ಮನೆ ಪ್ರವಾಸ ರಿವರ್ ರಾಫ್ಟಿಂಗ್ ಮಾಡಬೇಕೆಂದರೆ ಈ ತಾಣಗಳಿಗೆ ಭೇಟಿ ನೀಡಿ

ರಿವರ್ ರಾಫ್ಟಿಂಗ್ ಮಾಡಬೇಕೆಂದರೆ ಈ ತಾಣಗಳಿಗೆ ಭೇಟಿ ನೀಡಿ

0

ಹರಿಯುವ ನೀರಿನಲ್ಲಿ ಜಲ ಕ್ರೀಡೆಗಳು ರೋಮಾಂಚಕಾರಿಯಾಗಿರುತ್ತದೆ. ಇನ್ನು ಸಾಕಷ್ಟು ಜನರು ಜಲ ಕ್ರೀಡೆಗಳಿಗಾಗಿಯೇ ಪ್ರವಾಸ ಮಾಡುತ್ತಾರೆ. ಅದರಲ್ಲೂ ಸ್ನೇಹಿತರೊಂದಿಗೆ ರಿವರ್ ರಾಫ್ಟಿಂಗ್ ಮೈ ಜುಮ್ ಎನ್ನಿಸುವುದರಲ್ಲಿ ಅನುಮಾನವೇ ಬೇಡ. ಮನಸ್ಸು ಮತ್ತು ದೇಹವು ಕಡಿವಾಣವಿಲ್ಲದೆ ರಾಪಿಡ್ಗಳ ಮೂಲಕ ನೀರಿನಲ್ಲಿ ಸವಾರಿ ಮಾಡುತ್ತದೆ.

ಬಾರಾಪೋಲ್ ನದಿ, ಮಡಿಕೇರಿ

ವಾರಾಂತ್ಯ ಸಮಯದಲ್ಲಿ ಕೂರ್ಗ್ ಮತ್ತು ಮಡಿಕೇರಿಯ ಪ್ರವಾಸ ನೀವು ಆಗ್ಗಾಗ್ಗೆ ಮಾಡಬಹುದು. ಈ ಬಾರಿ ಮಡಿಕೇರಿಗೆ ಹೋದಾಗ ಬಾರಾಪೋಲ್ ನದಿಯಲ್ಲಿ ವೈಟ್ ವಾಟರ್ ರಾಫ್ಟಿಂಗ್ ಕೈಗೊಳ್ಳುವುದು ಮರೆಯದಿರಿ. ದಕ್ಷಿಣ ಕನ್ನಡದ ಈ ಬಾರಾಪೋಲ್ ನದಿಯು ಪಶ್ಚಿಮ ಘಟ್ಟಗಳ ಡೆಕ್ಕನ್ ಪ್ರಸ್ಥಭೂಮಿಯಲ್ಲಿದೆ.

ಇನ್ನು ಈ ನದಿಯ ನಿಯಮಿತ ಮೇಲ್ಬಾಗವು ಸುಮಾರು 5 ರಾಪಿಡ್ಗಳನ್ನು ಹೊಂದಿದೆ. 6 ರಿಂದ 7 ರಾಪಿಡ್ಗಳನ್ನು ಹೊಂದಿದೆ. ನೀರಿನ ಮಟ್ಟವನ್ನು ಅವಲಂಬಿಸಿ ರಾಪಿಡ್ಗಳ ತೀವ್ರತೆಯು 2 ರಿಂದ 4 ರವರೆಗೆ ಬದಲಾಗುತ್ತದೆ. ಒಟ್ಟಾರೆ ಸ್ನೇಹಿತರೊಂದಿಗೆ ಮಡಿಕೇರಿಯಲ್ಲಿ ರಿವರ್ ರಾಫ್ಟಿಂಗ್ ಮಸ್ತ್ ಮಜಾ ಮಾಡಬಹುದು.

ದಾಂಡೇಲಿ

ರಿವರ್ ರಾಫ್ಟಿಂಗ್ ಎಂದಾಕ್ಷಣ ತಟ್ಟನೆ ನೆನಪಾಗುವುದು ದಾಂಡೇಲಿ. ದಕ್ಷಿಣ ಭಾರತದಲ್ಲಿ ರಿವರ್ ರಾಫ್ಟಿಂಗ್’ಗೆ ಹೆಚ್ಚು ಜನಪ್ರಿಯವಾಗಿರುವ ತಾಣಗಳಲ್ಲಿ ದಾಂಡೇಲಿಯು ಒಂದು. ದೇಶದ ನಾನಾ ಭಾಗಗಳ ಸಾಹಸಿಗಳನ್ನು ಆಕರ್ಷಿಸುವ ಈ ತಾಣದಲ್ಲಿ ಸ್ನೇಹಿತರೊಟ್ಟಿಗೆ ರಿವರ್ ರಾಫ್ಟಿಂಗ್ ಮಾಡುವುದು ರೋಮಾಂಚಕಾರಿಯಾಗಿಸಬಹುದು.

ವೇಗವಾಗಿ ಹರಿಯುವ ಕಾಳಿ ನದಿಯ ಮೇಲೆ ಪಶ್ಚಿಮ ಘಟ್ಟಗಳ ಉದ್ದಕ್ಕೂ ಅಂಕುಡೊಂಕಾದ ಮಾರ್ಗವನ್ನು ಒಳಗೊಂಡಿದೆ. ನದಿಯ ಆಸುಪಾಸು ವೈವಿಧ್ಯಮಯ ಪ್ರಾಣಿಗಳು ಮತ್ತು ಸಸ್ಯಗ ನೆಲೆಯಾಗಿ.

ರಿಷಿಕೇಶ

ಉತ್ತರಾಖಂಡ ರಾಜ್ಯದ ರಿಷಿಕೇಶವು ಹಿಂದೂಗಳ ಪ್ರಮುಖ ಯತ್ರಾ ಸ್ಥಳ ಮಾತ್ರವಲ್ಲ, ಸಾಹಸಿಗಳ ಅಚ್ಚು ಮೆಚ್ಚಿನ ತಾಣವು ಹೌದು. ರಿಷಿಕೇಶದಲ್ಲಿ ಹಲವಾರು ಹೋರಾಂಗಣ ಸಾಹಸಗಳನ್ನು ಆನಂದಿಸಬಹುದು. ಟ್ರೆಕ್ಕಿಂಗ್, ಧ್ಯಾನ, ಆಶ್ರಮದ ಭೇಟಿ, ಪ್ಯಾರಾಗ್ಲೈಡ್ಲಿಂಗ್ ಸೇರಿದಂತೆ ಇನ್ನು ಅನೇಕ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಹಾಗೆಯೇ ರಿಷಿಕೇಶದಲ್ಲಿ ವೈಟ್ ವಾಟರ್ ರಿವರ್ ರಾಫ್ಟಿಂಗ್ಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿ ಒಟ್ಟು 13 ರಾಪಿಡ್ಗಳಿವೆ. ರಾಫ್ಟಿಂಗ್ ಮಾಡುವಾಗ ರಿಷಿಕೇಶದ ಆಸುಪಾಸಿನ ಪರ್ವತಗಳ ಪ್ರಶಾಂತತೆಯನ್ನು ಆನಂದಿಸುತ್ತೀರಿ.

ಮಹಾರಾಷ್ಟ್ರ

ಮಹಾರಾಷ್ಟ್ರದ ಕೋಲಾಡ್ನ ಕುಂಡಲಿಕಾ ನದಿಯು ಕೂಡ ರಿವರ್ ರಾಪ್ಟಿಂಗ್ಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇದೊಂದು ಚಿಕ್ಕದಾದ ನದಿಯಾಗಿದ್ದು, ಭವ್ಯವಾದ ಸಹ್ಯಾದ್ರಿ ಬೆಟ್ಟಗಳಿಂದ ಅರಬ್ಬಿ ಸಮುದ್ರಕ್ಕೆ ಹರಿಯುತ್ತದೆ. ಸಾಮಾನ್ಯವಾಗಿ ಈ ಕೋಲಾಡ್ ನದಿಯನ್ನು ದಕ್ಷಿಣದ ಅತ್ಯಂತ ವೇಗವಾಗಿ ಹರಿಯುವ ನದಿ ಎಂದೇ ಕರೆಯಲಾಗುತ್ತದೆ.

ರಾಫ್ಟಿಂಗ್ ಮಾಡುವಾಗ ಸುತ್ತಮುತ್ತಲಿನ ರಮಣೀಯವಾದ ಸೌಂದರ್ಯವನ್ನು ಸವಿಯಬಹುದು. ಸುತ್ತಲೂ ಹಚ್ಚ ಹಸಿರಿನ ವಾತಾವರಣವು ಪ್ರವಾಸಿಗರನ್ನು ಆಕರ್ಷಿಸಬಹುದು.

ಅಲಕನಂದಾ ನದಿ

ಉತ್ತರಾಖಂಡದ ಅತ್ಯಂತ ಆಹ್ಲಾದಕರವಾದ ನದಿಯಾಗಿರುವ ಈ ಅಲಕನಂದಾ ನದಿಯಲ್ಲಿ ಸವಾಲಿನ ರಿವರ್ ರಾಫ್ಟಿಂಗ್ ನಿಜಕ್ಕೂ ಮೈ ಜುಮ್ ಎನ್ನಿಸುತ್ತದೆ. ಉತ್ತರಾಖಂಡದ ಅನೇಕ ಕಣಿವೆಗಳ ಸುಂದರವಾದ ನೋಟವನ್ನು ಸಾಹಸಿಗಳಿಗೆ ಒದಗಿಸುತ್ತದೆ. ತನ್ನ ರುದ್ರರಮಣೀಯವಾದ ಪ್ರಾಕೃತಿಕ ನೋಟದಿಂದಾಗಿ ಅಲಕನಂದಾ ನದಿಯು ಸಮ್ಮೋಹಿಸುತ್ತದೆ.

ಇದನ್ನು ಹೊರತುಪಡಿಸಿ ಕುಲು ಮನಾಲಿ, ಅರುಣಾಚಲ ಪ್ರದೇಶ, ಲಡಾಖ್, ಹಿಮಾಚಲ ಪ್ರದೇಶಗಳಲ್ಲಿಯು ರಿವರ್ ರಾಫ್ಟಿಂಗ್ ಅನುಭವವನ್ನು ಪಡೆಯಬಹುದು.