ಮನೆ ಆರೋಗ್ಯ ಜ್ವರ ಬರಲು ಕಾರಣವೇನು ?

ಜ್ವರ ಬರಲು ಕಾರಣವೇನು ?

0

ಸಾಮಾನ್ಯವಾಗಿ ನಮ್ಮ ಶರೀರದ ಉಷ್ಣತೆ 37°c (98.6°F) ಇರುತ್ತದೆ ಇದು ನಾರ್ಮಲ್ ಟೆಂಪರೇಚರ್ ಆದರೆ ಆರೋಗ್ಯವಂತ ವ್ಯಕ್ತಿಗಳಲ್ಲಿ ಉಷ್ಣತೆ ಇದಕ್ಕಿಂತ ಒಂದು ಡಿಗ್ರಿ ಹೆಚ್ಚು ಅಥವಾ ಕಡಿಮೆ ಇರಬಹುದು ಶರೀರದ ಉಷ್ಣತೆ ನಾರ್ಮಲ್ ಗಿಂತ ಹೆಚ್ಚಿದ್ದರೆ ಆಗ ಜ್ವರ ಬಂದಿದೆ ಎನ್ನುತ್ತೇವೆ.

Join Our Whatsapp Group

ಜ್ವರ ಒಂದು ಕಾಯಿಲೆಯಲ್ಲ. ರೋಗದ ಲಕ್ಷಣ ಅಥವಾ ಮುನ್ಸೂಚನೆ ಅಷ್ಟೇ. ಶರೀರದಲ್ಲಿ ಯಾವುದೋ ರೋಗ ಇದೆ ಎನ್ನುವುದನ್ನು ಜ್ವರ ಸೂಚಿಸುತ್ತದೆ. ರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯ ಹೆಚ್ಚದಿರುವಂತೆ ತಡೆಯಲು ಜ್ವರ ಬರಬಹುದು.

ಶರೀರದ ಉಷ್ಣತೆ ದಿನ ಕಳೆದಂತೆ ಸ್ವಲ್ಪ ವ್ಯತ್ಯಾಸವಾಗುತ್ತದೆ. ಉದಾಹರಣೆಗೆ ಬೆಳಿಗ್ಗೆ ನಮ್ಮ ಶರೀರದ ತಾಪಮಾನ ಕಡಿಮೆ ಇದ್ದು, ಸಾಯಂಕಾಲದ ಹೊತ್ತಿಗೆ ಸ್ವಲ್ಪ ಹೆಚ್ಚುವ ಸಾಧ್ಯತೆ ಇರುತ್ತದೆ. ಹಾಗೆಯೇ ಬಿಸಿಯಾದ ಪಾನೀಯಗಳನ್ನು ಸೇವಿಸಿದಾಗಲು ತಾಪಮಾನ ಅಧಿಕವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಜ್ವರ ಬಂದಿದೆ ಎಂದು ಭಯಪಡಬಾರದು.

ಥರ್ಮಾಮೀಟರ್ ಅನ್ನು ನಾಲಿಗೆಯ ಕೆಳಗೋ, ಅಂಕುಳ ಸಂಧಿಯಲ್ಲೂ ಇಟ್ಟು, ಉಷ್ಣತೆ ತಿಳಿದುಕೊಳ್ಳಬಹುದು. ಕಿವಿಯಲ್ಲಿಟ್ಟು ತಾಪಮಾನ ನೋಡುವ ಥರ್ಮಾಮೀಟರ್ ಸಹ ಲಭ್ಯ.

ಶರೀರದ ಉಷ್ಣತೆ ಈ ಕೆಳ ಸಂದರ್ಭಗಳಲ್ಲಿ ಮಾರ್ಪಾಟ್ ಆಗುವುದು ಸಹಜ.

● ಬಹಳ ಬಿಗಿಯಾದ ಉಡುಪನ್ನು ಧರಿಸಿದ್ದಾಗ.

●  ವ್ಯಾಯಾಮ ಮಾಡಿದ ನಂತರ

● ಬಹಳ ಸೆಖೆ ಅಥವಾ ಚಳಿ ವಾತಾವರಣದಲ್ಲಿರುವಾಗ

● ಹಾರ್ಮೋನ್ ಗಳಲ್ಲಿ ಬದಲಾವಣೆಯಾದಾಗ (ಸ್ತ್ರೀಯರಲ್ಲಿ ತಿಂಗಳ ಕೆಲವು ದಿನಗಳು ಶರೀರದ ಉಷ್ಣತೆ ಹೆಚ್ಚುತ್ತದೆ)

 ಮೇಲೆ ಹೇಳಿದ ಯಾವುದೇ ಕಾರಣಗಳಿಲ್ಲದೆ ಶರೀರದ ಉಷ್ಣತೆ  37.5°c ಗಿಂತ (100°F) ಅಧಿಕವಾಗಿ ಕಂಡು ಬಂದರೆ ಆ ವ್ಯಕ್ತಿಗೆ ಜ್ವರ ಇದೆ ಎಂದರ್ಥ. ಆದರೆ ಮೈ, ಕೈ – ಕಾಲು ನೋವಿಲ್ಲದೆ ಬೇರೆ ಯಾವ ರೋಗದ ಲಕ್ಷಣಗಳು ಕಾಣಿಸದಿದ್ದರೆ ಅಂತಹ ಜ್ವರಕ್ಕೆ ಭಯಪಡುವ ಅವಶ್ಯಕತೆ ಇಲ್ಲ.

●  ಆದರೆ ಶರೀರವು ಆಲಸ್ಯದಿಂದ ಕೂಡಿ ತಾಪಮಾನ 39.5°F ನಷ್ಟಿದ್ದರೆ, ವೈದ್ಯರನ್ನು ಅವಶ್ಯಕತೆವಾಗಿ ಸಂಪರ್ಕಿಸಬೇಕು.

ಜ್ವರದೊಂದಿಗೆ ಬರುವ ಗುಳ್ಳೆಗಳು:

●  ಮಕ್ಕಳಿಗೆ ಮುಖ್ಯವಾಗಿ ಜ್ವರ ಬಂದಾಗ ಶರೀರದಲ್ಲಿ ಎಲ್ಲಾದರೂ ಗುಳ್ಳೆಗಳಿವೆಯೇ ಎಂದು ಪರಿಶೀಲಿಸಬೇಕು. ಆಗೇನಾದರೂ ಇದ್ದಲ್ಲಿ, ಅದು ದಡಾರ, ಸಿಡುಬು, ಟೈಫಾಯ್ಡ್ ರೋಗಗಳ ಚಿಹ್ನೆಗಳಾಗಿರಬಹುದು.

●  ಜ್ವರ ಬಂದ 3 – 4 ದಿನಗಳ ನಂತರ ಇಲ್ಲವೇ ಕೆಲವು ಬಾರಿ ವಾರದ ನಂತರ ಗುಳ್ಳೆ ಕಾಣಿಸಿಕೊಳ್ಳಬಹುದು.

●  ಗುಳ್ಳೆಗಳೊಂದಿಗೆ ಚಿಕ್ಕ ಚಿಕ್ಕ ಕಲೆಗಳು ಕಾಣಿಸಿಕೊಂಡಲ್ಲಿ ಅದು ದಡಾರದ ಮುನ್ಸೂಚನೆ.

●  ನೋವು ನಿವಾರಕ ಔಷಧಿಗಳು,

ಜ್ವರ ನಿವಾರಣ ಔಷಧಿಗಳು ಕೂಡ ಶರೀರದ ಮೇಲೆ ಇಂತಹ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು. ಹಾಗೆಯೇ ಬೇರೆ ಏನಾದರೂ ಔಷಧಿ ಸೇವನೆಯಿಂದ ಗಂಟಲಲ್ಲಿ ಹೀಗಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

 ಚಳಿ ನಡುಕದೊಂದಿಗೆ ಜ್ವರ:

●  ಮೂತ್ರನಾಳದಲ್ಲಿ ಸೋಂಕು ಇದ್ದಾಗ ಇಲ್ಲವೇ ಮಲೇರಿಯಾ ಜ್ವರ ಬಂದಾಗ ನಡುಕದೊಂದಿಗೆ ಜ್ವರ ಬರುತ್ತದೆ.

●  ಶರೀರದ ಉಷ್ಣತೆ ಹಠಾತ್ತನೇ ಜಾಸ್ತಿಯಾಗುವಂತಹ ಯಾವ ಜ್ವರದಲ್ಲಾದರೂ ಈ ಚಳಿ, ನಡುಕ ಉಂಟಾಗುವ ಸಾಧ್ಯತೆ ಇದೆ.

●  ಯಾವುದೇ ಜ್ವರದಲ್ಲಿ ವಾಂತಿಯಾಗುವ ಸಾಧ್ಯತೆ ಇದೆ. ಇಂತಹ ಜ್ವರವಿರುವ ಮಕ್ಕಳಿಗೆ ಯಾವ ಕಾರಣಕ್ಕೂ ತಿನ್ನುವಂತೆ ಬಲವಂತ ಮಾಡಕೂಡದು. ಗ್ಲುಕೋಸ್ ನೀರು, ಹಣ್ಣಿನ ರಸ, ಕಾಧಾರಿಸಿದ ನೀರು ಮೊದಲಾದವನ್ನು ಕಾಲಕಾಲಕ್ಕೆ ಕೊಡುತ್ತಿರಬೇಕು. ಕುಡಿದ ದ್ರವ ಆವಿಯಾಗಿ, ಶರೀರದ ಉಷ್ಣ ಬೆವರಿನ ರೂಪದಲ್ಲಿ ಹೊರಬಂದು ಜ್ವರವನ್ನು ತಗ್ಗಿಸಲು ಸಹಾಯಮಾಡುತ್ತದೆ.

●  ಮಕ್ಕಳು ಸೋಂಕಿನಿಂದ ಜ್ವರದಿಂದ ಬಹಳ ದಿನಗಳಿಂದ ನರಳುತ್ತಿದ್ದರೆ ಸೋಂಕುಮಾಯವಾಗಿಯೂ ಕೂಡ 99.5°F ಜ್ವರ ಕಾಡುತ್ತಿದ್ದರೆ ಭಯಪಡುವ ಅಗತ್ಯವಿಲ್ಲ ನಾರ್ಮಲ್ ಗೆ ಬರುತ್ತದೆ.

 ಜ್ವರದ ಕಾರಣಗಳು:

•       ಶೀತ, ಕೆಮ್ಮು

•       ಟಾನ್ಸಿಲ್ಸ್

•       ಬ್ರಾಂಕೈಟಿಸ್

•       ಶ್ವಾಸನಾಳಗಳ ಸೋಂಕು

•       ಕಿವಿಯಲ್ಲಿ ಸೋಂಕು

•       ಸಿಡುಬು,

•       ಗದ್ದಬಾವು

•       ಮೂತ್ರನಾಳದ ಸೋಂಕು

•       ನ್ಯೂಮೋನಿಯಾ, ಕಾಮಾಲೆ

•       ಕೀಲುವಾತ, ಕ್ಷಯ

•       ಸಂದಿವಾದ ಜ್ವರ (ರ್ಯೂಮ್ಯಾಟಿಕ್ ಫೀವರ್) ಮಲೇರಿಯಾ

•       ಟೈಫಾಯಿಡ್

ಇಂತಹ ವ್ಯಾಧಿಗಳು ಬಂದಾಗ ಜ್ವರ ಬರುತ್ತದೆ.

ಮುಂದುವರೆಯುತ್ತದೆ…