ಮನೆ ರಾಜ್ಯ ದೇಶದ ಆತ್ಮವನ್ನು ಅರಿತ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ: ಚಕ್ರವರ್ತಿ ಸೂಲಿಬೆಲೆ

ದೇಶದ ಆತ್ಮವನ್ನು ಅರಿತ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ: ಚಕ್ರವರ್ತಿ ಸೂಲಿಬೆಲೆ

0

ಬೆಂಗಳೂರು : ದೇಶದ ಆತ್ಮವನ್ನು ಅರಿತುಕೊಂಡ ವ್ಯಕ್ತಿಯನ್ನು ನಾವಿಂದು ಕಳೆದುಕೊಂಡಿದ್ದೇವೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಬೇಸರ ವ್ಯಕ್ತಪಡಿಸಿದ್ದಾರೆ.

ಎಸ್.ಎಲ್ ಭೈರಪ್ಪ ಅವರ ನಿಧನದ ಬಗ್ಗೆ ಸಂತಾಪ ಸೂಚಿಸುತ್ತ `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಅವರು, ಭೈರಪ್ಪ ಅವರ ದೇಹತ್ಯಾಗದ ಪರಿಸ್ಥಿತಿಯಿದೆ ಎಂದು ಗೊತ್ತಿತ್ತು. ನಾನು ಎರಡು ವರ್ಷದ ಹಿಂದೆ ಸಾವರ್ಕರ್ ಪುರಸ್ಕಾರವನ್ನು ಪಡೆಯುತ್ತಿದ್ದಾಗ ಅವರಿಗೆ ನೆನಪಿನ ಶಕ್ತಿ ಕಡಿಮೆ ಆಗಿರೋದು ಎಲ್ಲವೂ ಗೊತ್ತಾಗಿತ್ತು ಎಂದು ತಿಳಿಸಿದರು.

ಒಬ್ಬ ವ್ಯಕ್ತಿಯನ್ನು ಕಳೆದುಕೊಂಡಾಗ ಉಂಟಾಗುವ ನಿರ್ವಾತವು ಇಂದು ಭೈರಪ್ಪ ಅವರನ್ನು ಕಳೆದುಕೊಂಡಾಗ ಆಗಿದೆ. ದೇಶವನ್ನು ಪರಿಪೂರ್ಣವನ್ನು ಅರಿತುಕೊಂಡು ಬದುಕಬೇಕು ಅಂದುಕೊಂಡ ವ್ಯಕ್ತಿಗಳಲ್ಲಿ ಭೈರಪ್ಪ ಅವರು ಒಬ್ಬರಾಗಿದ್ದರು. ಅವರನ್ನು ಕಳೆದುಕೊಂಡು ಎಲ್ಲಿಂದ ಮಾತು ಶುರು ಮಾಡ್ಬೇಕು, ಎಲ್ಲಿಂದ ಅಂತ್ಯ ಮಾಡ್ಬೇಕು ಅಂತ ಗೊತ್ತಾಗದಿರುವಂತ ಪರಿಸ್ಥಿತಿ ಎದುರಾಗಿದೆ ಶೋಕ ವ್ಯಕ್ತಪಡಿಸಿದರು.

ಕಡು ಬಡತನದಲ್ಲಿ ಬಂದತಹ ವ್ಯಕ್ತಿ, ತನ್ನ ಊರಿಗೆ ಹೋಗಿ ಸರಸ್ವತಿ ಸಮ್ಮಾನ್ ಪುರಸ್ಕಾರ ಸ್ವೀಕರಿಸಿ, ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿದ ದಿನ ಅವರ ಭಾವ ಹೇಗಿದ್ದಿರಬಹುದು. ಒಬ್ಬ ವ್ಯಕ್ತಿಗೆ ನೊಬೆಲ್ ಪ್ರಶಸ್ತಿಯೂ ಅತ್ಯಂತ ಶ್ರೇಷ್ಠವಾದ ಗೌರವ ಅಲ್ಲ. ತನ್ನ ಊರಿನ ಜನ ಕರೆದು ಸನ್ಮಾನ ಮಾಡಿದ್ದಕ್ಕಿಂತ ದೊಡ್ಡ ಗೌರವ ಬೇರೊಂದಿಲ್ಲ. ಅದು ಭೈರಪ್ಪ ಅವರಿಗೆ ಸಿಕ್ಕಿದೆ ಎಂದರು.