ಮನೆ ರಾಜ್ಯ ಫಾರಿನ್ ಟೂರ್‌ಗೆ ನಾವು ಹೋಗಲ್ಲ, ಶಾಸಕರು ಟೂರ್‌ಗೆ ಹೋಗಲು ಹಿಂದೇಟು – ಮಾಗಡಿ ಬಾಲಕೃಷ್ಣ

ಫಾರಿನ್ ಟೂರ್‌ಗೆ ನಾವು ಹೋಗಲ್ಲ, ಶಾಸಕರು ಟೂರ್‌ಗೆ ಹೋಗಲು ಹಿಂದೇಟು – ಮಾಗಡಿ ಬಾಲಕೃಷ್ಣ

0

ಬೆಂಗಳೂರು : ಕಾಂಗ್ರೆಸ್‌ನಲ್ಲಿ ಹಲವು ಶಾಸಕರು ಫಾರಿನ್ ಟೂರ್ ಹೋಗಲು ಹಿಂದೇಟು ಹಾಕಿದ್ದಾರೆ. ಕಾಂಗ್ರೆಸ್ ಒಳಗಿನ ಸದ್ಯದ ಸನ್ನಿವೇಶದಲ್ಲಿ ಕಾದುನೋಡುವ ತಂತ್ರಕ್ಕೆ ಶರಣಾಗಿದ್ದಾರೆ.‌

ವಿಧಾನಸೌಧದಲ್ಲಿ ಮಾಗಡಿ ಶಾಸಕ ಬಾಲಕೃಷ್ಣ ಮಾತನಾಡಿ, ನನಗೂ ಕರೆದಿದ್ರೂ ನಾನು ಹೋಗಲ್ಲ ಅಂದೆ. ಪಶುಸಂಗೋಪನಾ ಅಧ್ಯಯನ ಅಂತಾ ಹೋಗ್ತಿದ್ದಾರೆ. ಹಾಲು ಎಷ್ಟು ಕರೆಯುತ್ತೆ ಅನ್ನೋದನ್ನ ನೋಡಿಕೊಂಡು ಬರಲು ಹೋಗ್ತಿದ್ದಾರೆ. ಬಜೆಟ್ ಅನ್ನ ಸಿಎಂ ಮಂಡಿಸ್ತಾರೆ, ಶಾಸಕರು ಮಂಡಿಸ್ತಾರಾ? ಬಜೆಟ್‌ಗೆ ಶಾಸಕರು ಬರ್ತಾರೆ ಎಂದರು.

ಶಾಸಕ ಕೋನರೆಡ್ಡಿ ಪ್ರತಿಕ್ರಿಯಿಸಿ, ನಾನು ವಿದೇಶ ಪ್ರವಾಸಕ್ಕೆ ಹೋಗ್ತಿಲ್ಲ. ಬಜೆಟ್ ಇದೆ, ಬಜೆಟ್ ಅಧಿವೇಶನ ಇದೆ ಅಂತಾ ಸ್ಪಷ್ಟಪಡಿಸಿದ್ದಾರೆ. ಕಳೆದ ಅಧಿವೇಶನ ಸಂದರ್ಭದಲ್ಲಿ ನನಗೂ ಕರೆದಿದ್ದರು. ಆಗ ಬರ್ತೀನಿ ಎಂದಿದ್ದೆ. ಈಗ ನಾನು ಬರಲ್ಲ ಎಂದಿದ್ದೇನೆ.

ಶಾಸಕರ ಟೀಂ ಮಾತನಾಡುವಾಗ ಕರೆದಿದ್ರು. ಈಗ ಯಾರು ಹೋಗ್ತಿದ್ದಾರೆ, ಎಲ್ಲಿಗೆ ಹೋಗ್ತಾ ಇದ್ದಾರೆ ಗೊತ್ತಿಲ್ಲ ಅಂತ ಸ್ಪಷ್ಟಪಡಿಸಿದರು. ಇದೇ ವೇಳೆ ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, ನಾನು ಹೋಗ್ತಿಲ್ಲ. ನನಗೆ ಕ್ಷೇತ್ರದಲ್ಲಿ ಕೆಲಸ ಇದೆ. ಈಗ ಹೋಗಲ್ಲ, ಏಪ್ರಿಲ್‌ಗೆ ಹೋಗ್ತೀನಿ ಅಂತ ಸ್ಪಷ್ಟಪಡಿಸಿದರು.