ಮನೆ ರಾಷ್ಟ್ರೀಯ ಹೈದರಾಬಾದ್‌: ಭಾರೀ ಮಳೆಗೆ ಗೋಡೆ ಕುಸಿತ: 7 ಮಂದಿ ಸಾವು

ಹೈದರಾಬಾದ್‌: ಭಾರೀ ಮಳೆಗೆ ಗೋಡೆ ಕುಸಿತ: 7 ಮಂದಿ ಸಾವು

0

ಹೈದರಾಬಾದ್(ತೆಲಂಗಾಣ): ಹೈದರಾಬಾದ್​ ನ ಬಾಚುಪಲ್ಲಿ ಎಂಬಲ್ಲಿ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ಒಡಿಶಾ ಮತ್ತು ಛತ್ತೀಸ್‌ಗಢ ನಿವಾಸಿಗಳೆಂದು ಗುರುತಿಸಲಾಗಿದೆ.

Join Our Whatsapp Group

ರೇಣುಕಾ ಎಲ್ಲಮ್ಮ ಕಾಲೊನಿಯಲ್ಲಿ ಗೋಡೆ ಕುಸಿದಿದೆ. ರಕ್ಷಣಾ ಸಿಬ್ಬಂದಿ ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಗಾಂಧಿ ಆಸ್ಪತ್ರೆಗೆ ರವಾನಿಸಿದ್ದಾರೆ.

ತಿರುಪತಿ ರಾವ್ ಮಜ್ಜಿ (20), ಶಂಕರ್ (22), ರಾಜು (25), ಖುಷಿ, ರಾಮ್ ಯಾದವ್ (34), ಗೀತಾ (32) ಮತ್ತು ಹಿಮಾಂಶು (14) ಮೃತಪಟ್ಟವರು. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ
ಮುಂದಿನ ಲೇಖನಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಮಂದಿರ ತೀರ್ಪು ರದ್ದುಗೊಳಿಸಲಿದೆ: ಪ್ರಧಾನಿ ಮೋದಿ