Saval TV on YouTube
ನವದೆಹಲಿ: ಜಲ ತಜ್ಞ ಚಂದ್ರಶೇಖರ್ ಅಯ್ಯರ್ ಅವರು ‘ಕೇಂದ್ರ ಜಲ ಆಯೋಗದ’ (CWC) ಮುಂದಿನ ಅಧ್ಯಕ್ಷರಾಗಿ ನೇಮಕಗೊಂಡಿದ್ದು, ಡಿಸೆಂಬರ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಚಂದ್ರಶೇಖರ್ ಅವರು 1984ನೇ ಬ್ಯಾಚ್ನ ‘ಸೆಂಟ್ರಲ್ ವಾಟರ್ ಎಂಜಿನಿಯರಿಂಗ್ ಸರ್ವಿಸ್’ನ ಅಧಿಕಾರಿಯಾಗಿದ್ದಾರೆ.
ಕೇಂದ್ರದ ಜಲಯೋಜನಗೆಳ ಅನುಷ್ಠಾನ, ಪ್ರಗತಿಯಲ್ಲಿ ಚಂದ್ರಶೇಖರ್ ಅಯ್ಯರ್ ಅವರು ಸುಮಾರು 36 ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದಾರೆ. ಅಲ್ಲದೇ ನೆರೆಯ ದೇಶಗಳ ಜಲ ಯೋಜನೆಗಳ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡಿದ್ದಾರೆ.
ಚಂದ್ರಶೇಖರ್ ಅವರು ಜಲ ಆಯೋಗದ ಅಧ್ಯಕ್ಷ ಹುದ್ದೆಯ ಜೊತೆ ‘ಅಣೆಕಟ್ಟುಗಳ ರಕ್ಷಣೆ ರಾಷ್ಟ್ರೀಯ ಪ್ರಾಧಿಕಾರ’ದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.














