಯಾಮ’ದ ಆಚರಣೆಯಲ್ಲಿ ಅನೇಕ ಅಪಾಯಗಳಿಗೆ ಗುರಿಯಾಗುವ ಸಂಭವವಿದೆ. ಈ ಕಾರಣದಿಂದ ಅಭ್ಯಾಸಿಯು ಈ ವಿಧವಾದ ಪ್ರಾಣಾಯಾಮ ವನ್ನು ತಾನಾಗಿಯೇ ಅಭ್ಯಸಿಸುವ ಯತ್ನವನ್ನು ಬಿಟ್ಟು ಇದಕ್ಕಾಗಿ ಈ ಹಾದಿಯಲ್ಲಿ ಚೆನ್ನಾಗಿ ನುರಿತ ಗುರುವಿನ ನೇತೃತ್ವದಲ್ಲಿ ಆತನ ಮಾರ್ಗದರ್ಶನದಲ್ಲಿಯೇ ಅಭ್ಯಾಸ ಮಾಡಬೇಕು.
೧೧. ಪೂರಕ, ಅಂತರಕುಂಭಕ ಮತ್ತು ರೇಚಕಗಳಿಗಾಗುವ ಕಾಲದ ಪ್ರಮಾಣಗಳು ಸಮವಾಗಿರದ ದೆಸೆಯಿಂದ ಸಾಮರಸ್ಯಕ್ಕೆ ಅಸ್ತವ್ಯಸ್ತವುಂಟಾಗಿ, ಆ ಮೂಲಕ ದೇಹದ ವಿವಿಧ ಅಂಗರಚನೆಗಳು, ಅದರಲ್ಲಿಯೂ ಉಸಿರಾಟಕ್ಕೆ ಸಂಬಂಧಿಸಿದವುಗಳೂ ಮತ್ತು ನರಮಂಡಲಗಳೂ ಅಕ್ರಮವಾದ ಹಿಗ್ಗು ಕುಗ್ಗುಗಳಿಗೊಳಗಾಗಿ ಬಹಳ ಶ್ರಮಕ್ಕೆ ಗುರಿಯಾಗಬೇಕಾಗುತ್ತದೆ.
೧೨.’ಸಮವೃತ್ತಿ ಪ್ರಾಣಾಯಾಮ’ದ ವಿಷಯದಲ್ಲಿ ಕುಂಭಕವನ್ನು ಅಭ್ಯಸಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು (೫ ರಿಂದ ೧೦ನೇ ಪರಿಚ್ಛೇದಗಳಲ್ಲಿ ವಿವರಿಸಿರುವಂತೆ), ‘ವಿಷಮವೃತ್ತಿ ಪ್ರಾಣಾಯಾಮ’ದ ವಿಷಯಕ್ಕೂ ಅನ್ವಯಿಸುತ್ತದೆ ಎಂಬುದನ್ನು ಇಲ್ಲಿ ಗಮನಿಸ ಬೇಕು.
೧೩. ಪ್ರಾಣಾಯಾಮಾಭ್ಯಾಸಕನು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯನ್ನು ಸ್ವಾತ್ಮ ‘ರಾಮಯೋಗೀಂದ್ರನು ಹೀಗೆ ವ್ಯಕ್ತಪಡಿಸಿದ್ದಾನೆ.
ಯಥಾ ಸಿಂಹೋ ಗಜೋ ವ್ಯಾಘೋ ಭವೇತ್ ವಶ್ಯ: ಶನ್ನೇ ಶನೈಃ ।
ತಥೈವ ಸೇವಿತೋ ವಾಯು ಅನ್ಯಥಾ ಹಂತಿ ಸಾಧಕಮ್ ।।
ಪ್ರಾಣಾಯಾಮೇನ *ಯುಕ್ರೇನ ಸರ್ವರೋಗಕ್ಷಯೋ ಭವೇತ್ । ಆಯುಕ್ತಾಭ್ಯಾಸಯುತ್ತೇನ ಸರ್ವರೋಗಸಮುದ್ರಃ ।।
ಹಿಕ್ಕಾ ಶ್ವಾಸಪ್ಪ ಕಾಸಶ್ಚ ಶಿರಃ ಕರ್ಣಾಕ್ಷಿವೇದನಾಃ ।
ಮಭವಂತಿ ವಿವಿಧಾಃ ರೋಗಾಃ ಪವನಸ್ಯ ಪ್ರಕೋಪತಃ ।
– ಹಠಯೋಗಪ್ರದೀಪಿಕೆ , ದ್ವಿತೀಯೋಪದೇಶ.
ಅಂದರೆ, ಪ್ರಾಣವಾಯುವನ್ನು ಸಿಂಹ, ಆನೆ, ಹುಲಿ ಮೊದಲಾದ ಕಾಡು ಮೃಗಗಳನ್ನು ಮೆಲ್ಲ ಮೆಲ್ಲಗೆ ಪಳಗಿಸುವಂತೆ ನಿಧಾನವಾಗಿ ಪಳಗಿಸಿದರೆ ಮಾತ್ರ ಅದು ನಮ್ಮ ವಶವಾಗುತ್ತದೆ.. ಇಲ್ಲವಾದಲ್ಲಿ ಅವುಗಳಂತೆ ಇದೂ ಕೂಡ ಪ್ರಾಣಾಯಾಮಾಭ್ಯಾಸಕನನ್ನು ಕೊಲ್ಲುತ್ತದೆ. ಸರಿಯಾದ ರೀತಿಯಲ್ಲಿ ಪ್ರಾಣವಾಯುವನ್ನು ಬಳಸಿದರೆ ಅದರಿಂದ ಸಮಸ್ತ ರೋಗಗಳೂ ನಾಶವಾಗುತ್ತದೆ. ಹಾಗಲ್ಲದೆ ಅದನ್ನು ಅಕ್ರಮವಾಗಿ ಉಪಯೋಗಿಸಿದರೆ ಇಲ್ಲದ ರೋಗಗಳಿಗೆ ಗುರಿಯಾಗ ಬೇಕಾಗುತ್ತದೆ. ಅಲ್ಲದೆ ಪ್ರಾಣವಾಯುವನ್ನು ಸರಿಯಾಗಿ ಬಳಸದೆ ಅದಕ್ಕೆ ಕೋಪವಾಗುವಂತೆ ಮಾಡಿದರೆ (ಅಕ್ರಮದ ಬಳಕೆಯಿಂದ) ಬಿಕ್ಕಳಿಕೆ, ಉಬ್ಬಸ, ಕಣ್ಣುಬೇನೆ, ಕಿವಿಪೋಟು ಮೊದಲಾದ ರೋಗಗಳಿಗೆ ಗುರಿಯಾಗಬೇಕಾಗುತ್ತದೆ.
ವಿಲೋಮ, ಅನುಲೋಮ ಮತ್ತು ಪ್ರತಿಲೋಮ ಪ್ರಾಣಾಯಾಮಗಳು :
‘ ಸಮವೃತ್ತಿ’ ಮತ್ತು ‘ವಿಷಮವೃತ್ತಿ ಪ್ರಾಣಾಯಾಮ’ಗಳು, ಅವುಗಳಲ್ಲಿ ಆಚರಿಸಬೇಕಾದ ಪೂರಕ, ಅಂತರಕುಂಭಕ ಮತ್ತು ರೇಚಕಗಳ ಕಾಲಾವಧಿಗಳನ್ನು ಪ್ರಮಾಣಗಳಲ್ಲಿರಿಸುವುದಕ್ಕೆ ಸಂಬಂಧಿಸಿದ್ದು, ಪ್ರಾಣಾಯಾಮದ ಈ ‘ವಿಲೋಮ’, ‘ಅನುಲೋಮ’, ಮತ್ತು ‘ಪ್ರತಿಲೋಮ’ ದೆ ಬಗೆಗಳು ಉಸಿರನ್ನು ಒಳಕ್ಕೆಳೆಯುವ ಮತ್ತು ಅದನ್ನು ಹೊರಕ್ಕೆ ಬಿಡುವ ಅಭ್ಯಾಸಕ್ರಮಕ್ಕೆ ಸಂಬಂಧಿಸಿದ್ದು, ‘ವಿಲೋಮ’ದಲ್ಲಿ ಉಸಿರನ್ನು ಒಳಕ್ಕೆಳೆಯುವುದು ಅಥವಾ ಹೊರಕ್ಕೆ ಬಿಡುವುದು, ಇವುಗಳನ್ನು ಒಂದಾದ ಮೇಲೊಂದರಂತೆ ಮೆಲ್ಲ ಮೆಲ್ಲಗೆ ಒಂದನ್ನು ಮಾಡಿ ಸ್ವಲ್ಪ ಕಾಲ ಬಿಟ್ಟು ಇನ್ನೊಂದನ್ನು ಮಾಡುವ ಕ್ರಮ. ‘ಅನುಲೋಮ’ ಕ್ರಮದಲ್ಲಿ ‘ಉಜ್ಜಾಯೀ’ ಪ್ರಾಣಾಯಾಮ ದಲ್ಲಿರುವಂತೆ, ಉಸಿರನ್ನು ಮೂಗಿನ ಎರಡು ಹೊಳೆಗಳಲ್ಲಿಯೂ ಒಳಕ್ಕೆಳೆದು. ಬಳಿಕ ‘ನಾಡೀ ಶೋಧನ ಪ್ರಾಣಾಯಾಮ’ದಲ್ಲಿದ್ದಂತೆ ಉಸಿರನ್ನು ಒಂದಾದ ಮೇಲೊಂದರಂತೆ ಬಲ ఎಡ ಹೊಳ್ಳೆಗಳ ಮೂಲಕ ಹೊರಕ್ಕೆ ಬಿಡಬೇಕು. ‘ಪ್ರತಿಲೋಮ’ ಕ್ರಮದಲ್ಲಿ ‘ಪೂರಕ’ದಲ್ಲೆಲ್ಲ ಒಂದಾದ ಮೇಲೊಂದರಂತೆ ಬಲ ಎಡಹೊಳ್ಳೆಗಳ ಮೂಲಕವೇ ಉಸಿರನ್ನೆಳೆದು, ‘ಉಜ್ಜಾಯಿ’ ಪ್ರಾಣಾಯಾಮದಲ್ಲಿರುವಂತೆ, ‘ರೇಚಕ’ದಲ್ಲಿ ಎರಡೂ ಹೊಳ್ಳೆಗಳ ಮೂಲಕ ಹೊರಕ್ಕೆ ಬಿಡಬೇಕು.














