ಮನೆ ಆರೋಗ್ಯ ಪಡವಲಕಾಯಿಯಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನ?

ಪಡವಲಕಾಯಿಯಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನ?

0

ಪಡವಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕಡಿಮೆ ಕ್ಯಾಲೋರಿ, ವಿಟಮಿನ್ ಎ, ಬಿ, ಸಿ, ಜೊತೆಗೆ ಮ್ಯಾಂಗನೀಸ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣ ಸಮೃದ್ಧವಾಗಿದೆ. ಇಷ್ಟೆಲ್ಲ ಗುಣಗಳಿರುವ ಪಡವಲಕಾಯಿಯಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಎಂಬುದರ ಮಾಹಿತಿ ಇಲ್ಲಿದೆ.

​ಹೃದಯದ ಆರೋಗ್ಯ ಸುಧಾರಣೆ

ಪಡವಲ ಕಾಯಿಯಲ್ಲಿನ ಸಾರಗಳು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತವೆ. ರಕ್ತದೊತ್ತಡವನ್ನು ಸಮತೋಲನದಲ್ಲಿಟ್ಟು ಹೃದಯಕ್ಕೆ ಸಂಬಂಧಿಸಿದ ಒತ್ತಡ ಮತ್ತು ನೋವನ್ನು ಕಡಿಮೆ ಮಾಡಲು ಇದು ಅತ್ಯುತ್ತಮ ಆಹಾರವಾಗಿದೆ. ನೀವು ಪ್ರತಿದಿನ ಈ ಪಡವಲಕಾಯಿಯ ಜ್ಯೂಸ್‌ ಮಾಡಿ ಸೇವನೆ ಮಾಡಬಹುದು. ಅಥವಾ ಸಲಾಡ್‌, ಸಾಂಬಾರ್‌ ಮೂಲಕ ಕೂಡ ಸೇವನೆ ಮಾಡಬಹುದು.

​​ಮಲಬದ್ಧತೆ ನಿವಾರಣೆ

ಪಡವಲಕಾಯಿ ಮಲಬದ್ಧತೆಗೆ ಉತ್ತಮ ಚಿಕಿತ್ಸೆ ನೀಡುತ್ತದೆ. ಗ್ಯಾಸ್ಟ್ರಿಕ್‌ ಅಥವಾ ಆಸಿಡಿಟಿಯಿಂದ ಹೊಟ್ಟೆ ಭಾರವಾಗಿದ್ದರೆ ಅದನ್ನು ನಿವಾರಿಸಿ, ಹೊಟ್ಟೆಯುಬ್ಬರ, ನೋವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಆಹಾರ ಜೀರ್ಣವಾಗದೆ ಮಲಬದ್ಧತೆ ಸಮಸ್ಯೆಯಾಗಿದ್ದರೆ ನಿಮ್ಮ ಕರುಳಿನ ಚಲನೆಯನ್ನು ಸುಧಾರಿಸಿ ಮಲವಿಸರ್ಜನೆಯನ್ನು ಸುಲಭಗೊಳಿಸುತ್ತದೆ. ನೀವು ಪ್ರತಿದಿನ ಬೆಳಿಗ್ಗೆ 1 ರಿಂದ 2 ಚಮಚ ಪಡವಲಕಾಯಿ ರಸವನ್ನು ಸೇವನೆ ಮಾಡಿದರೆ ಹೊಟ್ಟೆ ಸಮಸ್ಯೆ ನಿವಾರಣೆಯಾಗಿ ದೇಹಕ್ಕೆ ಆರಾಮದಾಯಕ ಅನುಭವ ಸಿಗುತ್ತದೆ.

​ಟೈಪ್‌ 2 ಮಧುಮೇಹಕ್ಕೆ ಒಳ್ಳೆಯದು

ಸಾಮಾನ್ಯವಾಗಿ ಮಧುಮೇಹ ಇದ್ದವರಿಗೆ ಅದನ್ನು ಸೇವಿಸಬಾರದು, ಇದನ್ನು ಸೇವಿಸಬಾರದು ಎನ್ನುತ್ತಾರೆ. ಆದರೆ ಪಡವಲಕಾಯಿ ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ. ಟೈಪ್ 2 ಡಯಾಬಿಟಿಸ್ ಇರುವವರಿಗೆ ಈ ತರಕಾರಿ ಉತ್ತಮವಾಗಿದೆ. ಸೋರೆಕಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿರಿಸಿ ಮಧುಮೇಹವನ್ನು ನಿಯಂತ್ರಿಸಲು ಪಡವಲಕಾಯಿ ಸಹಕಾರಿಯಾಗಿದೆ.

​ಕಾಮಾಲೆಗೆ ಪಥ್ಯದ ಆಹಾರವಾಗಿದೆ

ಅಥವಾ ಕಾಮಾಲೆಗೆ ಪಡವಲಕಾಯಿ ಉತ್ತಮ ಆಹಾರವಾಗಿದೆ. ಅಲ್ಲದೆ ಕಾಮಾಲೆಯಾದಾಗ ಪಥ್ಯ ಮಾಡುವ ಅಗತ್ಯವಿರುತ್ತದೆ. ಹೀಗಾಗಿ ಕಾಮಾಲೆ ಚಿಕಿತ್ಸೆಗಾಗಿ ಪಡುವಲಕಾಯಿಯ ಎಲೆಗಳನ್ನು ಕೊತ್ತಂಬರಿ ಸೊಪ್ಪಿನೊಂದಿಗೆ ಸೇವಿಸಿ. ನೀವು ದಿನಕ್ಕೆ ಮೂರು ಬಾರಿ ಈ ಮನೆಮದ್ದನ್ನು ವೈದ್ಯರ ಸಲಹೆಯೊಂದಿಗೆ ಸೇವನೆ ಮಾಡಿದರೆ ಕಾಮಾಲೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

​ತೂಕ ನಷ್ಟಕ್ಕೆ ಸಹಕಾರಿ

ಪಡವಲಕಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ಕೊಬ್ಬಿನ ಅಂಶವನ್ನು ಹೊಂದಿರುವುದಿಲ್ಲ. ಹೀಗಾಗಿ ಇದು ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಏಕೆಂದರೆ ಇದು ನೀರು ಮತ್ತು ನಾರಿನ ಜೊತೆಗೆ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದ್ದರಿಂದ ನೀವು ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಪಡವಲಕಾಯಿಯ ಜ್ಯೂಸ್‌ ಸಹಾಯಕವಾಗಿದೆ.

ಹಿಂದಿನ ಲೇಖನಯೋಗಥಾನ್ ಮೂಲಕ ಯೋಗದಲ್ಲಿ ಗಿನ್ನೆಸ್‌ ದಾಖಲೆ ನಿರ್ಮಾಣ: ಸಚಿವ ಡಾ.ನಾರಾಯಣಗೌಡ
ಮುಂದಿನ ಲೇಖನಹಾಡಹಗಲೇ ಪುರಸಭೆ ಮಾಜಿ ಅಧ್ಯಕ್ಷನ ಹತ್ಯೆ