ಬಿಲ್ಪತ್ರೆಯಲ್ಲಿ ದೇವರನ್ನು ಕಾಣುವ ಜನರು ಲಕ್ಕಿ ಗಿಡದಲ್ಲಿ ಲಕ್ಷ್ಮಿದೇವನು ಕಾಣುತ್ತಾರೆ. ಚಿಕ್ಕಮಗಳೂರು ಪರಿಸರದಲ್ಲಿ ತುಳಸಿ ಕಟ್ಟೆಯಲ್ಲಿ ಲಕ್ಕಿ ರೆಂಬೆ ನೆಟ್ಟು ಬೆರೆಸಿ ಪೂಜಿಸುವವರು. ಕಾಡುಮೇಡಿನ, ಬಯಲು ಸೀಮೆ ಹುಲ್ಲುಗಾವಲಿನ, ಗದ್ದೆ ಬದುವಿನ ಪೊದರು ಮರ ಲಕ್ಕಿ, ಬೇಲಿ ಗಿಡವಾಗಿ ಸಹ ಆಯ್ಕೆಗೊಳ್ಳುತ್ತದೆ. ಆರಡಿ ಇಂದ 20 ಅಡಿ ಎತ್ತರವಾಗಿರುತ್ತದೆ. ಸಂಯುಕ್ತ ಎಲೆಗೆ ಘಾಟುವಾಸನೆ ಎಳೆ ಎಲೆಯಲ್ಲಿ ಕಿರುಗೂದಲು, ರಮ್ಮೆ ತುದಿಯಲ್ಲಿ ರಥದಾಕಾರದ ಹೂಮಂಜರಿ, ನೀಲಿ, ಬಿಳಿ ಪುಟಾಣಿ ಹೂ ಗುಂಡನೆಯ ಚಿಕ್ಕಕಾಯಿ, ಬಲಿತ ರೆಂಬೆ ನೆಟ್ಟರೂ ಸಹ ಹೊಸ ಸಸಿ ಚಿಗುರುತ್ತದೆ. ನಡುತೋಪಿಗೆ ಸಹ ಅರ್ಹ.
ಲಕ್ಕಿ ಗಿಡ ಹೂ, ಎಲೆ, ಕಾಯಿ, ಕಾಂಡ, ಬೇರುಗಳೆಲ್ಲವೂ ಮದ್ದಿಗಾಗಿ ಬಳಕೆಯಾಗುತ್ತದೆ. ಹೂ, ತೊಗಟೆಯದು ವಿಶೇಷ ಉಪಯೋಗಗಳು. ಉಳಿದ ಎಲ್ಲಾ ಭಾಗಗಳು ತುಂಬಾ ಉಷ್ಣ ಎಂದು ಸುಶ್ರುತ ಸಂಹಿತ ವಿವರಿಸಿದೆ. ಕೆಲವು ಪ್ರಭೇದಗಳು ನೀಲಿ ಹೂವು, ಎಲೆಯೂ ಕರಿ ಎಲೆಯ ಹೂ, ಎಲೆಗಳಿಗಾಗಿ ಹಸ್ತ ಸಿದ್ದರು. ಬಂಗಾರ ಮಾಡ ಹೊರಡುವ ಅಡ್ಡ ಕುಸುಬಿಗಳು ಬಹುವಾಗಿ ಹುಡುಕಾಟ ನಡೆಸುತ್ತಾರೆ. ಎಲೆಯ ದಂತು (ಕತ್ತರಿಸಿದ ರಚನೆ) ವಾಗಿದ್ದರೆ ಅದು ಮದ್ದಿನ ಬಳಕೆಗೆ ಬಹಳ ಶ್ರೇಷ್ಠ ಎಂಬ ಅಭಿಪ್ರಾಯ ಕೂಡ ಇದೆ. ವಾತರೋಗ, ಕಫ ರೋಗಗಳಲ್ಲಿ ಲಕ್ಕಿಯ ಬಳಕೆ ವಿಶೇಷವಾಗಿದೆ.
ಔಷಧೀಯ ಗುಣಗಳು :-
* ಕ್ರಿಮಿ ಕೀಟ, ಹೇನು, ಕೂರೆಗಳನ್ನ ದೂರ ಮಾಡುವ ಗುಣ ಇದರಲ್ಲಿದೆ.
* ಎಲೆಯ ಒಣಗಿದ ಪುಡಿ ಹಾಕಿದರೆ ಸೊಳ್ಳೆಯ ಕೀಟ ಬಾಧೆ ಕಡಿಮೆಯಾಗುತ್ತದೆ.
* ಅಕ್ಕಿ, ಧಾನ್ಯಗಳನ್ನು ಸಂರಕ್ಷಿಸಲು ಎಲೆ, ರೆಂಬೆ, ಮೂಟೆ, ಕಣಜ, ಹಗೇವುಗಳಿಗೆ ಹಾಕುವುದರಿಂದ ಕ್ರಿಮಿ ಕೀಟಗಳಿಂದ ಇದು ಸಂರಕ್ಷಿಸುತ್ತದೆ.
* ಯಾವುದೇ ರೀತಿಯ ಉರಿಯುತ, ಊತ, ನೋವು, ಗಂಟು ನೋವು, ಪರಿಹಾರಕ್ಕೆ ಎಲೆಯ ಬಳಕೆಯಿಂದ ಗುಣವಿದೆ.
* ಕಫಜ್ವರ, ಉಸಿರಾಟದ ತೊಂದರೆಗೆ ಒಣ ಎಲೆಯ ಪುಡಿ ಹೊಗೆ ಹಾಕಿದರೆ ಬಹಳ ಲಾಭಕಾರಿ.
* ತುಪ್ಪದ ಜೊತೆ ಎಲೆಯ ರಸ ಹಾಕಿ ಕಾಯಿಸಿ ಕುಡಿದರೆ ಹಳೆಯ ಕೆಮ್ಮಿನಲ್ಲಿ ಪರಿಹಾರ ಸಿಗುತ್ತದೆ.
* ಹಳೆಯ ನೆಗಡಿ, ಉಸಿರಾಟದ ತೊಂದರೆಗೆ ಒಣ ಎಲೆಯ ಪುಡಿ ಹೊಗೆ ಹಾಕಿದರೆ ಉತ್ತಮ ಲಾಭವಿದೆ.
* ಜ್ವರ ಮತ್ತು ವಾಂತಿ ನಿಲ್ಲಿಸಲು ಹೂವಿನ ಪುಡಿ ಜತೆ ಜೇನು ಕಲಸಿ ಸೇವಿಸಿದರೆ ಪರಿಹಾರ.
* ಮೂತ್ರಕಟ್ಟು, ಕಾಲು, ಮೈ ಬೀಗಿಗೆ ಎಲೆ ಕಷಾಯದಲ್ಲಿ ಕುಳಿತುಕೊಳ್ಳುವುದರಿಂದ ಆರಾಮ ಸಿಗುತ್ತದೆ.