ಮನೆ ರಾಜಕೀಯ ಜೆಡಿಎಸ್‌’ಗೆ ಮತ ಹಾಕಿದರೆ ಕಾಂಗ್ರೆಸ್‌’ಗೆ ಮತ ಹಾಕಿದ ಹಾಗೇ: ಆರ್. ಅಶೋಕ್

ಜೆಡಿಎಸ್‌’ಗೆ ಮತ ಹಾಕಿದರೆ ಕಾಂಗ್ರೆಸ್‌’ಗೆ ಮತ ಹಾಕಿದ ಹಾಗೇ: ಆರ್. ಅಶೋಕ್

0

ರಾಮನಗರ: ಈ ಭಾಗದಲ್ಲಿ ಜೆಡಿಎಸ್‌’ಗೆ ಮತ ಹಾಕಿದರೆ ಕಾಂಗ್ರೆಸ್‌’ಗೆ ಮತ ಹಾಕಿದ ಹಾಗೇ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ಚನ್ನಪಟ್ಟಣದಲ್ಲಿ ಶನಿವಾರ ಬಿಜೆಪಿಯ‌ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು.

ಕಾಂಗ್ರೆಸ್ ಎ ಮತ್ತು ಬಿ ಟೀಮ್ ಎರಡನ್ನೂ ಮನೆಗೆ ಕಳುಹಿಸಲಾಗುವುದು. ರಾಜ್ಯದಲ್ಲಿ ಮತ್ತೆ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಎಲ್ಲರೂ ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಈ ಬಾರಿ ಕಿಚಡಿ ಸರ್ಕಾರ ಬೇಡ. ಕೇಂದ್ರದ ರೀತಿ ಇಲ್ಲಿಯೂ ಸ್ಥಿರ ಸರ್ಕಾರ ಬರಬೇಕು ಎನ್ನುವುದು ಎಲ್ಲರ ಅಭಿಪ್ರಾಯ ಆಗಿದೆ ಎಂದರು.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಗನ ಮೇಲೆ‌ ನಡೆದ ಲೋಕಾಯುಕ್ತ ದಾಳಿ ಆಗಿದೆ ಎನ್ನುವುದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್, ಬಿಜೆಪಿಯವರು ಮಾತನಾಡುವುದು ಬೇಡ. ನಮ್ಮಲ್ಲಿ ಪಾರದರ್ಶಕತೆ ಇರುವ ಕಾರಣಕ್ಕೇ ಈ ದಾಳಿ ನಡೆದಿದ್ದು, ಸಂಪೂರ್ಣವಾಗಿ‌ ತನಿಖೆ ಮಾಡಲಾಗುವುದು ಎಂದರು.ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ಸಂಬಂಧ ಮುಖಾಮುಖಿಯಾಗಿ ಮಾತನಾಡಿದ್ದು ಎಲ್ಲರ ಅಭಿಪ್ರಾಯವನ್ನು ಕೇಂದ್ರದ ನಾಯಕರ ಮುಂದೆ ಇಟ್ಟಿದ್ದೇವೆ. ನಾಯಕರು ಹಸಿರು‌ ನಿಶಾನೆ ತೋರಿದ ಬಳಿಕ ಮುಂದಿ‌ನ ಕೆಲಸ ಮಾಡುತ್ತೇವೆ ಎಂದರು.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಅಶ್ವತ್ಥನಾರಾಯಣ, ವಿಧಾನ ಪರಿಷತ್ ಸದಸ್ಯ ಸಿ.ಪಿ.‌ ಯೋಗೇಶ್ವರ್ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಚನ್ನಪಟ್ಟಣದ ಅಪ್ರಮೇಯ ಸ್ವಾಮಿ ದೇವಾಲಯದಿಂದ ಪಟ್ಟಣದವರೆಗೆ ರೋಡ್ ಶೋ ನಡೆಯಿತು.