ಮನೆ ಆಟೋ ಮೊಬೈಲ್ Volkswagen:ಹೊಸ ವರ್ಟಸ್ ಮತ್ತು ಟೈಗನ್ ಸ್ಪೆಷಲ್ ಎಡಿಷನ್ ಬಿಡುಗಡೆ

Volkswagen:ಹೊಸ ವರ್ಟಸ್ ಮತ್ತು ಟೈಗನ್ ಸ್ಪೆಷಲ್ ಎಡಿಷನ್ ಬಿಡುಗಡೆ

0

ನ್ಯೂ ಜನರೇಷನ್ ಕಾರು ಮಾದರಿಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಫೋಕ್ಸ್ ವ್ಯಾಗನ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ವರ್ಟಸ್ ಸೆಡಾನ್ ಮತ್ತು ಟೈಗನ್ ಕಂಪ್ಯಾಕ್ಟ್ ಎಸ್ ಯುವಿ ಆವೃತ್ತಿಗಳಲ್ಲಿ ಹೊಸ ಜಿಟಿ ಪ್ಲಸ್ ವೆರಿಯೆಂಟ್ ಜೊತೆಗೆ ಜಿಟಿ ಎಡ್ಜ್ ಲಿಮಿಟೆಡ್ ಎಡಿಷನ್ ಪರಿಚಯಿಸಲಾಗಿದೆ.

Join Our Whatsapp Group

ಹೊಸ ಕಾರು ಮಾದರಿಗಳಲ್ಲಿ ಸದ್ಯ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಟೈಗನ್ ಕಾರು ಮಾದರಿಯಲ್ಲಿ ಹೊಸದಾಗಿ ಜಿಟಿ ವೆರಿಯೆಂಟ್ ಪರಿಚಯಿಸಲಾಗಿದ್ದು, ವರ್ಟಸ್ ಕಾರು ಮಾದರಿಯಲ್ಲಿ ಜಿಟಿ ಮ್ಯಾನುವಲ್ ಆವೃತ್ತಿಯನ್ನು ಪರಿಚಯಿಸಲಾಗಿದೆ.

ವರ್ಟಸ್ ಸೆಡಾನ್ ಮಾದರಿಯಲ್ಲಿ ಈ ಹಿಂದಿನ 1.5 ಲೀಟರ್ ಟಿಎಸ್ಐ ಆವೃತ್ತಿಯಲ್ಲಿ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಪರಿಚಯಿಸಲಾಗಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 16.89 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ಟೈಗನ್ ಕಾರಿನಲ್ಲಿ ಹೊಸದಾಗಿ 1.5 ಲೀಟರ್ ಟಿಎಸ್ಐ ಜಿಟಿ ವೆರಿಯೆಂಟ್ ಬಿಡುಗಡೆ ಮಾಡಲಾಗಿದ್ದು, ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳಲ್ಲಿ ಖರೀದಿ ಲಭ್ಯವಿದೆ.

ಟೈಗನ್ ಜಿಟಿ ವೆರಿಯೆಂಟ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 16.79 ಲಕ್ಷದಿಂದ ರೂ. 17.79 ಲಕ್ಷ ಬೆಲೆ ಹೊಂದಿದ್ದು, ಹೊಸ ಆವೃತ್ತಿಯ ಹೊರತಾಗಿ ಎಂಜಿನ್ ಆಯ್ಕೆಯು ಸಾಮಾನ್ಯ ಮಾದರಿಯಲ್ಲಿರುವಂತೆ ಮುಂದುವರೆಯಲಿದೆ.

ಜಿಟಿ ಎಡ್ಜ್ ಲಿಮಿಟೆಡ್ ಎಡಿಷನ್ ಫೋಕ್ಸ್ ವ್ಯಾಗನ್ ಕಂಪನಿಯು ವರ್ಟಸ್ ಮತ್ತು ಟೈಗನ್ ಎರಡು ಆವೃತ್ತಿಗಳಲ್ಲಿ ಜಿಟಿ ಎಡ್ಜ್ ಲಿಮಿಟೆಡ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ್ದು, ಇದರಲ್ಲಿ ವರ್ಟಸ್ ಲಿಮಿಟೆಡ್ ಎಡಿಷನ್ ಎಕ್ಸ್ ಶೋರೂಂ ಪ್ರಕಾರ ರೂ. 17.09 ಲಕ್ಷ ಬೆಲೆ ಹೊಂದಿದೆ. ಹಾಗೆಯೇ ಟೈಗನ್ ಜಿಟಿ ಎಡ್ಜ್ ಲಿಮಿಟೆಡ್ ಎಡಿಷನ್ ಆರಂಭಿಕವಾಗಿ ಎಕ್ಸ್ ಶೋರೂಂ ಪ್ರಕಾರ ರೂ. 17.99 ಲಕ್ಷ ಬೆಲೆ ಹೊಂದಿದ್ದು, ಸ್ಪೆಷಲ್ ಎಡಿಷನ್ ಗಳು ಡೀಪ್ ಬ್ಲ್ಯಾಕ್ ಪರ್ಲ್ ಮತ್ತು ಕಾರ್ಬನ್ ಸ್ಟೀಲ್ ಗ್ರೇ ಮ್ಯಾಟೆ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿವೆ.

ಇನ್ನು ಹೊಸ ಕಾರುಗಳಲ್ಲಿ ಪೋಕ್ಸ್ ವ್ಯಾಗನ್ ಕಂಪನಿಯು 1.0-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಮತ್ತು ಟಾಪ್ ಎಂಡ್ ಮಾದರಿಗಳಲ್ಲಿ 1.5-ಲೀಟರ್ ಟಿಎಸ್ ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, ಇದರಲ್ಲಿ ಆರಂಭಿಕ ವೆರಿಯೆಂಟ್‌ ಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್‌ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಟಾಪ್ ಎಂಡ್ ವೆರಿಯೆಂಟ್‌ಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಜಿಎಸ್ ಡ್ಯಯುಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ ಬಾಕ್ಸ್ ಆಯ್ಕೆ ಹೊಂದಿವೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನ‘ದರ್ಬಾರ್‌’ ಚಿತ್ರ ವಿಮರ್ಶೆ