ಮನೆ ರಾಜ್ಯ ಕಲಬುರಗಿ ಜಿಲ್ಲೆಗೂ ವ್ಯಾಪಿಸಿದ ವಕ್ಫ್ ವಿವಾದ: 45ಕ್ಕೂ ಹೆಚ್ಚು ರೈತರಿಗೆ ನೋಟಿಸ್

ಕಲಬುರಗಿ ಜಿಲ್ಲೆಗೂ ವ್ಯಾಪಿಸಿದ ವಕ್ಫ್ ವಿವಾದ: 45ಕ್ಕೂ ಹೆಚ್ಚು ರೈತರಿಗೆ ನೋಟಿಸ್

0

ಕಲಬುರಗಿ: ಕರ್ನಾಟಕದಾದ್ಯಂತ ತೀವ್ರ ಸದ್ದು ಮಾಡುತ್ತಿರುವ ವಕ್ಫ್ ಬೋರ್ಡ್ ಆಸ್ತಿ ವಿಚಾರ ಇದೀಗ ಕಲಬರಗಿ ಜಿಲ್ಲೆಗೂ ಕಾಲಿಟ್ಟಿದೆ. ಜಿಲ್ಲೆಯ ಚಿಂಚೋಳಿ ತಾಲೂಕಿನ 45ಕ್ಕೂ ಹೆಚ್ಚು ರೈತರಿಗೆ ವಕ್ಫ್ ಮಂಡಳಿಯಿಂದ ನೋಟಿಸ್ ಬಂದಿದೆ.

Join Our Whatsapp Group

ಚಿಂಚೋಳಿ ತಾಲೂಕಿನ 45ಕ್ಕೂ ಹೆಚ್ಚು ರೈತರಿಗೆ ತಹಶೀಲ್ದಾರರು ನೋಟಿಸ್ ನೀಡಿದ್ದು, ರೈತರ ಪಹಣಿಯಲ್ಲಿ ವಕ್ಫ್​​ ಬೋರ್ಡ್​ ಹೆಸರು ನಮೂದು ಆಗಿದೆ ಎನ್ನಲಾಗಿದೆ. ನೋಟಿಸ್ ನೋಡಿ ರೈತರು ಕಂಗಾಲಾಗಿದ್ದಾರೆ.

ಮಹಾಂತೇಶ್ವರ ಮಠಕ್ಕೂ ನೋಟಿಸ್

ಚಿಂಚೋಳಿ ಪಟ್ಟಣದ ಮಹಾಂತೇಶ್ವರ ಮಠಕ್ಕೂ ನೋಟಿಸ್ ಜಾರಿ ಮಾಡಲಾಗಿದೆ. ಮಠದ 10×7 ಜಾಗ ತಮ್ಮದೆಂದು ವಕ್ಫ್​ ಬೋರ್ಡ್​ ನೋಟಿಸ್​ ನಲ್ಲಿ ಪ್ರತಿಪಾದಿಸಲಾಗಿದೆ. ಇದರಿಂದಾಗಿ ಲಕ್ಷಾಂತರ ರೂ. ಕೊಟ್ಟು ಜಮೀನು ಖರೀದಿ ಮಾಡಿದವರಿಗೂ ಸಂಕಷ್ಟ ಎದುರಾಗಿದೆ.

ಮೊದಲೇ ವಕ್ಫ್ ಹೆಸರು ಇದ್ದಿದ್ದರೆ ಜಮೀನು ಖರೀದಿಸುತ್ತಿರಲಿಲ್ಲ. ನಾವು ಕಷ್ಟ ಪಟ್ಟು ಜಮೀನನ್ನು ಖರೀದಿ ಮಾಡಿದ್ದೇವೆ. ಈಗ ವಕ್ಫ್​ ಬೋರ್ಡ್​ ಹೆಸರು ನಮ್ಮ ಪಹಣಿಯಲ್ಲಿ ಬಂದಿದೆ. ತಹಶೀಲ್ದಾರ್​ ಮೇಲಿಂದ ಮೇಲೆ ನಮಗೆ ನೋಟಿಸ್ ನೀಡುತ್ತಿದ್ದಾರೆ‌. ಕಚೇರಿಗೆ ಬಂದರೆ ವಕ್ಫ್ ಬೋರ್ಡ್​ ಅಧಿಕಾರಿಗಳು ಬಂದಿಲ್ಲ ಎನ್ನುತ್ತಾರೆ.

ವಿಜಯಪುರದಲ್ಲಿ ರೈತರ ಪ್ರತಿಭಟನೆ ಮುಂದುವರಿದಿದೆ. ಮಂಗಳವಾರ ತಡರಾತ್ರಿ ಕೂಡ ಪ್ರತಿಭಟನೆ ಮುಂದುವರಿಯಿತು. ಈ ಮಧ್ಯೆ, ವಿಜಯಪುರದಲ್ಲಿ ರೈತರಿಗೆ ನೋಟಿಸ್ ನೀಡಿರುವುದನ್ನ ಸಚಿವ ಜಮೀರ್ ಅಹಮ್ಮದ್ ಖಾನ್ ಸಮರ್ಥಿಸಿಕೊಂಡಿದ್ದಾರೆ.