ಮನೆ ಕಾನೂನು ಜನಪ್ರತಿನಿಧಿಗಳ ಆಯ್ಕೆ ವೇಳೆ ಮತದಾರರು ವಾಸ್ತವಾಂಶಗಳಿಂದ ದೂರ: ನ್ಯಾ. ಸಿದ್ಧಾರ್ಥ್ ಮೃದುಲ್ ವಿಷಾದ

ಜನಪ್ರತಿನಿಧಿಗಳ ಆಯ್ಕೆ ವೇಳೆ ಮತದಾರರು ವಾಸ್ತವಾಂಶಗಳಿಂದ ದೂರ: ನ್ಯಾ. ಸಿದ್ಧಾರ್ಥ್ ಮೃದುಲ್ ವಿಷಾದ

0

ಭಾರತೀಯರು ತಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ವಾಸ್ತವಾಂಶದಿಂದ ಪ್ರತ್ಯೇಕವಾಗಿ ಬಿಡುತ್ತಾರೆ ಎಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ವಿಷಾದ ವ್ಯಕ್ತಪಡಿಸಿದರು.

ನವದೆಹಲಿಯಲ್ಲಿ ಶುಕ್ರವಾರ ನಡೆದ ನ್ಯಾ. ಸುನಂದಾ ಭಂಡಾರೆ ಸ್ಮಾರಕ 27ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ. ಮೃದುಲ್ ಕಾನೂನುರಹಿತ ರಾಜಕೀಯ ಕಿವುಡಾಗಿರುತ್ತದೆ.  ದೇಶದಲ್ಲಿ ಸಾಮಾಜಿಕ- ಆರ್ಥಿಕ, ರಾಜಕೀಯ ಸ್ವಾತಂತ್ರ್ಯ ಹಾಗೂ ಸಮಾನತೆ ಒದಗಿಸುವಲ್ಲಿ ನ್ಯಾಯಾಂಗದ ಪಾತ್ರ ಪ್ರಮುಖವಾದುದು ಎಂದು ಹೇಳಿದರು.

ಒಂದು ಸಂಸ್ಥೆಯಾಗಿ ನ್ಯಾಯಾಂಗ ಕೇವಲ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಕಾವಲುಗಾರನಾಗಿರುವುದಿಲ್ಲ ಬದಲಿಗೆ ದೇಶದ ಸಾಮಾಜಿಕ- ಆರ್ಥಿಕ, ರಾಜಕೀಯ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಒದಗಿಸಲು ಇದೆ ಎಂದು ಅವರು ಪ್ರತಿಪಾದಿಸಿದರು.

ಇದೇ ವೇಳೆ “ವಾಸ್ತವದಲ್ಲಿ ಜನತಂತ್ರ: ಯಾವುದು ಫಲ ನೀಡುತ್ತದೆ? ಯಾವುದು ಇಲ್ಲ? ಏಕೆ?” ಎಂಬ ವಿಷಯವಾಗಿ ಮಾತನಾಡಿದ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಪ್ರೊ. ಅಭಿಜೀತ್ ಬ್ಯಾನರ್ಜಿ ಅವರು ಭಾರತದಲ್ಲಿ ಪ್ರಜಾಪ್ರಭುತ್ವದ ಮೂಲಭೂತ ಸಮಸ್ಯೆ ರಾಜ್ಯಗಳ ಗಾತ್ರವಾಗಿದೆ ಮತ್ತು ಪ್ರಜಾಪ್ರಭುತ್ವವನ್ನು ಸುಧಾರಿಸಲು ಸಣ್ಣ ಘಟಕಗಳ ಅಗತ್ಯವಿದೆ ಎಂದರು.

ಆದರೆ ಇದನ್ನು ಒಪ್ಪದ ನ್ಯಾ. ಮೃದುಲ್ ಈಶಾನ್ಯ ಭಾರತದ ಸಣ್ಣ ಸಣ್ಣ ರಾಜ್ಯಗಳಲ್ಲಿ  ಶಾಸಕ ಸ್ಥಾನಕ್ಕೆ   ಸ್ಪರ್ಧಿಸಲು ಕನಿಷ್ಠ ₹ 50 ಕೋಟಿ ವ್ಯಯಿಸಬೇಕಿದೆ. ಇವು ನಮ್ಮ ಪ್ರಜಾಪ್ರಭುತ್ವದ ವಾಸ್ತವಾಂಶಗಳು ಎಂದರು. ಪ್ರಜಾಪ್ರಭುತ್ವ ಕಾರ್ಯನಿರ್ವಹಿಸಬೇಕಾದರೆ ಹಸಿವು ಮತ್ತು ಬಡತನ ನಿವಾರಣೆಗೆ ಒತ್ತು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಯಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಿಮಾ ಕೊಹ್ಲಿ ಭಾಗವಹಿಸಿದ್ದರು.