ಮನೆ ರಾಜ್ಯ ಯಾರ್ಯಾರ ಮನೇಲಿ ದುಡ್ಡು ಸಿಕ್ಕಿದ್ರೆ ಕಾಂಗ್ರೆಸ್ ಗೆ ಏನು ಸಂಬಂಧ ?: ಚಲುವರಾಯ ಸ್ವಾಮಿ ಪ್ರಶ್ನೆ

ಯಾರ್ಯಾರ ಮನೇಲಿ ದುಡ್ಡು ಸಿಕ್ಕಿದ್ರೆ ಕಾಂಗ್ರೆಸ್ ಗೆ ಏನು ಸಂಬಂಧ ?: ಚಲುವರಾಯ ಸ್ವಾಮಿ ಪ್ರಶ್ನೆ

0

ಉಡುಪಿ: ಯರ್ಯಾರ ಮನೆಲಿ ದುಡ್ಡು ಸಿಕ್ಕಿದ್ರೆ ಕಾಂಗ್ರೆಸ್‌ ಗೆ ಏನು ಸಂಬಂಧ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಪ್ರಶ್ನಿಸಿದರು.

ಶನಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ಆರೋಪಗಳಲ್ಲಿ ಹುರುಳಿಲ್ಲ. ಇವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಬಿಜೆಪಿಯವರು ಅಧಿಕಾರ ಕಳೆದುಕೊಂಡು ಕಂಗಾಲಾಗಿದ್ದಾರೆ. ಕಾಂಗ್ರೆಸ್‌ ನ ಜನಪರ ಯೋಜನೆ, ಒಳ್ಳೆಯ ಆಡಳಿತ ಅವರಿಂದ ಸಹಿಸಲು ಆಗುತ್ತಿಲ್ಲ. ಎಲ್ಲಿಯೋ ಹಣ ಸಿಕ್ಕಿದ್ದಕ್ಕೆ ಕಾಂಗ್ರೆಸ್‌ ಗೂ ಸಂಬಂಧವಿಲ್ಲ. ಇದನ್ನು ಕೇಂದ್ರದ ತನಿಖಾ ಸಂಸ್ಥೆಗಳು ನೋಡಿಕೊಳ್ಳುತ್ತವೆ. ಸಿಎಂ ರಾಜಿನಾಮೆ ಕೇಳಲು ಇವರಿಗೆ ನೈತಿಕತೆ ಇಲ್ಲ ಎಂದರು.

ಲೋಕಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್ ಸೇರಿಕೊಂಡರೆ ಏನು ಉಪಯೋಗ ಇಲ್ಲ. ಕಾಂಗ್ರೆಸ್‌ ನಿಂದ 20 ಸೀಟು ಗೆಲ್ಲುತ್ತೇವೆ ಎಂದರು.

ಬ್ರಹ್ಮಾವರ ಸಕ್ಕರೆ ಕಾರ್ಖನೆ ಹಗರಣ ಆರೋಪ ಸಮಗ್ರ ತನಿಖೆ

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಗರಣ ಆರೋಪಕ್ಕೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಲಾಗುವುದು, ಈ ಬಗ್ಗೆ ದೂರು, ಮನವಿಗಳು ಬಂದಿದ್ದು, ಸಿಎಂ ಸಿದ್ಧರಾಮಯ್ಯ ಅವರು ಇದನ್ನು ಪರಿಶೀಲಿಸಲಿದ್ದಾರೆ. ಅನಂತರ ಮುಂದಿನ ಕ್ರಮಕ್ಕೆ ಸೂಚನೆ ನೀಡಲಿದ್ದಾರೆ. ಕಾರ್ಖಾನೆ ಪುನಶ್ಚೇತನ ಬಗ್ಗೆಯೂ ಸರಕಾರ ಪರಿಶೀಲನೆ ನಡೆಸಲಿದೆ. ಕಾರ್ಖಾನೆಯಲ್ಲಿ ಅವ್ಯವಹಾರ ನಡೆದಿದ್ದಲ್ಲಿ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದರು.

ವಾರದೊಳಗೆ ಲೋಡ್ ಶೆಡ್ಡಿಂಗ್ ಗೆ ಪರಿಹಾರ

ಲೋಡ್ ಶೆಡ್ಡಿಂಗ್ ನಿಂದ ರೈತರಿಗೆ ಸಮಸ್ಯೆ ಆಗುತ್ತಿರುದು ಗಮನಕ್ಕೆ ಬಂದಿದೆ. ವಾರದ ಒಳಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೇವೆ. ಎಲ್ಲ ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿಭಾಯಿಸಲು ಸರಕಾರ ಸಿದ್ಧವಿದೆ. ರೈತರ ಹಿತವನ್ನು ಕಾಪಾಡುತ್ತೇವೆ. ಬೆಳೆ ಸಮೀಕ್ಷೆ ಶೇ.92 ರಷ್ಟು ಪೂರ್ಣಗೊಂಡಿದೆ. ಕೇಂದ್ರ ಬರ ಅಧ್ಯಯನ ತಂಡವು ವಾರದ ಒಳಗೆ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಿದೆ. ರಾಜ್ಯಕ್ಕೆ ಗರಿಷ್ಠ ಪರಿಹಾರ ಕೊಡಲು ಕೇಂದ್ರ ಸರಕಾರ ಕ್ರಮವಹಿಸಬೇಕು ಎಂದರು.