ಮನೆ ಜ್ಯೋತಿಷ್ಯ ಸೌರಮಂಡಲ ಹೇಗಾಯಿತು ?

ಸೌರಮಂಡಲ ಹೇಗಾಯಿತು ?

0

ಪ್ರಕೃತಿ ವಿಜ್ಞಾನಿಗಳು ತಮ್ಮ ಸಂಶೋಧನೆಯ ಮೂಲಕ ಈ ಸೌರಮಂಡಲದಲ್ಲಿ 300 ಕೋಟಿ ವರ್ಷಗಳ ಹಿಂದೆ ಕೇವಲ ಪ್ರಚಂಡ ಸೂರ್ಯನು ಮಾತ್ರವೇ ಇದ್ದನು.

ಕಾಲಾಂತರದಲ್ಲಿ ಬೇರೆ ಒಂದು ಸೂರ್ಯನು ಈ ಸೂರ್ಯನ ಸನಿಹದಿಂದ ಹಾದುಹೋಗುವ ಗುರುತ್ವಾಕರ್ಷಣದಿಂದಾಗಿ ಬೆಂಕಿಯಂತಹ ವಾತಾವರಣ ಉಂಟಾಗಿ ಬಿರುಗಾಳಿ ಎದ್ದಿತು. ಆ ಸೂರ್ಯನು ತನ್ನ ಕಕ್ಷೆಯಲ್ಲಿಯೇ ಹೋದನು. ಆದರೆ ಆಗ ಉಂಟಾಗಿದ್ದ ಬಿರುಗಾಳಿಯಿಂದಾಗಿ ಕೆಲವು ಪ್ರಕಾಶ ಪಿಂಡಗಳು ಸೂರ್ಯನಿಂದ ಬೇರ್ಪಟ್ಟು ಗ್ರಹಗಳಾಗಿಬಿಟ್ಟವು. ಆದರೆ ಅವುಗಳಿಗೆ ಗುರುತ್ವಾಕರ್ಷಣ ಶಕ್ತಿಯ ಕಾರಣದಿಂದಾಗಿ ಮುಖ್ಯ ಸೂರ್ಯನನ್ನು ಸುತ್ತುವರಿಯುವುದು ಅನಿವಾರ್ಯವಾಯಿತು. ಅಂತಹ ಹಲವು ತೇಜಸ್ಸುಗಳ ಪಿಂಡದಲ್ಲಿ ಭೂಮಿಯು ಸಹ ಒಂದಾಗಿರುವುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಭೂಮಿಯ ಹೊರಗಡೆಯಲ್ಲಿ ಮಂಗಳ, ಗುರು, ಶನಿ, ಯುರೇನಸ್, ನೆಪ್ಚೂನ್ ಮತ್ತು ಫೋಟೋ ಎಂಬ ಗ್ರಹಗಳಿವೆ. ಒಳಗಿನ ಕಕ್ಷೆಯಲ್ಲಿ ಶುಕ್ರ ಮತ್ತು ಬುಧ ಗ್ರಹಗಳಿವೆ. ಭೂಮಿಯು ಒಂದು ಬಾರಿ ಸೂರ್ಯನನ್ನು ಸುತ್ತುವರಿದು ಬರಲು 365 ದಿನಗಳು 6 ಗಂಟೆ ಬೇಕಾಗುವುದು. ಈ ವೇಳೆಯನ್ನು ಒಂದು ವರ್ಷವೆಂದು ನಿರ್ದಿಷ್ಟ ಪಡಿಸಿದ್ದಾರೆ.
ಹೀಗೆ ಭೂಮಿಗೆ ಭೂಮಿಯು ಧೀರ್ಘ ವರ್ತುಲಾಕಾರದಲ್ಲಿ ತಿರುಗುತ್ತಿರುವುದರಿಂದಾಗಿ, ಸೂರ್ಯನಿಗೆ ಕೆಲವೊಮ್ಮೆ ಹತ್ತಿರ ಹಾಗೂ ದೂರವಾಗುವದರಿಂದ ಭೂಮಿಯಲ್ಲಿ ಬಿಸಿಲು, ಗಾಳಿ, ಮಳೆ ಮುಂತಾದವು ಉಂಟಾಗತೊಡಗಿದವು. ಭೂಮಿಯೊಂದಿಗೆ ಉಳಿದ ಗ್ರಹಗಳು ಸಹ ತಮ್ಮ ತಮ್ಮ ಕಕ್ಷೆಯಲ್ಲಿ ಸಂಚರಿಸುತ್ತಿವೆ ಗ್ರಹ ಉಪಗ್ರಹಗಳಲ್ಲದೇ ಧೂಮಕೇತು ಮತ್ತು ಚಂದ್ರ ಇವು ಕೂಡ ಭೂಮಿಯನ್ನು ಸುತ್ತುತ್ತವೆ.
ಪ್ರಾಚೀನ ಶಾಸ್ತ್ರಗಳನುಸಾರ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಎಂಬ ನವಗ್ರಹಗಳಿವೆ. ಆದರೆ ಆಧುನಿಕ ವಿಜ್ಞಾನದಲ್ಲಿ ಭೂಮಿಯನ್ನು ಗ್ರಹವೆನ್ನದೆ ಬುಧ, ಶುಕ್ರ, ಶನಿ, ಗುರು, ಮಂಗಳ ಮತ್ತು ಯುರೇನಸ್, ನೆಪ್ಚೂನ್, ಪ್ಲೋಟೋ ಎಂದು ಗ್ರಹಗಳು ಕರೆದಿದ್ದಾರೆ. ಕೊನೆಯ ಮೂರಕ್ಕೆ ಪ್ರಜಾಪತಿ, ವರುಣ ಮತ್ತು ಯಮ ಎಂದು ಕರೆಯಲಾಗಿದೆ.

ಸೌರಮಂಡಲದಲ್ಲಿ 27 ಉಪಗ್ರಹಗಳಿವೆ ಎಂದಿದ್ದಾರೆ. ಆದರೆ ಫಲದ ದೃಷ್ಟಿಯಿಂದ ಅವುಗಳಿಗೆ ಮಹತ್ವ ನೀಡಿಲ್ಲ. ಗಣಿತ ವಿಜ್ಞಾನದಂತೆ ಏಳು ಗ್ರಹಗಳಿಗೆ ಮಹತ್ವ ನೀಡಲಾಗಿದೆ. ಹೊಸ ಜ್ಯೋತಿಷಿಗಳು ಯುರೇನಸ್ (ಹರ್ಷಲ್) ಮತ್ತು ನೆಪ್ಟ್ಯೂನ್ (ವರುಣ) ಇವುಗಳನ್ನು ಸಹ ಸೇರಿಸಿಕೊಂಡಿದ್ದಾರೆ.
ಎಲ್ಲ ಗ್ರಹಗಳಿಗೆ ಸತ್ವ, ರಜೋ ಮತ್ತು ತಮೋಗುಣವೆಂದು ಮೂರು ರೀತಿಯ ಗುಣಗಳಿವೆ. ಗುರು, ಸೂರ್ಯ, ಚಂದ್ರ ಮತ್ತು ನೆಚ್ಛೂನ್ ಸತ್ವ ಗುಣದ ಗ್ರಹಗಳು. ಶುಕ್ರ ಮತ್ತು ಬುಧ ರಜೋಗುಣದವು. ಶನಿ, ಮಂಗಳ, ಮತ್ತು ಯುರೇನಸ್ ತಮೋಗುಣದವುಗಳಾಗಿವೆ. ಸತ್ವ ಗುಣದವೂ ಉತ್ತಮ ಫಲ ನೀಡಿದರೆ, ರಜೋಗುಣದ ಗ್ರಹಗಳು ವಿನಮ್ರತೆ, ಸತ್ಯ ಪ್ರಿಯತೇ, ಉದಾರತೆ ಮತ್ತು ಸಂಪನ್ನತೆಗಳಿಗೆ ಕಾರಣವಾಗಿದೆ. ತೋಮೋಗುಣದ ಗ್ರಹಗಳಿಂದ ರೋಷ, ವಂಚನೆ, ದುಃಖ, ಕಠೋರತೆ ಮುಂತಾದ ದುಃಖದಾಯಕ ಅಂಶಗಳು ನಿರ್ಧರಿಸುವರು.
ರಜೋಗುಣದ ಗ್ರಹಗಳಿಂದ ಅನೇಕ ರೀತಿಯ ಅಂಶಗಳನ್ನು ನೋಡಲಾಗುತ್ತದೆ. ಜ್ಞಾನ, ಸ್ತ್ರೀಯರಲ್ಲಿರುವ ಆಕರ್ಷಣೆ, ಭೋಗ- ವಿಲಾಸಗಳು, ಪ್ರೇಮಿಗಳ ಸ್ವಭಾವ, ಸ್ವಾರ್ಥಸಾಧನೆ ಮುಂತಾದವುಗಳನ್ನು ರಜೋಗುಣದಿಂದ ನಿರ್ಧರಿಸಲಾಗುವುದು.