ಮನೆ ರಾಜಕೀಯ ಬಿಎಸ್ ವೈ ಹೆಸರಲ್ಲಿ ನಡೆಯೋದು ಗುಂಪುಗಾರಿಕೆ ಪ್ರದರ್ಶನ: ಕೆ.ಎಸ್ ಈಶ್ವರಪ್ಪ

ಬಿಎಸ್ ವೈ ಹೆಸರಲ್ಲಿ ನಡೆಯೋದು ಗುಂಪುಗಾರಿಕೆ ಪ್ರದರ್ಶನ: ಕೆ.ಎಸ್ ಈಶ್ವರಪ್ಪ

0

ಬಾಗಲಕೋಟೆ:  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ  ನೇತೃತ್ವದಲ್ಲಿ ಬಿಜೆಪಿ ಬಣ ಶಕ್ತಿ ಪ್ರದರ್ಶನ ಸಮಾವೇಶ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಟೀಕಿಸಿದ್ದಾರೆ.

Join Our Whatsapp Group

ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ, ಬಿಜೆಪಿಯಲ್ಲಿ ಗುಂಪುಗಾರಿಕೆ ಇದ್ರೇ ಇದು ಸರಿ ಹೋಗಬೇಕು. ಮುಂದೆ ಸರಿ ಹೊಗುತ್ತೆ, ಯಾರಾರು ಏನಬೇಕಾದ್ರೂ ಹಾರಾಡಬಹುದು. ಬಿಜೆಪಿ ಪಕ್ಷಕ್ಕಾಗಿ ತಪಸ್ಸು ಮಾಡಿ ಕಟ್ಟಿದವರಿಗೆ ಬೆಲೆ ಇದೆ. ಬಿಜೆಪಿಯಲ್ಲಿ ಗುಂಪುಗಾರಿಕೆ ನಡೆಯಲ್ಲ, ಸರಿಯಾಗಿ ಚಿವುಟು ಹಾಕ್ತಾರೆ. ಬಿಜೆಪಿ ಸಂಘಟನೆ ಉಳಿಯುತ್ತೆ, ಬಿಜೆಪಿ ಮತ್ತಷ್ಟು ಗಟ್ಟಿಯಾಗುತ್ತೆ ಎಂದರು.

ಬಿಎಸ್ ವೈ ಹೆಸರಲ್ಲಿ ನಡೆಯೋದು ಗುಂಪುಗಾರಿಕೆ ಪ್ರದರ್ಶನ. ಅದು ಶಕ್ತಿ ಪ್ರದರ್ಶನ ಅಲ್ಲ. ಯಾಕೆ ಪ್ರತಿ ವರ್ಷವೂ ಬಿಎಸ್ ವೈ ಹುಟ್ಟು ಹಬ್ಬ ಆಚರಣೆ ಇರಲಿಲ್ವಾ? ಆಗ ಯಾಕೆ ಸಮಾವೇಶ ಮಾಡಲಿಲ್ಲ. ಹೀಗೆ ಗುಂಪುಗಾರಿಕೆ ನಡೆಯುವಾಗ ಬಿಎಸ್ ವೈ ನಿಲ್ಲಿಸುವ ಕೆಲಸ ಮಾಡಬೇಕು. ರೇಣುಕಾಚಾರ್ಯ ಬಣದ ಗುಂಪು ಸಮಾವೇಶ ಮಾಡುತ್ತಿದೆ. ಅದಕ್ಕೆ ಬಿಎಸ್ ವೈ ಒಪ್ಪಿಗೆ ಇದೆ ಇಲ್ವೋ ಗೊತ್ತಿಲ್ಲ. ಗುಂಪುಗಾರಿಕೆ ಆಗೊದಕ್ಕೆ ಬಿಎಸ್ ವೈ ಒಪ್ಪಿಗೆ ಕೊಡ್ತಾರೆ ಅನ್ನೋದು ನನಗೇನು ಅನಿಸಲ್ಲ ಎಂದು ಕೆಎಸ್ ಈಶ್ವರಪ್ಪ ಹೇಳಿದರು.