ಮನೆ ರಾಜ್ಯ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆ: ಆಲಡ್ಕದಲ್ಲಿ ಮನೆಗಳು ಜಲಾವೃತ

ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆ: ಆಲಡ್ಕದಲ್ಲಿ ಮನೆಗಳು ಜಲಾವೃತ

0

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಏರುತ್ತಲೇ ಇದ್ದು, ಬಂಟ್ವಾಳದಲ್ಲಿ ನೀರಿನ ಮಟ್ಟ ಸುಮಾರು 8 ಮೀ.ಗೆ ತಲುಪಿದ ಹಿನ್ನೆಲೆ ಪಾಣೆಮಂಗಳೂರಿನ ಆಲಡ್ಕದಲ್ಲಿ ಮನೆಗಳು ಮುಳುಗಡೆಯಾಗಿದ್ದು, ಸುಮಾರು 10 ಕುಟುಂಬಗಳನ್ನು ತಾಲೂಕು ಆಡಳಿತ ಸ್ಥಳಾಂತರ ಮಾಡಿದೆ.

Join Our Whatsapp Group

ನದಿ ಪಾತ್ರದ ಗ್ರಾಮಗಳಲ್ಲಿ ಕೃಷಿ ತೋಟಗಳು ಜಲಾವೃತಗೊಂಡಿವೆ.

ಬಂಟ್ವಾಳದ ಜಾಲಾವೃತ ಪ್ರದೇಶಗಳಿಗೆ ಮಂಗಳೂರು ಸಹಾಯಕ ಕಮಿಷನರ್  ಹರ್ಷವರ್ಧನ ಪಿ.ಜೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು.

ಬಂಟ್ವಾಳದಲ್ಲಿ ನದಿ ನೀರಿನ ಅಪಾಯಕಾರಿ ಮಟ್ಟ 8.5 ಮೀ.ಆಗಿದ್ದು, ನಿನ್ನೆ ಸಂಜೆಯಿಂದ ನೀರಿನ ಮಟ್ಟ ಏರುತ್ತಲೇ ಇದೆ. ತಾಲೂಕಿನ ನದಿ ಪಾತ್ರದ ಗ್ರಾಮಗಳಾದ ಸರಪಾಡಿ, ಬರಿಮಾರು, ಮಣಿನಾಲ್ಕೂರು ಗ್ರಾಮಗಳಲ್ಲಿ ಕೆಲವೊಂದು ತೋಟ, ಗದ್ದೆಗಳಿಗೆ ನೀರು ನುಗ್ಗಿದೆ.