ಮನೆ ಪೌರಾಣಿಕ ವಿಷ್ಣು ಪುರಾಣ: ಭಾಗ ಎರಡು

ವಿಷ್ಣು ಪುರಾಣ: ಭಾಗ ಎರಡು

0

     ಗುರುಗಳು ಹೇಳುತ್ತಿದ್ದಂತಹ ಕಥೆಯನ್ನು ತನ್ಮಯನಾಗಿ ಕೇಳುತ್ತಿದ್ದ ಮೈತ್ರೇಯನು “ಮುನಿಯವರ್ಯರೇ  ವೈವಸ್ವತ ಮನುವಿನ ಪುತ್ರರಲ್ಲಿ ಯಶೋವಂತನಾದ ಉತ್ತಾನ ಪಾದನ ವಂಶಾಭಿವೃದ್ಧಿಯ ನನಗೆ ವಿಶದೀಕರಿಸಿದಿರಿ. ಆತನ ತಮ್ಮನಾದ ಕಥೆಯನ್ನು ಪ್ರಿಯವ್ರತನನ ವಂಶಾಭಿವೃದ್ಧಿಯ ಕಥೆಯನ್ನು  ಆತನ ಮಕ್ಕಳಿಗೆ ಜನಿಸಿದ  ಮಹಾರಾಜರ ಪುಣ್ಯ ಚರಿತ್ರೆಯನ್ನು ಹೇಳಿರಿ” ಎಂದು ಪ್ರಾರ್ಥಿಸಿದರು ಸಕಲ ವಿದ್ಯಾಧರನಾದ ಪಾರಾಶರ ಮುನಿಗಳು ಅವನ ಕೋರಿಕೆಯಂತೆ ಸವಿಸ್ತಾರವಾಗಿ ವಿವರಿಸಿರಿ ಹೇಳಿದನು.

 ಪ್ರಿಯವ್ರತನ ವಂಶಾನು ಚರಿತ್ರೆ

     ಸ್ವಯಂಭು ಮನುವಿನ ಕಿರಿಯ ಮಗ ಪ್ರಿಯವೃತ ಮಹಾರಾಜನಿಗೆ ಯುಕ್ತ ವಯಸ್ಸು ಬರುತ್ತಲೇ, ಕರ್ಧಮ ಪ್ರಜಾಪತಿ ಪುತ್ರಿ ಕಾವ್ಯಳನ್ನು ಅವನಿಗೆ ಕೊಟ್ಟು ವಿವಾಹ ಮಾಡಿದರು.ಆ ದಂಪತಿಗಳಿಗೆ ಇಬ್ಬರು ಪುತ್ರಿಯರು. ಸಾಮ್ರಾಜ್ಞಿ, ಕುಕ್ಷಿ ಹಾಗೂ 10 ಗಂಡು ಮಕ್ಕಳು ಅಗ್ನೀವ್ರ, ಮೇದಾತಿಧಿ, ವಪುಷ್ಮಂತ, ಜ್ಯೋತಿಷ್ಮಂತ, ದ್ಯುತಿಮಂತ, ಹವ್ಯು, ಸವನ, ಮೇಧ, ಅಗ್ನಿದ್ರ, ಬಾಹು, ಪೌತ್ರರು ಜನಿಸಿದರು ಪ್ರಿಯವ್ರತನ ವಂಶದಲ್ಲಿ ಅನಿತರ ಪೂರ್ವವಾದ ದೈವೀಶಕ್ತಿಯು ಅನಂತವಾಗಿ ತುಂಬಿತ್ತು.ಆತನ ಮಕ್ಕಳಲ್ಲಿ ಮೇಧ, ಅಗ್ನಿಬಾಹು,ಬಾಹುಪೌತ್ರರು, ಬಾಲ್ಯದಿಂದಲೇ ವೈರಾಗ್ಯ ಸಂಪನ್ನರಾಗಿ ನಡೆಸಿದರು.ಅವರು ತಮ್ಮ ಪೂರ್ವಜನ್ಮದ ಅನುಭವಗಳನ್ನು ಜ್ಞಾನ ದೃಷ್ಟಿಯೊಂದಿಗೆ ಗ್ರಹಿಸಿ, ಐಹಿಕ ಭೋಗಗಳನ್ನು ಪರಿತ್ತೆಜಿಸಿ,  ಯೋಗಬಲದಿಂದ ಮೋಕ್ಷ ಪದವನ್ನು ಅಧಿರೋಹಿಸಿದರು.

      ಪ್ರಿಯವ್ರತನಿಗೆ ವಾರ್ಧಕ್ಯವು  ಬರುತ್ತಲೇ, ತನಗೆ ಸಮಯವು ಸಮೀಪಿಸಿದೆಯೆಂಬ ಅಭಿಜ್ಞಾನದೊಂದಿಗೆ ಮಕ್ಕಳಿಗೆ ರಾಜ್ಯವನ್ನು ಸಮಭಾಗವಾಗಿ ಹಂಚಿ ಅವರಿಗೆ ಪಟ್ಟಾಭಿಷೇಕ ಮಾಡಿದನು. ತನ್ನ ಕುಮಾರ ಸಪ್ತಕರಲ್ಲಿಅಗ್ನೀದ್ರನಿಗೆ ಜಂಬೂದ್ವೀಪವನ್ನು,  ವೇಧಾತಿಧಿಗೆ ಪಕ್ಷದ್ವೀಪವನ್ನು ವಪುಷ್ಮಂತನಿಗೆ ಶಾಲ್ಮಲ ದೀಪವನ್ನು ಜ್ಯೋತಿಷ್ಯಂತನಿಗೆ ಕುಶದ್ವೀಪವನ್ನು ದೀಪವನ್ನು ದ್ಯುತಿಮಂತನಿಗೆ ಕ್ರೌಂಚದ್ವೀಪವನ್ನು, ಹವ್ಯುನಿಗೆ ಶಾಕದ್ವೀಪವನ್ನು, ಸವನನಿಗೆ ಪುಷ್ಕರ ದೀಪವನ್ನು ಹಂಚಿಕೊಟ್ಟನು. ಅವರೆಲ್ಲರೂ ಅಪಾರ ಬಲ ಪರಾಕ್ರಮಿಗಳೊಂದಿಗೆ ಧರ್ಮಪಾಲನೆಯಿಂದ ರಾಜ್ಯವನ್ನಾಳಿ  ಇಂದ್ರಸನ್ನಿಭರೆಂದು  ಕೀರ್ತಿಯನ್ನು ಗಳಿಸಿದರು. ಜಂಬೂದ್ವೀಪದ ಅಧಿಪತಿಯಾದ ಅಗ್ನಿಂದ್ರ ಮಹಾರಾಜನಿಗೆ ದೀಪ್ತಿ ಮಂತರು, ಸುಗುಣೋಪೇತರು, ಧರ್ಮತತ್ಪರರೂ ಆದ ಒಂಬತ್ತು ಮಕ್ಕಳು ಜನಿಸಿದರು. ಅವರೇ ನಾಭಿ, ಕಿಂಪುರುಷ, ಹರಿ, ಇಲಾವಖತ, ರಮ್ಯ, ಹಿರಣ್ಯವಂತ, ಕುರು, ಭದ್ರಾಶ್ವ, ಕೇತುಮಾಲ,ಮಕ್ಕಳಿಗೆ ಯುಕ್ತ,ವಯಸ್ಸು ಬರುತ್ತಲೇ ಅಗ್ನಿಂದ್ರನು ಜಂಬುದ್ವೀಪವನ್ನು ಒಂಬತ್ತು ಭಾಗಗಳನ್ನಾಗಿ ವಿಭಜಿಸಿ ಅವರಿಗೆ  ಸಮನವಾಗಿ ಹಂಚಿಕೊಟ್ಟನು. ಹಿಮಮತ್ ಪರ್ವತದ ದಕ್ಷಿಣಾಭಿ ಮುಖವಾಗಿರುವ ಹಿಮ ಖಂಡವನ್ನು ನಾಭಿಗೂ, ಹೇಮಕೂಟ ಖಂಡವನ್ನು ಕಿಂಪುರುಷನಿಗೂ,  ನಿಷಧ ರಾಜ್ಯವನ್ನು ಹರಿಗೂ ಕೊಟ್ಟನು.ಮೇರು ಪರ್ವತಕ್ಕೆ ಅಂಟಿಕೊಂಡು ನಾಲ್ಕು ದಿಕ್ಕುಗಳಿಗೂ ವ್ಯಾಪಿಸಿರುವ ವಿಶಾಲ ಸಾಮ್ರಾಜ್ಯವನ್ನು ಇಲಾ ವೃತ್ತನಿಗೂ,   ಮೇರುಪರ್ವತ ಮತ್ತು ನೀಲಪರ್ವತ ನಡೆವಿನ ಭಾಗದಲ್ಲಿ ವಿಸ್ತರಿಸಿದ ಭೂಮಿಯನ್ನು ರಮ್ಯಾನಿಗೂ,ದಾರದತ್ತ ಮಾಡಿದನು.ರಮ್ಯನ ಸಾಮ್ರಾಜ್ಯದ ಉತ್ತರ ದಿಕ್ಕಿನಲ್ಲಿರುವ ಶ್ವೇತ ಖಂಡವನ್ನುಹಿರಣ್ವಂತನಿಗೆ ಕೊಟ್ಟನ್ನು ಶೃಂಗಪರವರ್ತದ ಪದೇಶವನ್ನು ಕುರುವಿಗೂ,ಮೇರು ಪರ್ವತದ ಪಶ್ಚಿಮ ದಿಕ್ಕಿಗೆ ವ್ಯಾಪಿಸುವ ಪ್ರದೇಶವನ್ನು ಭದ್ರಾಶ್ವನಿಗೂ, ಕೇತುಮಾಲನಿಗೆ ಗಂಧ ಮಾಧನ ಪ್ರದೇಶವನ್ನು ಕೊಟ್ಟು ಎಲ್ಲರಿಗೂ ರಾಜ್ಯ ವಸತಿಗಳನ್ನು ಏರ್ಪಡಿಸಿದನು. ಈ ರೀತಿಯಾಗಿ ವಿಶಾಲವಾದ ಜಂಬೂಪಪ್ರದ್ವೀಪವ ನ್ನು ಅಗ್ನೀದ್ರನು ತನ್ನ ಸುತರರಿಗೆ ಸಂಕ್ರಮಿಸುವಂತೆ ಮಾಡಿ ವಾನಪಪ್ರಸ್ಥಾೂಸಿದನು ಆತ್ಮ ಜನರೆಲ್ಲರ ಬಳಿಯಿಂದ ಬೀಳ್ಕೊಡೆಗೆಯನ್ನು ಪಡೆದು ತಪ್ಪಿಕ್ಷೆಯನ್ನು ಸ್ವೀಕರಿಸಿ ಸಾಲಿಗ್ರಾಮ ತೀರ್ಥಕ್ಕೆ ಹೊರಟು ಹೊದನು, ಓ ಸಾಲಿಗ್ರಾಮಕ್ಕೆ ಹೊರಟು ಹೋದನು ಇಮಖಂಡದ ರಾಜನಾದ ನಾಭಿ ಸ್ವಲ್ಪ ಕಾಲದ ನಂತರ ಮೇರುಕಾಂತಳನ್ನು ವಿವಾಹವಾಗಿ ಆಕೆಗೆ ಪುತ್ರ ಸಂತಾನವನ್ನು ಪಡೆದನು.ನಾಭಿಯ ಮಗ ವೃಷಭ ಅವನಿಗೆ ನೂರು ಜನ ಗಂಡು ಮಕ್ಕಳಾದರೂ ಅವರಲ್ಲಿ ಅಗ್ರಜನಿಗೆ ಭರತನೆಂದು ನಾಮಕರಣ ಮಾಡಿದರು

ವ್ಯಾಪಿಸುವ ಪ್ರದೇಶವನ್ನು ಭದ್ರೆಶನಿಗೂ ಏತು ಮಾಲನಿಗೆ ಕಂದ ಮಾದನ ಪ್ರದೇಶವನ್ನು ಕೊಟ್ಟು ಎಲ್ಲರಿಗೂ ರಾಜ್ಯ ವಸತಿಯನ್ನು ಏರ್ಪಡಿಸಿದರು. ಈ ರೀತಿಯಾಗಿ ವಿಶಾಲವಾದ ಸ್ವಲ್ಪ ಕಾಲಕ್ಕೆ ನಾಭಿ ತನ್ನ ತಂದೆ ಮತ್ತು ತಾತರಂತೆಯೇ ನಶ್ವರವಾದ ಭೋಗ ಜೀವನದ ಮೇಲೆ ವಿರುಕ್ತಿ ಬೇಸರವನ್ನು  ಹೊಂದಿ ಶಾಶ್ವತವಾದ ಮೋಕ್ಷ ಪದವನ್ನು ಬಯಸಿ ಹಿರಿಯ ಮಗನಿಗೆ ರಾಜ್ಯವನ್ನು ಒಪ್ಪಿಸಿ ವೆಂಕಟಾದ್ರಿ ಪರ್ವತದ  ಮೂಲಕ  ದಕ್ಷಿಣ ದೇಶದಲ್ಲಿನ ಪುಲಸ್ತ್ಯ.ಬ್ರಹ್ಮನ ಆಶ್ರಮಕ್ಕೆ ಬಂದನು. ವಾನಪ್ರಸ್ಥ ವಿಧಿ ವಿಧಾನವನ್ನು ಆಶ್ರಯಿಸಿ ಅನೇಕ ಶತಾಬ್ದಗಳವರೆಗೂ ಇದ್ದು ನೈಮಿತ್ತಿಕ  ಕರ್ಮಾನುಷ್ಠಾನವನ್ನು ಬಿಟ್ಟನು.  ನಗ್ನ  ದೇಹನಾಗಿ ಇಂದ್ರಿಯೋಲ್ಬಣವನ್ನು ಅಡಗಿಕೊಂಡು ವೀರ್ಯೋದ್ರೇಕದೊಂದಿಗೆಅವಧೂತನಾಗಿ ದಿವ್ಯಜ್ಞಾನವನ್ನು ಪಡೆದನು.  ನಂತರ ನಾಭಿಯ ಮಗ ಭರತನ್ನು ಸಮಸ್ತ ಭೂಮಂಡಲವನ್ನು ಏಕ ಚಕ್ರಾಧಿಪತ್ಯವನ್ನಾಗಿ ಪರಿಪಾಲಿಸಿ, ಧರ್ಮವನ್ನು ಸುಸ್ಥಿರಗೊಳಿಸಿದನು. ಅಜಾತಶತ್ರುವಾದ ಆತನ ಆಳ್ವಿಕೆಯಲ್ಲಿ ಮಹರ್ಷಿಇಗಳ  ಯಜ್ಞಯಾಗಗಳಿಗೆ ಅನುಕೂಲವಾಗುವಂತೆ ಸಕಲ ಸೌಕರ್ಯಗಳು ಸಿದ್ಧಿಸಿದವು. ಪ್ರಿಯವ್ರತನು ಬಿಚ್ಚಿದ ಧರ್ಮ ಬೀಜವು ಜೀವನವನ್ನು ಪಡೆದು ಚಿಗುರಿ, ಗಿಡವಾಗಿ ಭರತ ಮಹಾರಾಜನ ಆಳ್ವಿಕೆಯಲ್ಲಿ ದೊಡ್ಡ ವೃಕ್ಷವಾಗಿ ಬೆಳೆಯಿತು. ಆತನ ಕಾಲದಿಂದಲೇ ನಾಭಿ ಖಂಡಕ್ಕೆ ಭರತಖಂಡವೆಂಬ ಹೆಸರು ಬಂದಿತು.  ಈ ರೀತಿಯಾಗಿ ಭರತನು ದಿವ್ಯ ತೇಜದೊಂದಿಗೆ ಕಾಶ್ಯಪೇಯ ಖಂ ಪರಿಪಾಲಿಸಿದನು.  ನಂತರ ತನ್ನ ಮಗನಾದ ಸುಮತಿಗೆ ರಾಜ್ಯಭಾರವನ್ನು ವಹಿಸಿ ತಾನು ಸಹ ತನ್ನ ತಂದೆಯಂತೆಯೇ ಸಾಲಿಗ್ರಾಮ ತೀರ್ಥಕ್ಕೆ ತಪಸ್ಸಿಗೆ ಹೊರಟನು. ಕಾಲಾಂತರ ವಿಪ್ರನಾಗಿ ಜನಿಸಿದನು.   ಭರತ ಮಗನ ಸುಮತಿಗೆ ಇಂದ್ರದ್ಯುಮ್ನನು ಜನಿಸಿ ಪಿತೃ ಪಿತಾಮಹರ ಯಶಸ್ಸನ್ನು ದಶದಿಸೆಗೆ ವ್ಯಾಪಿಸುವಂತೆ  ಮಾಡಿದನು. ಅವನಿಗೆ ಪರಮೇಷ್ಠಿ, ಪರಮೇಸ್ಟಿಗೆ ಪ್ರತಿಹಾರ, ಅವನಿಗೆ ಪ್ರತಿ ಹರ್ತನು  ಉದಯಿಸಿದನು. ಪ್ರತಿಹರ್ತನಿಗೆ ಭವನು ಭವನಿಗೆ ಉಗ್ಗೀನನು. ಅವನಿಗೆ ಪ್ರಸ್ತಾರನು. ಪ್ರಸ್ತಾರನಿಗೆ  ಪೃಥು ಜನಿಸಿದನರು ಪೃಥುವಿನ ಮಗ ನಕ್ತ, ನಕ್ತನಿಗೆ ಗಯ, ಗಯನಿಗೆ ನರನು. ನರನಿಗೆ ವಿರಾಟ್ಟನು. ವಿರಾಟ್ಟಾನಿಗೆ ಧೀಮಂತನು ಹುಟ್ಟಿದರು. ಧೀಮಂತನಿಗೆ ಮಹಾಂತಾನು ಮಹಾಂತನಿಗೆ ಮನಸ್ಯನುನಸ್ಯನಿಗೆ ತ್ವಷ್ಪ್ರ ಉದಯಿಸಿದನ್ನು ತೃಷ್ಟಿಗೆ ವೀರಜನು. ವಿರಜನಿಗೆ ರಜು,ವುಗೆ ಶತಜಿತ್ತು ಹುಟ್ಟಿದರು.ಶತಜಿತ್ ಮಹಾರಾಜನಿಗೆ ಕಾಲಕ್ರಮೇಣ ನೂರು ಗಂಡು ಮಕ್ಕಳಾದರು.ಅವರಲ್ಲಿ ಹಿರಿಯವನೇ ವಿಶ್ವ ಗೋಲೆಷ್ಮನು.ಈ ರಾಜರ ಕಾಲದಲ್ಲಿ ಭರತಖಂಡವು ಮತ್ತು ಒಂಬತ್ತು ಭಾಗಗಳಾಗಿ ವಿಂಗಡಿಸಲ್ಪಟ್ಟಿತ್ತು. ಇವರೆಲ್ಲರೂ ಸಾತ್ತ್ವಿಕರಾಗಿ ಮನುವಿನ ಮಾರ್ಗದರ್ಶನದಲ್ಲಿ ಮುನೀ ಧರ್ಮನುಸಾರವಾಗಿ ರಾಜಡಳಿತವನ್ನು ನಡೆಸಿದರು.ಮರಾಹಲ್ಪದಲ್ಲಿನ ಸ್ವಾಯಂಭು ಮನುವಿನ ಆಳ್ವಿಕೆಯಲ್ಲಿ ಪ್ರಜಾಸೃಷ್ಟಿಯು ಈ ರೀತಿಯಾಗಿ ನಡೆಯಿತು”’ ಎಂದು ಹೇಳಿದ ಪರಾಶರ ಮಹರ್ಷಿಯನ್ನು ಮೈತ್ರೇಯನ್ನು “ಆಚಾರ್ಯವರ್ಯಾ!ನೀವು ಇಲ್ಲಿಯವರೆಗೂ ಪ್ರಸ್ತಾಪಿಸಿದ ಈ ಸಮಸ್ತ ಭೂಮಂಡಲದ ವೈಶಾಲ್ಯವೆಷ್ಟು ಹಾಗೆಯೇ ನೀವು ವಿವರಿಸಿದ ಸಪ್ತ ದ್ವೀಪಗಳ ಸ್ವರೂಪವನ್ನು ದೇವ ದಾನವ ಗಂಧರ್ವ ವಾಸಸ್ಥಳಗಳ ವಿಶೇಷತೆಯನ್ನು ವಿವರಿಸಿ ಹೇಳಿರಿ ಹಾಗೂ ನದಿಗಳು, ಸಾಗರಗಳು ಜ್ಞಾನ ವಿಧ ಪ್ರದೇಶಗಳು, ವನಪ್ರದೇಶಗಳ ವಿಸ್ತಾರವೇಷ್ಟು ಎಂಬುದನ್ನು ತಿಳಿಯಪಡಿಸಿರಿ ”ಎಂದು ಬೇಡಿದನು.