ಮೇಷ ರಾಶಿ : ಈ ವಾರ ಕಾರ್ಯಕ್ಷೇತ್ರದಲ್ಲಿ ಶ್ರಮಕ್ಕೆ ಉತ್ತಮ ಫಲ ದೊರೆಯಲಿದೆ. ಅಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಹಣಕಾಸಿನಲ್ಲಿ ಸ್ಥಿರತೆ ಇರುತ್ತದೆ. ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ, ಆತುರದ ನಿರ್ಧಾರ ಬೇಡ.
ದೈವಾರಾಧನೆ : ಹನುಮಾನ್ ಚಾಲೀಸ್ ಪಠಣೆ ಮಾಡಿ, ಶುಭಸಂಖ್ಯೆ : 9
ವೃಷಭ ರಾಶಿ : ಕುಟುಂಬದ ವಿಷಯಗಳಲ್ಲಿ ಸಂತೋಷಕರವಾದ ಬೆಳವಣಿಗೆಗಳು ನಡೆಯುತ್ತದೆ. ಹಳೆಯ ಬಾಕಿ ಹಣ ವಾಪಸ್ ಸಿಗುವ ಸಾಧ್ಯತೆ ಇದೆ. ಅನಾವಶ್ಯಕ ಚಿಂತೆಗಳನ್ನು ಬಿಟ್ಟು ಧನಾತ್ಮಕವಾಗಿ ಯೋಚಿಸಿ.
ದೇವತಾ ಆರಾಧನೆ : ಲಕ್ಷ್ಮಿ ದೇವಿ ಪೂಜೆ, ಶುಭ ಸಂಖ್ಯೆ : 6
ಮಿಥುನ ರಾಶಿ : ಹೊಸ ಯೋಜನೆಗಳನ್ನು ಆರಂಭಿಸಲು ಅನುಕೂಲಕರವಾದ ಸಮಯ, ಸ್ನೇಹಿತರಿಂದ ಸಹಕಾರ ಸಿಗುತ್ತದೆ. ಮಾತಿನಲ್ಲಿ ಹಿಡಿತ ಇರಲಿ, ಆರೋಗ್ಯ ಸಾಧಾರಣವಾಗಿರುತ್ತದೆ. ಹೊಸ ಸಂಪರ್ಕಗಳಿಂದ ಲಾಭ.
ದೈವಾರಾಧನೆ : ವಿಷ್ಣು ಸಹಸ್ರನಾಮ ಪಠಣೆ, ಶುಭ ಸಂಖ್ಯೆ : 5
ಕರ್ಕಾಟಕ ರಾಶಿ : ಮಾನಸಿಕ ಒತ್ತಡ ಸ್ವಲ್ಪ ಹೆಚ್ಚಾಗಬಹುದು. ಆದರೂ ಕೆಲಸದಲ್ಲಿ ಯಶಸ್ಸು ಕಾಣುವಿರಿ, ಕುಟುಂಬದವರೊಂದಿಗೆ ಸಮಯ ಕಳೆಯುವುದು ಲಾಭದಾಯಕವಾಗಿರುತ್ತದೆ.
ದೈವರಾಧನೆ : ಶಿವನಿಗೆ ರುದ್ರಾಭಿಷೇಕ ಮಾಡಿಸಬೇಕು, ಓಂ ನಮಃ ಶಿವಾಯ ಜಪ ಮಾಡಬೇಕು , ಶುಭ ಸಂಖ್ಯೆ : 2
ಸಿಂಹ ರಾಶಿ : ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಾಣಬಹುದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ, ಅನಗತ್ಯ ವ್ಯಯವನ್ನು ನಿಯಂತ್ರಿಸಿ.
ದೈವಾರಾಧನೆ : ಸೂರ್ಯ ನಮಸ್ಕಾರ ಆದಿತ್ಯ ಹೃದಯಂ ಪಟನೆ ಮಾಡಿ, ಶುಭ ಸಂಖ್ಯೆ : 1
ಕನ್ಯಾ ರಾಶಿ : ಶ್ರಮಕ್ಕೆ ಫಲ ಸಿಗುವ ವಾರ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು.
ದೈವಾರಾಧನೆ : ದುರ್ಗಾ ಸ್ತೋತ್ರ ಪಠಣೆ, ಶುಭ ಸಂಖ್ಯೆ : 4
ತುಲಾ ರಾಶಿ : ವೈಯಕ್ತಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ದಾಂಪತ್ಯದಲ್ಲಿ ಹೊಂದಾಣಿಕೆ ಉತ್ತಮ, ಹೊಸ ಸಂಪರ್ಕಗಳು ಲಾಭ ಕೊಡುತ್ತದೆ. ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತವೆ.
ದೈವಾರಾಧನೆ : ಮಹಾಲಕ್ಷ್ಮಿ ಪೂಜೆ, ಶುಭ ಸಂಖ್ಯೆ : 7
ವೃಶ್ಚಿಕ ರಾಶಿ : ಆರ್ಥಿಕವಾಗಿ ಲಾಭದ ಸೂಚನೆ ಸಿಗುತ್ತದೆ ಆದರೆ ಅತಿಯಾದ ಆತುರ ಬೇಡ, ಮಾತಿನಲ್ಲಿ ಹಿಡಿತವಿರಲಿ, ಆರೋಗ್ಯದ ಕಡೆ ಗಮನ ಅಗತ್ಯ.
ದೈವಾರಾಧನೆ : ಸುಬ್ರಹ್ಮಣ್ಯ ಸ್ವಾಮಿ ಆರಾಧನೆ, ಶುಭ ಸಂಖ್ಯೆ : 8
ಧನಸ್ಸು ರಾಶಿ : ಈ ವಾರ ಪ್ರಯಾಣ ಯೋಗ ಇದೆ. ಕೆಲಸದಲ್ಲಿ ಬದಲಾವಣೆ ಸಾಧ್ಯತೆ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ.
ದೈವಾರಾಧನೆ : ಗುರು (ಬೃಹಸ್ಪತಿ) ಸ್ತೋತ್ರ ಪಠಣೆ ಅಥವಾ ದಕ್ಷಿಣ ಮೂರ್ತಿ ಅರ್ಚನೆ ಮಾಡಿಸಿರಿ, ಶುಭ ಸಂಖ್ಯೆ : 3
ಮಕರ ರಾಶಿ : ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ. ಹಿರಿಯರ ಸಲಹೆ ತುಂಬಾ ಮುಖ್ಯ ಹಣಕಾಸು ಸ್ಥಿತಿ ಉತ್ತಮವಾಗಿರುತ್ತದೆ. ಸ್ಥಿರ ಪ್ರಗತಿ.
ದೈವಾರಾಧನೆ : ಶನಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚಿರಿ, ಶುಭಸಂಖ್ಯೆ : 10
ಕುಂಭ ರಾಶಿ : ಸ್ನೇಹಿತರಿಂದ ಸಹಾಯ ಸಿಗುತ್ತದೆ. ಹೊಸ ಅವಕಾಶಗಳು ಆಲೋಚನೆಗಳು ಕೈಗೆ ಬರುತ್ತವೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ.
ದೈವಾರಾಧನೆ : ಶನಿ ದೇವರ ಪೂಜೆ ಅಥವಾ ಹನುಮಾನ್ ಚಾಲೀಸ್ ಪಠಣೆ ಮಾಡಿ, ಶುಭ ಸಂಖ್ಯೆ : 11
ಮೀನ ರಾಶಿ : ಆತ್ಮವಿಶ್ವಾಸ ಹೆಚ್ಚಾಗಲಿದೆ. ಮನಸ್ಸಿಗೆ ಶಾಂತಿ, ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಧೈರ್ಯದಿಂದ ಮುಂದುವರೆಯಿರಿ.
ದೈವಾರಾಧನೆ : ವಿಷ್ಣು ಅಥವಾ ನಾರಾಯಣ ಪೂಜೆಯನ್ನು ಮಾಡಿಸಿರಿ, ಶುಭ ಸಂಖ್ಯೆ : 12














