ಮನೆ ಸುದ್ದಿ ಜಾಲ ಪಶ್ಚಿಮ ಏಷ್ಯಾ ಬಿಕ್ಕಟ್ಟು – ದೇಶದಲ್ಲಿ ಇಂಧನ ಭದ್ರತೆ ಪರಿಶೀಲಿಸಲು ಮೋದಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ...

ಪಶ್ಚಿಮ ಏಷ್ಯಾ ಬಿಕ್ಕಟ್ಟು – ದೇಶದಲ್ಲಿ ಇಂಧನ ಭದ್ರತೆ ಪರಿಶೀಲಿಸಲು ಮೋದಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ

0

ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ದೇಶದಲ್ಲಿ ಇಂಧನ ಭದ್ರತೆ, ಇಂಧನ ಪೂರೈಕೆ ಮತ್ತು ಆರ್ಥಿಕತೆಯ ಸಂಭಾವ್ಯ ಪರಿಣಾಮಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ಸಭೆ ನಡೆಯಲಿದೆ.

ಇಂದು (ಬುಧವಾರ) ಸಂಜೆ 7 ಗಂಟೆಯಿಂದ ಸಂಪುಟ ಸಮಿತಿಯೊಂದಿಗೆ ಮ್ಯಾರಥಾನ್‌ ಸಭೆ ನಡೆಯಲಿದೆ. ಕಳೆದ ಮಾರ್ಚ್‌ 22 ರಂದೂ ಇಂಧನ ಪೂರೈಕೆಯನ್ನು ಪರಿಶೀಲಿಸಲು ಸಭೆ ನಡೆಸಲಾಗಿತ್ತು. ಅಂದಿನ ಸಭೆಯಲ್ಲಿ ಅಗತ್ಯ ಸರಕುಗಳು ಮತ್ತು ನಿರ್ಣಾಯಕ ವಲಯಗಳಿಗೆ ಇಂಧನ ಮತ್ತು ತೈಲ ಪೂರೈಕೆಗಳ ಕುರಿತು ಮೌಲ್ಯಮಾಪನ ನಡೆಸಲಾಗಿತ್ತು. ಇದೀಗ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.

ಉನ್ನತಮಟ್ಟದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಗೃಹಸಚಿವ ಅಮಿತ್‌ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಪಾಲ್ಗೊಳ್ಳಿದ್ದಾರೆ. ಇದರೊಂದಿಗೆ ಆರ್ಥಿಕತೆ ಮತ್ತು ಮೂಲಕ ಸೌಕರ್ಯಗಳಿಗೆ ಸಂಬಂಧಿಸಿದ ಖಾತೆ ನಿರ್ವಹಿಸುವ ಹಿರಿಯ ಸಚಿವರು ಉಪಸ್ಥಿತರಿರಿಲಿದ್ದಾರೆ.